ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಖಂಡದ ಮಹಾಮಳೆ: ಫೋನ್ ಸಿಗ್ನಲ್, ವಿದ್ಯುತ್ ಕಡಿತ

|
Google Oneindia Kannada News

ಡೆಹರಾಡೂನ್, ಅಕ್ಟೋಬರ್ 19: ಉತ್ತರಖಂಡದಲ್ಲಿ ಕಳೆದ 48 ಗಂಟೆಗಳಿಗೂ ಹೆಚ್ಚು ಕಾಲದಿಂದ ಎಡೆಬಿಡದೆ ಸುರಿದ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಮೊಬೈಲ್ ಟವರ್‌ಗಳಿಗೂ ಹಾನಿಯಾಗಿದ್ದು, ಸಿಗ್ನಲ್ ಸಿಗದೇ ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ. ಇಂದು ಭಾರೀ ಮಳೆಯಾಗುತ್ತಿದ್ದು, ಇದುವೆಗೂ 23 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಉತ್ತರಾಖಂಡ ಮಳೆ: ಜನಜೀವನ ಅಸ್ತವ್ಯಸ್ತ, ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂಉತ್ತರಾಖಂಡ ಮಳೆ: ಜನಜೀವನ ಅಸ್ತವ್ಯಸ್ತ, ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ

ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಜೊತೆ ವೈಮಾನಿಕ ಸಮೀಕ್ಷೆಯನ್ನು ನಡೆಸಿ ಮುಖ್ಯಮಂತ್ರಿಗಳು ಹಾನಿಯ ಮಾಹಿತಿ ಪಡೆದರು. ರೈತರ ಬೆಳೆಗಳು ಮತ್ತು ಹೊಲಗಳಿಗೆ ಹಾನಿಯಾಗಿರುವುದನ್ನು ವೀಕ್ಷಣೆ ಮಾಡಿದರು.

 Heavy rain in Uttarakhand: phone signal, power outage

ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಮಾತನಾಡಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. "ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರಿಗೆ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಮನೆಗಳು, ಸೇತುವೆಗಳು ಇತ್ಯಾದಿಗಳು ಹಾನಿಗೀಡಾಗಿವೆ. ಇದುವರೆಗೆ 16 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಮೂರು (ಸೇನಾ) ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುವುದು" ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಹವಾಮಾನ ಇಲಾಖೆಯು ಇಂದಿನಿಂದ ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಕಡಿಮೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಇಂದು ರಾಜ್ಯದಲ್ಲಿ 11 ಸಾವುಗಳು ವರದಿಯಾಗಿವೆ. ನೈನಿತಾಲ್‌ನ ಮುಕ್ತೇಶ್ವರ ಮತ್ತು ಖೈರ್ನಾ ಪ್ರದೇಶಗಳಲ್ಲಿ ಮನೆ ಕುಸಿತದ ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ ವ್ಯಕ್ತಿ ಉಧಮ್ ಸಿಂಗ್ ನಗರದಲ್ಲಿ ಕೊಚ್ಚಿ ಹೋಗಿದ್ದಾರೆ.

ನೇಪಾಳದ ಮೂವರು ಕಾರ್ಮಿಕರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆಂದು ಸೋಮವಾರ ವರದಿಯಾಗಿದೆ. ಇತರ 2 ಸಾವುಗಳು ಚಂಪಾವತ್ ಜಿಲ್ಲೆಯಲ್ಲಿ ಮನೆ ಕುಸಿದು ವರದಿಯಾಗಿವೆ. ನಿರ್ಮಾಣ ಹಂತದಲ್ಲಿರುವ ಸೇತುವೆ (ಚಲ್ತಿ ನದಿಯ ಮೇಲೆ) ನೀರಿನ ಮಟ್ಟ ಏರಿಕೆಯಿಂದಾಗಿ ಇವರು ಕೊಚ್ಚಿ ಹೋಗಿದ್ದಾರೆ.

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಮಜ್ಖಲಿಯಲ್ಲಿ ನಂದಾದೇವಿ, ತ್ರಿಶೂಲ್ ಮತ್ತು ಪಂಚಚೂಲಿಗಳಿಗೆ ಹಾನಿಯುಂಟಾಗಿದೆ. ಜೊತೆಗೆ ಈ ಸ್ಥಳದಲ್ಲಿ ಮೋಡ ಕವಿದ ವಾತಾವರಣವಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಮವಾರ ನಿಧಾನವಾಗಿ ಆರಂಭಗೊಂಡ ಮಳೆ ನಿಧಾನವಾಗಿ ಅಧಿಕವಾಗಿದ್ದು ಎಡಬಿಡದೆ ಸುರಿಯುತ್ತಿದೆ. ರಕ್ಷಣಾ ಪಡೆಗಳಿಗೆ ರಸ್ತೆಗಳು ನೀರಿನಿಂದ ಆವೃತವಾಗಿರುವುದರಿಂದ ಮಾರ್ಗವಿಲ್ಲದಂತಾಗಿದೆ. ಆದರೆ ಜನರಿಗೆ ಸಂಪರ್ಕಿಸಲು ರಸ್ತೆಗಳಿಲ್ಲದೆ, ಫೋನ್ ಸಿಗ್ನಲ್ ಸಿಗದೇ ಜೀವದ ಆತಂಕ ಎದುರಾಗಿದೆ.

ಫೋನ್ ಸಿಗ್ನಲ್ ಸಿಗದೆ ಜನರ ಪರದಾಟ
ಇತ್ತ ನೈನಿ ಸರೋವರ ತೀರದಿಂದ ನೀರು ಪ್ರವಾಹದಂತೆ ಹರಿಯುತ್ತಿದ್ದು ಅದರ ಪಕ್ಕದ ಮಾಲ್ ರಸ್ತೆಗಳು ಜಲಾವೃತಗೊಂಡಿವೆ. ನೈನಿತಾಲ್‌ ಪ್ರವಾಹಕ್ಕೆ ಸಿಲುಕಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸ್ಥಳದಿಂದ ಸ್ಥಳೀಯ ಟ್ಯಾಕ್ಸಿ ಚಾಲಕ ರಕ್ಷಣೆಗಾಗಿ ಕರೆ ಮಾಡಿದ್ದಾನೆ. ಆದರೆ ಅವರನ್ನು ಸಂಪರ್ಕಿಸಲು ಎಲ್ಲಾ ರಸ್ತೆಗಳು ನದಿ ನೀರಿನಿಂದ ಮುಚ್ಚಿಹೋಗಿದ್ದವು. ಫೋನ್ ಕರೆಯಲ್ಲಿ ಟ್ಯಾಕ್ಸಿ ಚಾಲಕ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಖೈರ್ನಾ ಬಳಿ ಕೆಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದರು. "ನೀವು ಇರುವಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿರಲು ಪ್ರಯತ್ನಿಸಿ" ಎಂದು ಉತ್ತರಖಂಡ ಪೊಲೀಸರು ಪ್ರತಿಕ್ರಿಯಿಸಿದ್ದರು. ಮಂಗಳವಾರ ಸಂಜೆ ವೇಳೆಗೆ ಅವರನ್ನು ರಕ್ಷಿಸುವ ಸಂದೇಶ ರವಾನಿಸಲಾಗಿದೆ.

ಮಳೆ ನೀರು ಪ್ರವಾಹದಂತೆ ಹರಿಯುತ್ತಿರುವುದರಿಂದ ರಕ್ಷಣಾ ಪಡೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ದೂರವಾಣಿ ಮತ್ತು ಅಂತರ್ಜಾಲ ಸೇವೆಗಳು ಲಭ್ಯವಿರದ ಕಡೆಗೆ ಜನ ಸಂಪರ್ಕ ಸಾಧ್ಯವಾಗುತ್ತಿಲ್ಲ. ಬದಲಿ ರಸ್ತೆ ಮಾರ್ಗವೂ ಸಿಗದೇ ರಕ್ಷಣಾ ಕಾರ್ಯಕ್ಕೂ ತೊಂದರೆಯುಂಟಾಗುತ್ತಿದೆ. ವರದಿಯಂತೆ ಆಪ್ಟಿಕಲ್ ಫೈಬರ್ ಕತ್ತರಿಸಿದ ಕಾರಣ ಸಂಪೂರ್ಣ ಅಲ್ಮೋರಾ ಜಿಲ್ಲೆಯಲ್ಲಿ ಏರ್ಟೆಲ್, ರಿಲಯನ್ಸ್-ಜಿಯೋ ಡಾಂಗಲ್ ಕೂಡ ಕೆಲಸ ಮಾಡುವಂತೆ ಕಾಣುತ್ತಿಲ್ಲ.

ವಿದ್ಯುತ್ ಕಡಿತ
ಉತ್ತರಖಂಡದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಳೆದ 12 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಂಡಿದೆ. ಕೆಲವೆಡೆ ಮರಗಳು ವಿದ್ಯತ್ ಕಂಬಗಳ ಮೇಲೆ, ವೈಯರ್ ಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಲೈನ್ ಮೆನ್ ಗಳು ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ. ಮಳೆ ನಿಲ್ಲದ ಹೊರತು ವಿದ್ಯುತ್ ನೀಡುವ ಸಾಧ್ಯತೆ ಕಡಿಮೆ ಇದೆ.

ಹಲವಾರು ಕಡೆ ಭೂಕುಸಿತ
ಉತ್ತರಖಂಡದ ಹಲವೆಡೆ ನಿರಂತರ ಮಳೆಯಿಂದಾಗಿ ರಾಣಿಖೇತ್-ಭೋವಾಲಿ-ಜಿಯೋಲಿಕೋಟೆ-ಹಲ್ದ್ವಾನಿ ಮಾರ್ಗದಲ್ಲಿ ಭೂ ಕುಸಿತದ ವರದಿಯಾಗಿವೆ. ಇವು ಬಯಲು ಪ್ರದೇಶವನ್ನು ನೈನಿತಾಲ್, ರಾಣಿಖೇತ್ ಮತ್ತು ಅಲ್ಮೋರಾ ಗಿರಿಧಾಮಗಳೊಂದಿಗೆ ಸಂಪರ್ಕಿಸುತ್ತದೆ.

ಉತ್ತರಾಖಂಡದಲ್ಲಿ ಈಗಾಗಲೇ ಆರ್ದ್ರ ಮಾನ್ಸೂನ್ ಇದೆ. ಪಾಶ್ಚಿಮಾತ್ಯ ಅಡಚಣೆಯ ಭಾಗವಾಗಿರುವ ಮಳೆ ಈಗ ಅಕಾಲಿಕವಾಗಿದೆ. ರಾಜ್ಯದ ಹೆಚ್ಚಿನ ಭಾಗಗಳು ಸಾಧಾರಣ ಮಳೆಯಾಗಿದೆ. ಸದ್ಯಕ್ಕೆ ಬುಧವಾರದ ವೇಳೆಗೆ ಮಳೆ ಸುರಿದರೆ ಮಾತ್ರ ರಸ್ತೆಗಳನ್ನು ಸ್ವಚ್ಛಗೊಳಿಸಬಹುದು ಎನ್ನಲಾಗುತ್ತಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆಯ ಬಗ್ಗೆ ಯಾವುದೇ ವರದಿಗಳಿಲ್ಲದಿದ್ದರೂ, ಪೆಟ್ರೋಲ್ ಪಂಪ್‌ಗಳನ್ನು ಶೀಘ್ರದಲ್ಲೇ ಮರುಪೂರಣಗೊಳಿಸದ ಹೊರತು ಇಂಧನ ಪೂರೈಕೆಗಳಿಗೆ ಹೊಡೆತ ಬೀಳುತ್ತದೆ.

English summary
After more than 48 hours of incessant rain, Phone signal and power cut off. This makes the authorities unable to make public contact 48
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X