ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೇಶದ ಹಲವೆಡೆ ಮುಂದಿನ 3-4 ದಿನ ವ್ಯಾಪಕ ಮಳೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 19: ಉತ್ತರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಪೂರ್ವ-ಮಧ್ಯ ಭಾರತದಲ್ಲಿ ಮುಂದಿನ 3-4 ದಿನಗಳಲ್ಲಿ ತೀವ್ರ ಮತ್ತು ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯು ಮಧ್ಯ ಭಾರತದ ಮೇಲೆ ಕೇಂದ್ರೀಕೃತವಾಗಿದೆ. ಮುಂದಿನ 6 ಗಂಟೆಗಳಲ್ಲಿ ಒತ್ತಡವು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಇದು ಶುಕ್ರವಾರ ಸಂಜೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

"ನಾವು ಆಗಸ್ಟ್ 19 ಮತ್ತು 20 ರಂದು ಒಡಿಶಾದಲ್ಲಿ ಭಾರೀ ಮಳೆಯಾಗುತ್ತದೆದ ಎಂದು ನಿರೀಕ್ಷಿಸುತ್ತಿದ್ದೇವೆ. ಆಗಸ್ಟ್ 19, 20 ಮತ್ತು 21 ರಂದು ಛತ್ತೀಸ್‌ಗಢ ಮತ್ತು ಆಗಸ್ಟ್ 20, 21 ಮತ್ತು 22 ರಂದು ಮಧ್ಯಪ್ರದೇಶದಲ್ಲಿ ತೀವ್ರ ಮಳೆಯಾಗಲಿದೆ. ಗಂಗಾ ನದಿಯ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಲ್ಲಿಯೂ ಸ್ವಲ್ಪ ಮಳೆ ಬೀಳಬಹುದು" ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಎಂ ಮೊಹಾಪಾತ್ರ ಹೇಳಿದರು.

https://kannada.oneindia.com/news/chitradurga/hd-kumarasswamy-reaction-on-bjp-protesters-throwing-egg-on-siddaramaiah-s-car-265622.html

"ಆಗ್ನೇಯ ಪಾಕಿಸ್ತಾನದ ಮೇಲಿನ ಒತ್ತಡದ ವ್ಯವಸ್ಥೆಯಿಂದಾಗಿ, ಸೌರಾಷ್ಟ್ರ ಮತ್ತು ಕಚ್‌ನಲ್ಲಿ ಸಹ ಭಾರಿ ಮಳೆಯಾಗುವ ಸಾಧ್ಯತೆಯಿದೆ. ವಾಯುವ್ಯ ಭಾರತದಲ್ಲಿ ಭಾರಿ ಮಳೆ ಬೀಳುವುದಿಲ್ಲ" ಎಂದು ಹೇಳಿದರು.

ಈಶಾನ್ಯ ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಕರಾವಳಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಗುರುವಾರ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಅದು ಇಂದು ಕೂಡ ಮುಂದುವರಿದಿದೆ. ಇದು ಉತ್ತರ ಬಂಗಾಳ ಕೊಲ್ಲಿ, ಪಕ್ಕದ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಚಲಿಸಿ ಒತ್ತಡ ಉಂಟುಮಾಡುವ ಸಾಧ್ಯತೆಯಿದೆ. ಅದರ ನಂತರ, ಈ ಒತ್ತಡವು ಗಂಗಾನದಿ ಪಶ್ಚಿಮ ಬಂಗಾಳ, ಉತ್ತರ ಒಡಿಶಾ, ಜಾರ್ಖಂಡ್ ಮತ್ತು ಉತ್ತರ ಛತ್ತೀಸ್‌ಗಢದಾದ್ಯಂತ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ.

https://kannada.oneindia.com/news/chitradurga/hd-kumarasswamy-reaction-on-bjp-protesters-throwing-egg-on-siddaramaiah-s-car-265622.html

ಹೀಗಾಗಿ ಆಗಸ್ಟ್ 19 ರಂದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 20 ರಂದು ವಿದರ್ಭ, ಜಾರ್ಖಂಡ್ ಮತ್ತು ಒಡಿಶಾ, ಆಗಸ್ಟ್ 21 ರಂದು ಪೂರ್ವ ಮಧ್ಯಪ್ರದೇಶ ಮತ್ತು ಆಗಸ್ಟ್ 22 ರಂದು ಪಶ್ಚಿಮ ಮಧ್ಯಪ್ರದೇಶದ ಮೇಲೆ ವ್ಯಾಪಕ ಮಳೆಯಾಗಲಿದೆ.

English summary
intense and widespread rainfall during the next 3-4 days in east-central India said India Meteorological Department. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X