ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದಲ್ಲಿ ಭಾರಿ ಮಳೆ, ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ

|
Google Oneindia Kannada News

ಡೆಹ್ರಾಡೂನ್, ಅಕ್ಟೋಬರ್ 18: ಉತ್ತರಾಖಂಡದಲ್ಲಿ ಭಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಾರ್‌ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹವಾಮಾನ ಮೊದಲಿನಂತೆ ಆಗುವವರೆಗೂ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ ಸೇರಿದಂತೆ ಹಲವು ಕಡೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಉತ್ತರಾಖಂಡದಲ್ಲಿ ಭಾರಿ ಮಳೆಯ ಮುನ್ಸೂಚನೆ: 13 ಜಿಲ್ಲೆಗಳಿಗೆ ರೆಡ್ ಅಲರ್ಟ್ಉತ್ತರಾಖಂಡದಲ್ಲಿ ಭಾರಿ ಮಳೆಯ ಮುನ್ಸೂಚನೆ: 13 ಜಿಲ್ಲೆಗಳಿಗೆ ರೆಡ್ ಅಲರ್ಟ್

ಉತ್ತರಾಖಂಡ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್ 18 ಹಾಗೂ 19ರಂದು ಭಾರಿ ಮಳೆಯಾಗಲಿದೆ. ಕೊರೊನಾ ಸೋಂಕಿನಿಂದಾಗಿ ಬಂದ್ ಆಗಿದ್ದ ಚಾರ್ ಧಾಮ್ ಯಾತ್ರೆ ಸೆಪ್ಟೆಂಬರ್ 18ಕ್ಕೆ ಪುನರಾರಂಭಿಸಲಾಗಿತ್ತು.

Heavy Rainfall Continues In Uttarakhand; Chardham Yatra Halted Temporarily

ಹೊಸ ನಿಯಮದ ಪ್ರಕಾರ ಕೇದಾರನಾಥ, ಬದ್ರಿನಾಥ, ಯಮುನೋತ್ರಿ, ಗಂಗೋತ್ರಿಗೆ ತೆರಳುವವರು ಎರಡೂ ಲಸಿಕೆಯನ್ನು ಪಡೆದಿರಬೇಕು. ಹಾಗೂ ಕೊರೊನಾ ನೆಗೆಟಿವ್ ವರದಿ ಹೊಂದಿರಬೇಕು.

ಕೇದಾರನಾಥಕ್ಕೆ ದಿನಕ್ಕೆ 800 ಮಂದಿ, ಬದ್ರಿನಾಥಕ್ಕೆ 1200 ಮಂದಿ, ಗಂಗೋತ್ರಿಗೆ 600 ಮಂದಿ, ಯಮುನೇತ್ರಿಗೆ 400 ಮಂದಿ ಮಾತ್ರ ಭೇಟಿ ನೀಡಬಹುದು.
ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು 13 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅಕ್ಟೋಬರ್ 18ರಿಂದ 20ರವರೆಗೆ ರಾಜ್ಯದಲ್ಲಿ ಆರೆಂಜ್​​ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಸೋಮವಾರ ಚಮೋಲಿ ಮತ್ತು ಉತ್ತರಕಾಶಿಯ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.

ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬಳಿಕ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ಎಲ್ಲಾ ಪೊಲೀಸ್ ಅಧಿಕಾರಿಗಳು, ಎಸ್‌ಡಿಆರ್‌ಎಫ್ ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ಉತ್ತರಾಖಂಡ್​ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಈಗಾಗಲೇ ಪೊಲೀಸರು, ರಾಜ್ಯ ವಿಪತ್ರು ಪ್ರತಿಕ್ರಿಯಾ ಪಡೆಗಳು, ಎಲ್ಲ ಜಿಲ್ಲಾಧಿಕಾರಿಗಳಿಗೂ ಅಲರ್ಟ್​ ಆಗಿರುವಂತೆ ಸೂಚನೆ ನೀಡಿದ್ದಾರೆ. ಜನರ ಸುರಕ್ಷತೆ ಮಾಡುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದೂ ಹೇಳಿದ್ದಾರೆ.

ಇನ್ನು ಉತ್ತರಾಖಂಡ್​​ನಲ್ಲಿ ಪಾಕೃತಿಕ ವಿಪತ್ತು ಸದಾ ಉಂಟಾಗುತ್ತಿರುತ್ತದೆ. ಅತಿಯಾದ ಮಳೆ ಬಿದ್ದ ಕೂಡಲೇ ಪ್ರವಾಹ, ಭೂಕುಸಿತ, ಸಿಡಿಲುಬಡಿತ, ಮೇಘಸ್ಫೋಟದಂಥ ದೊಡ್ಡಮಟ್ಟದ ಅಪಾಯಗಳು ಎದುರಾಗುತ್ತವೆ.

ಹೀಗಾಗಿ ಅಲ್ಲಿನ ರಕ್ಷಣಾ ಪಡೆಗಳು ಸದಾ ಅಲರ್ಟ್​ ಆಗಿಯೇ ಇರುತ್ತವೆ. ಹವಾಮಾನ ಇಲಾಖೆ ನೀಡಿದ ವರದಿ ಅನ್ವಯಿಸಿ, ರಾಜ್ಯಾದ್ಯಂತ ಸುಮಾರು 29 ಎಸ್​ಡಿಆರ್​ಎಫ್​ ತಂಡಗಳು ಸಿದ್ಧವಾಗಿವೆ.

ಇಡೀ ಉತ್ತರಾಖಂಡ್​​ನಲ್ಲಿ ಒಟ್ಟು 13 ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆಯಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಇನ್ನೆರಡು ದಿನ ಎಲ್ಲಿಯೂ ಪ್ರಯಾಣ ಮಾಡಬೇಡಿ. ಆದಷ್ಟು ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಕ್ರಮ್​ ಸಿಂಗ್​ ಸಲಹೆ ನೀಡಿದ್ದಾರೆ.

ಹಾಗೇ ಇಲ್ಲಿ, ಇನ್ನು ಮೂರು ದಿನ ವಿಪರೀತ ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಸುಮಾರು 80 ಕಿಮೀ ವೇಗದಲ್ಲಿ ಬಲವಾದ ಗಾಳಿಯೂ ಬೀಸಬಹುದು ಎಂದು ಐಎಂಡಿ ಮಾಹಿತಿ ನೀಡಿದೆ.

ಉತ್ತರಾಖಂಡ್‌ನಲ್ಲಿ ಮುಂದಿನ ಎರಡು ದಿನ ಅಂದರೆ ಅಕ್ಟೋಬರ್ 20​ ರವರೆಗೆ ವಿಪರೀತ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಒಟ್ಟು 13 ಜಿಲ್ಲೆಗಳಲ್ಲಿ ಅ.19ರವರೆಗೂ ರೆಡ್​ ಅಲರ್ಟ್​ ಘೋಷಣೆ ಮಾಡಿದೆ.

ಹೀಗಾಗಿ ಬದರಿನಾಥ ಯಾತ್ರೆಯೂ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಯಾತ್ರಾರ್ಥಿಗಳನ್ನು ಪಾಂಡುಕೇಶ್ವರದಲ್ಲಿಯೇ ನಿಲ್ಲಿಸಲಾಗಿದೆ. ಸದ್ಯ ರೆಡ್​ ಅಲರ್ಟ್​ ಘೋಷಣೆಯಾಗಿದ್ದರಿಂದ ಭಕ್ತರಿಗೆ ಪ್ರಯಾಣ ಮಾಡದಂತೆ ಸೂಚಿಸಿದ್ದೇವೆ.

ಬದರಿನಾಥಕ್ಕೆ ಬರುತ್ತಿದ್ದ ಹಲವು ಯಾತ್ರಾರ್ಥಿಗಳನ್ನು ಅವರಿದ್ದಲ್ಲೇ ತಡೆಯಲಾಗಿದೆ. ಹಾಗೇ, ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ತಿಳಿಸಿದ್ದಾರೆ. ಹಾಗೇ, ಸೋಮವಾರ ಚಮೋಲಿಯಲ್ಲಿ ಎಲ್ಲ ಶಾಲೆ, ಕಾಲೇಜುಗಳಿಗೂ ರಜೆ ಘೋಷಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

English summary
With Uttarakhand continuing to receive heavy rainfall for the second consecutive day on Monday, the authorities have temporarily halted the Chardham pilgrimage and advised the devotees enroute to Kedarnath Dham, Badrinath Dham, Gangotri and Yamunotri Dham to not proceed to the Himalayan temples till the weather improves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X