ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ, ಪ್ರವಾಹ ಪರಿಸ್ಥಿತಿ

|
Google Oneindia Kannada News

Recommended Video

ನಾಗಲ್ಯಾಂಡ್ ನಲ್ಲಿ ಪ್ರವಾಹ ಭೀತಿ | Oneindia kannada

ನವದೆಹಲಿ, ಆಗಸ್ಟ್ 31: ಭಾರತದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಶಾನ್ಯ ರಾಜ್ಯಗಳ ಹಲವು ನಗರಗಳಿಗೆ ಹೈ ಅಲರ್ಟ್‌ ಘೋಷಿಸಲಾಗಿದೆ.

ನಾಗಲ್ಯಾಂಡ್‌ನಲ್ಲಿ ಭಾರಿ ಮಳೆಯಿಂದಾಗಿ ಈಗಾಗಲೇ 12 ಮಂದಿ ಜೀವ ಕಳೆದುಕೊಂಡಿದ್ದಾರೆ. ಅರುಣಾಚಲಪ್ರದೇಶ, ಚೀನಾ ದೇಶದ ಗಡಿ ಭಾಗದಲ್ಲೂ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ಥವ್ಯವಸ್ಥಗೊಂಡಿದೆ.

Heavy rain in North East state of India high alert

ಚೀನಾ ದೇಶವು ಬ್ರಹ್ಮಪುತ್ರ ನದಿಗೆ ಹೆಚ್ಚುವರಿ ನೀರು ಬಿಡುವುದಾಗಿ ಹೇಳಿರುವ ಕಾರಣ ಅರುಣಾಚಲ, ಅಸ್ಸಾಂನಲ್ಲಿ ಪ್ರವಾಹದ ಭಯ ನಿರ್ಮಾಣವಾಗಿದೆ.

ಚೀನಾದ ಸ್ಯಾಂಗ್‌ಪೋ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ಬ್ರಹ್ಮಪುತ್ರ ನದಿಗೆ ನೀರು ಬಿಡುವುದಾಗಿ ಚೀನಾ ಹೇಳಿದೆ. ಕಳೆದ 50 ವರ್ಷದಲ್ಲೇ ಹರಿದುಬರದಷ್ಟು ನೀರು ಈ ಬಾರಿ ಚೀನಾದಿಂದ ಬ್ರಹ್ಮಪುತ್ರ ನದಿಗೆ ಹರಿದುಬರಲಿದೆ.

ಕೇರಳಕ್ಕೆ ಮೋದಿ ಕೊಟ್ಟ ನೆರವಿಗಿಂತ ಜನರು ಕೊಟ್ಟ ನೆರವೇ ಹೆಚ್ಚುಕೇರಳಕ್ಕೆ ಮೋದಿ ಕೊಟ್ಟ ನೆರವಿಗಿಂತ ಜನರು ಕೊಟ್ಟ ನೆರವೇ ಹೆಚ್ಚು

ನಾಗಾಲ್ಯಾಂಡ್‌ನಲ್ಲಿ ಈವರೆಗೆ ಪ್ರವಾಹದಿಂದಾಗಿ 12 ಮಂದಿ ಪ್ರಾಣ ಕಳೆದುಕೊಂಡಿದ್ದು. 400 ಜಿಲ್ಲೆಗಳ 3000 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

Heavy rain in North East state of India high alert

ನಾಗಾಲ್ಯಾಂಡ್‌ನಲ್ಲಿ ಭೂಕುಸಿತ ಕೂಡ ಸಂಭವಿಸಿದ್ದು. ಮಳೆಯಿಂದ ಭಾರಿ ಹಾನಿಯಾಗಿರುವ ಕಾರಣ ಅಲ್ಲಿನ ಮುಖ್ಯಮಂತ್ರಿ ನೈಫಿ ರಿಯೋ ಅವರು ನೆರವಿಗಾಗಿ ಕೇಳಿಕೊಂಡಿದ್ದಾರೆ. ಈ ಕುರಿತು ಅವರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ. ಟ್ವೀಟ್‌ಗೆ ಸ್ಪಂದಿಸಿರುವ ಗೃಹ ಸಚಿವ ರಾಜನಾಥ ಸಿಂಗ್ ಅವರು ರಾಷ್ಟ್ರೀಯ ನಿರ್ವಹಣಾ ಪಡೆಯನ್ನು ಕಳುಹಿಸಿಕೊಡುವುದಾಗಿ ಹೇಳಿದೆ.

NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರNASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ

ಕೇರಳ, ಕೊಡಗು ಬಳಿಕ ಈಗ ಮಳೆ ತನ್ನ ರುದ್ರಾವತಾರವನ್ನು ಈಶಾನ್ಯ ರಾಜ್ಯಗಳಲ್ಲಿ ತೋರಿಸುತ್ತಿದೆ.

English summary
Heavy rain in North East states of India. In Nagaland state already 12 people died because of heavy rain. 3000 people were transported to safety places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X