ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ನಡುವೆ ಪೈಪೋಟಿ!

|
Google Oneindia Kannada News

ಶಿಲ್ಲಾಂಗ್, ಜೂ.18: ''ದೇಶದ ಈಶಾನ್ಯ ಭಾಗದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿದೆ. ಮೇಘಾಲಯದ ವ್ಯಾಪ್ತಿಯಲ್ಲಿ ದೇಶದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ, ಇಡೀ ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎನಿಸಿಕೊಂಡಿರುವ ಚಿರಾಪುಂಜಿ ಹಾಗೂ ಮೌಸಿನ್ ರಾಮ್ ಪ್ರದೇಶಗಳ ನಡುವೆ ಮತ್ತೆ ಪೈಪೋಟಿ ಶುರುವಾಗಿದೆ'' ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೇಘಾಲಯದ ಪೂರ್ವ ಖಾಸಿ ಹಿಲ್ಸ ಜಿಲ್ಲೆಯ ಮೌಸಿನ್ ರಾಮ್ ಮತ್ತು ಸೊಹ್ರಾ ಪ್ರದೇಶದಲ್ಲಿ ಕಳೆದ 24ಗಂಟೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಜನ ಜೀವನ, ಆಸ್ತಿ ಪಾಸ್ತಿ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದೆ.

ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ ನಿರೀಕ್ಷೆಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ ನಿರೀಕ್ಷೆ

ಹವಾಮಾನ ಇಲಾಖೆ ವರದಿ ಪ್ರಕಾರ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಬಾಂಗ್ಲಾದೇಶ, ಚಿರಾಪುಂಜಿ, ಸೊಹ್ರಾ ವ್ಯಾಪ್ತಿಯಲ್ಲಿ 972ಮಿ.ಮೀ. ಭಾರಿ ಮಳೆ ದಾಖಲಾಗಿದೆ. ಇದಕ್ಕೆ ಪೈಪೋಟಿ ಎಂಬಂತೆ ಮೌಸಿನ್ ರಾಮ್ ಗ್ರಾಮ ಒಂದರಲ್ಲೇ ಇದೇ ಅವಧಿಯಲ್ಲಿ ಒಟ್ಟು 1003.6ಮಿ.ಮೀ. ಮಳೆ ಸುರಿದಿದ್ದು,, ಇದು ಈವರೆಗಿನ ದೇಶದಲ್ಲೇ ಅತ್ಯಧಿಕ ಮಳೆ ದಾಖಲಾತಿ ಎನ್ನಲಾಗಿದೆ. ಈ ಮೂಲಕ ಮೌಸಿನ್ ರಾಮ್ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ ಎನ್ನಲಾಗಿದೆ.

Heavy Rain Recorded in Meghalayas Mawsynram and Sohra

ಸೋಹ್ರಾದಲ್ಲಿ ದಾಖಲೆಯ ಮಳೆ

ಸೋಹ್ರಾದಲ್ಲಿ ದಾಖಲಾದ ಮಳೆ ಮೂರನೇ ಅತ್ಯಧಿಕ ದಾಖಲೆಯ ಮಳೆ ಎಂದು ಹೇಳಲಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ, ಈ ಹಿಂದೆ 1995ರ ಜೂ. 16ರಂದು 1563ಮಿ.ಮೀ. ಮಳೆ ದಾಖಲಾಗಿದ್ದರೆ ಮರು ವರ್ಷ 1996ರಲ್ಲಿ ಜೂ.7ರಂದು 945.4ಮಿ.ಮೀ. ಮಳೆ ದಾಖಲಾಗಿತ್ತು. ಈ ಎರಡು ಬಾರಿ ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ದಾಖಲೆ ಪ್ರಮಾಣ ಮಳೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

Heavy Rain Recorded in Meghalayas Mawsynram and Sohra

ಸೋಹ್ರಾ ಪಟ್ಟಣದಲ್ಲಿ ಕಳೆದ ಮೂರು ದಿನದಲ್ಲಿ ಒಟ್ಟು 2457.2ಮಿ.ಮೀ. ನಷ್ಟು ಮಳೆ ಆಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಮೂರು ವರ್ಷ ಆಗುವ ಮಳೆಗಿಂತ ಅಧಿಕ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಶನಿವಾರವು ಚಿರಾಪುಂಜಿ, ಸೋಹ್ರಾ, ಮೌಸಿನ್ ರಾಮ್ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದೆ.

English summary
Meghalaya's Sohra, Chirapunji recorded a massive 972mm of rainfall in last 24hours, Mawsynram received totally 1003.6mm on Friday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X