ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಕ್ಕೆ ತಪ್ಪಲ್ಲ 'ಮಹಾ' ಕಂಟಕ! -ಇನ್ನೆರೆಡು ದಿನ ವರುಣನ ಕಾಟ ಖಾಯಂ!

|
Google Oneindia Kannada News

ಉತ್ತರ ಭಾರತದಲ್ಲಿ ಮಹಾಮಳೆ ಕಾಟ ಇನ್ನೂ ಎರಡು ದಿನ ತಪ್ಪಿದ್ದಲ್ಲ. ಮಹಾ ಚಂಡಮಾರುತದ ಪ್ರಭಾವಕ್ಕೆ ಗುಜರಾತ್, ಮಹಾರಾಷ್ಟ್ರ, ದಿಯು, ದಮನ್ ನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಾದರ್, ಹವೇಲಿಯಲ್ಲೂ ಮುಂದಿನ ಎರಡು ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ.

ಸೌರಾಷ್ಟ್ರ ಹಾಗೂ ಗುಜರಾತ್ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಜುನಾಘರ್, ಗಿರ್ ಸೋಮನಾಥ್, ಅಮ್ರೇಲಿ, ಭವನಗರ್, ಸೂರತ್, ಭರೂಚ್, ಅಹಮದಬಾದ್, ಬೋತಡ್, ಪೋರ್ ಬಂದರ್, ಹಾಗೂ ರಾಜ್ ಕೋಟ್ ನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಲಿದ್ದಾನೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲೂ ಎರಡು ದಿನ ವರುಣನ ಆರ್ಭಟ ಮುಂದುವರಿಯಲಿದೆ. ಮಹಾರಾಷ್ಟ್ರದ ಮಧ್ಯಭಾಗ, ಪಲ್ ಘರ್, ಥಾಣೆಯಲ್ಲೂ ಮಳೆರಾಯ ಅಟ್ಟಹಾಸ ಮೆರೆಯಲಿದ್ದಾನೆ. ನವೆಂಬರ್.೦೬ ಹಾಗೂ ೦೭ರಂದು ಈ ಪ್ರದೇಶಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ ಮತ್ತು ಗುಜರಾತ್ ಹೊರತಾಗಿ ಇಂದು ಅಂಡಮಾನ್, ನಿಕೋಬಾರ್, ಕೇರಳ ಹಾಗೂ ಮಾಹೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Heavy rainfall in Gujarat and Maharastra

ಮೀನುಗಾರಿಕೆಗೆ ಬ್ರೇಕ್!
ಮಹಾ ಚಂಡಮಾರುತದ ಪರಿಣಾಮದಿಂದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಿದೆ. ಇದರಿಂದ ೨೪ ಗಂಟೆಗಳ ಕಾಲ ಮೀನುಗಾರಿಕೆಗೆ ಬ್ರೇಕ್ ಹಾಕಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

English summary
Gujarat, Maharastra Affecte For Heavy Rain. The Indian Meteorological Department Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X