ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು, ಕೇರಳದಲ್ಲಿ ರೆಡ್ ಅಲರ್ಟ್: ಶಾಲೆ, ಕಾಲೇಜುಗಳಿಗೆ ರಜೆ

|
Google Oneindia Kannada News

Recommended Video

ತಮಿಳುನಾಡು ಹಾಗು ಕೇರಳದಲ್ಲಿ ರೆಡ್ ಅಲರ್ಟ್ | ಬಾರಿ ಮಳೆ ಸಾಧ್ಯತೆ | Oneindia Kannada

ತಮಿಳುನಾಡು, ಅಕ್ಟೋಬರ್ 5: ಕರ್ನಾಟಕ, ಕೇರಳದಲ್ಲಿ ಪ್ರವಾಹ ಬಂದು ಜನರು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ತಮಿಳುನಾಡು ಸೇರಿದಂತೆ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆ ಆರಂಭವಾಗಿದೆ.

ತಮಿಳುನಾಡಿನಲ್ಲಿ ಕಳೆದ ಒಂದು ದಿನದಿಂದ ಭಾರಿ ಮಳೆಯಾಗುತ್ತಿದ್ದು ಚೆನ್ನೈ, ತಿರುವಳ್ಳೂರ್ , ಕಾಂಚೀಪುರಂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು ಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು

ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅಕ್ಟೋಬರ್ 7ರವರೆಗೂ ಮಳೆ ಮುಂದುವರೆಯಲಿದೆ, ಈ ಎರಡು ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದ್ದು ಅಕ್ಟೋಬರ್ 7ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೆಟ್ಟೂರು ಜಲಾಶಯ ಸೇರಿದಂತೆ ಭರ್ತಿಯಾಗಿರುವ ಜಲಾಶಯಗಳ ಕಡೆಗೆ ತೀವ್ರ ನಿಗಾ ಇಡಲಾಗುತ್ತದೆ. ಜಲಾಶಯಗಳಿಂದ ನೀರು ಬಿಡಬೇಕೋ ಬೇಡವೋ ಎನ್ನುವ ಗೊಂದಲವಿದೆ. ವಿಪತ್ತು ನಿರ್ವಹಣೆ ಕುರಿತು 1725 ಯುವ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಅಗತ್ಯ ಬಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕರೆಸಿಕೊಳ್ಳಲಾಗುತ್ತದೆ ಎಂದು ಸತ್ಯಗೋಪಾಲ್ ತಿಳಿಸಿದ್ದಾರೆ.

ಮುಂದಿನ 36 ತಾಸುಗಳಲ್ಲಿ ಭಾರಿ ಮಳೆ ಸಾಧ್ಯತೆ

ಮುಂದಿನ 36 ತಾಸುಗಳಲ್ಲಿ ಭಾರಿ ಮಳೆ ಸಾಧ್ಯತೆ

ಮುಂದಿನ 36 ತಾಸುಗಳಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಕೆ ಸಂತೋಷ್ ತಿಳಿಸಿದ್ದಾರೆ. 21 ಸೆಂ.ಮೀಗಿಂತ ಹೆಚ್ಚು ಮಳೆಯಾಗಲಿದೆ.

ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ

ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಇಡುಕಿ, ಮಲಪ್ಪುರಂ ನಲ್ಲಿ 20 ಸೆಂ.ಮೀ ಮಳೆಯಾಗುವ ನಿರೀಕ್ಷೆ ಇದೆ.

ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವ

ಕರ್ನಾಟಕದ 12 ಜಿಲ್ಲೆಗಳಲ್ಲಿ ಭಾರಿ ಮಳೆ

ಕರ್ನಾಟಕದ 12 ಜಿಲ್ಲೆಗಳಲ್ಲಿ ಭಾರಿ ಮಳೆ

ಕರ್ನಾಟಕದ 12 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು, ಚಾಮರಾಜನಗರದಲ್ಲಿ ಭಾರಿ ಮಳೆಯಾಗಲಿದೆ.

ಪ್ರವಾಸಿಗರೇ ಎಚ್ಚರ! ಕೇರಳದಲ್ಲಿ ಮತ್ತೆ ಭಾರೀ ಮಳೆಯ ರೆಡ್ ಅಲರ್ಟ್ಪ್ರವಾಸಿಗರೇ ಎಚ್ಚರ! ಕೇರಳದಲ್ಲಿ ಮತ್ತೆ ಭಾರೀ ಮಳೆಯ ರೆಡ್ ಅಲರ್ಟ್

ಪ್ರವಾಹದ ನಂತರ ಕೊಡಗು ಬರಡಾಗಿದೆ

ಪ್ರವಾಹದ ನಂತರ ಕೊಡಗು ಬರಡಾಗಿದೆ

ಕೊಡಗಿನಲ್ಲಿ ಪ್ರವಾಹದ ಬಳಿಕ ಅಂತರ್ಜಲವೇ ಕೊಚ್ಚಿ ಹೋಗಿದ್ದು, ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಭೂಮಿ ಸಂಪೂರ್ಣವಾಗಿ ಬರಡಾಗುತ್ತಿದೆ. ಹೀಗಿರುವಾಗ ಮತ್ತೊಮ್ಮೆ ಮಳೆ ಬಂದು ಇನ್ನು ಯಾವ ರೀತಿಯ ಸಂಕಷ್ಟವನ್ನು ತಂದೊಡ್ಡಬಹುದು ಎನ್ನುವ ಆತಂಕ ಮಡುಗಟ್ಟಿದೆ.

ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ

English summary
The Tamil Nadu government has announced holiday for schools and colleges in Chennai, Kancheepuram and Thiruvallur districts on Friday, after the Indian Meteorological Department predicted very heavy rainfall in the coastal districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X