ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣನ ರುದ್ರನರ್ತನಕ್ಕೆ ನಲುಗಿದ ಶ್ರೀಕೃಷ್ಣನ ಮಥುರಾ ನಗರಿ

By Nayana
|
Google Oneindia Kannada News

ಮಥುರಾ, ಜು.28: ವರುಣನ ರೌದ್ರಾವತಾರಕ್ಕೆ ಕೃಷ್ಣನ ಮಧುರಾ ನಗರಿ ನಲುಗಿ ಹೋಗಿದೆ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಕಟ್ಟಗಳು ಕುಸಿದಿವೆ.

ಎರಡು ದಿನಗಳಿಂದ ಉತ್ತರ ಪ್ರದೇಶದಲ್ಲಿ ಮಳೆ ಎತೇಚ್ಛವಾಗಿದ್ದು, 33 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಆಗ್ರಾದಲ್ಲಿ 6 ಮಂದಿ, ಮುಜಾಫರ್‌ನಗರದಲ್ಲಿ 3 ಮಂದಿ, ಕಸ್‌ಗಂಜ್‌ನಲ್ಲಿ 3, ಮೀರತ್‌ನಲ್ಲಿ 4, ಮೈನ್‌ಪುರಿನಲ್ಲಿ 4, ಬರೇಲಿಯಲ್ಲಿ 2 ಮಂದಿ ಕೇವಲ ಎರಡು ದಿನದಲ್ಲಿ ಸಾವನ್ನಪ್ಪಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಉತ್ತರ ಪ್ರದೇಶದ ರಾಜ್ಯಾದ್ಯಂತ ಹೀಗೆಯೇ ಮಳೆ ಮುಂದುವರೆಯಲಿದೆ. ಮೀರತ್‌ನಲ್ಲಿ ಭಾರಿ ಮಳೆಗೆ ಮನೆಗಳು ಕುಸಿದಿದ್ದು ಇಬ್ಬರು ಮಕ್ಕಳು ಒಳಗೊಂಡಂತೆ ಐದು ಮಂದಿ ಮೃತಪಟ್ಟಿದ್ದಾರೆ. ರಾತ್ರಿ ಸಮಯವಾದ್ದರಿಂದ ಗಾಢನಿದ್ರೆಯಲ್ಲಿದ್ದರು ಹಾಗಾಗಿ ಮನೆ ಕುಸಿಯುತ್ತಿರುವ ಕುರಿತು ಸುಳಿವು ಅವರಿಗೆ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಸಿಗಾಳಿ-ವಿಪರೀತ ಉಷ್ಣಾಂಶ: ಹೆದ್ದಾರಿಯಲ್ಲೇ ಧಗಧಗನೆ ಉರಿದ ಕಾರುಗಳು ಬಿಸಿಗಾಳಿ-ವಿಪರೀತ ಉಷ್ಣಾಂಶ: ಹೆದ್ದಾರಿಯಲ್ಲೇ ಧಗಧಗನೆ ಉರಿದ ಕಾರುಗಳು

ಮಧುರಾ, ಕಸ್‌ಗಂಜ್‌ ಪ್ರದೇಶದಲ್ಲಿ 19 ಹಾಗೂ 18 ಸೆಂ.ಮೀ ಮಳೆಯಾಗಿದೆ. ಅಲಿಗಢದಲ್ಲಿ 13 ಸೆಂ.ಮೀ ಮಳೆಯಾಗಿದೆ. 33 ಕ್ಕೂ ಹೆಚ್ಚುಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲವೊಂದು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಗುತ್ತಿಗೆಯವರೆಗೂ ನೀರು ನಿಂತಿದೆ. ಯಮುನಾ ನದಿಯು ಅಪಾಯಮಟ್ಟವನ್ನು ದಾಟಿರುವುದರಿಂದ ದೆಹಲಿ ಸರ್ಕಾರ ಕೂಡ ಹೈ ಅಲರ್ಟ್‌ ಘೋಷಿಸಿದೆ.

ಅಜ್ಜಿ ಹೆದರಬೇಡಿ, ಸುರಕ್ಷಿತವಾಗಿ ಮನೆಗೆ ತಲುಪಿಸ್ತೀನಿ

ಅಜ್ಜಿ ಹೆದರಬೇಡಿ, ಸುರಕ್ಷಿತವಾಗಿ ಮನೆಗೆ ತಲುಪಿಸ್ತೀನಿ

ಮಥುರಾದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಲ್ಲಿನ ಜನತೆ ಆತಂಕಗೊಂಡಿದ್ದು, ಸೊಂಟದವರೆಗೆ ನೀರು ನಿಂತಿದ್ದು ರಸ್ತೆಯಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅಜ್ಜಿಯೊಬ್ಬರು ಎಂಥಾ ಮಳೆ ಹುಷಾರಾಗಿ ಮನೆಗೆ ಬಿಟ್ಟುಬಿಡಪ್ಪಾ ಎಂದು ರಿಕ್ಷಾ ಚಾಲಕನ ಬಳಿ ಹೇಳುತ್ತಿರುವ ದೃಶ್ಯ ನೀವು ನೋಡಬಹುದು.

ಮೀರತ್‌ನಲ್ಲಿ ಭಾರಿ ಮಳೆಗೆ ಮನೆ ಕುಸಿತ, ಐವರು ಸಾವು

ಮೀರತ್‌ನಲ್ಲಿ ಭಾರಿ ಮಳೆಗೆ ಮನೆ ಕುಸಿತ, ಐವರು ಸಾವು

ಮೀರತ್‌ನಲ್ಲಿ ಭಾರಿ ಮಳೆಯಿಂದಾಗಿ ಮನೆ ಕುಸಿದಿದ್ದು ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನದಿಯಂತಾದ ರಸ್ತೆಗಳು, ಇಂಥಾ ಮಳೆ ನೋಡಿದ್ದೀರಾ

ನದಿಯಂತಾದ ರಸ್ತೆಗಳು, ಇಂಥಾ ಮಳೆ ನೋಡಿದ್ದೀರಾ

ಮೀರತ್‌ನಲ್ಲಿ ಸುರಿದ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ನದಿಯಂತೆ ಗೋಚರಿಸುತ್ತಿದೆ. ನದಿಯಲ್ಲಿಯೇ ಚಲಿಸುತ್ತಿದ್ದೇವೆನೋ ಎಂದು ಭಾಸವಾಗುವುದು ಖಚಿತ, ನೀರು ತುಂಬಿರುವ ರಸ್ತೆ, ಅಂಗಡಿ ಮುಗ್ಗಟ್ಟುಗಳನ್ನೊಮ್ಮೆ ನೋಡಿ.

ಮಳೆಗೆ ರಸ್ತೆಗೆ ಬಿದ್ದ ಹೋರ್ಡಿಂಗ್‌ ತೆರವು ಮಾಡುತ್ತಿರುವುದು

ಮಳೆಗೆ ರಸ್ತೆಗೆ ಬಿದ್ದ ಹೋರ್ಡಿಂಗ್‌ ತೆರವು ಮಾಡುತ್ತಿರುವುದು

ಮಳೆ, ಗಾಳಿಗೆ ಹಾರಿ ರಸ್ತೆಗೆ ಬಿದ್ದ ಹೋರ್ಡಿಂಗ್‌ನ್ನು ತೆರವುಗೊಳಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿರುವ ದೃಶ್ಯವನ್ನು ನೀವು ಇಲ್ಲಿ ನೋಡಬಹುದು.

ಮುಂಬೈ ಸಮುದ್ರದಲ್ಲಿ ಸಿಕ್ಕ ಏಳು ಅಡಿಯ ಡಾಲ್ಫಿನ್‌

ಮುಂಬೈ ಸಮುದ್ರದಲ್ಲಿ ಸಿಕ್ಕ ಏಳು ಅಡಿಯ ಡಾಲ್ಫಿನ್‌

ಮುಂಬೈನಲ್ಲಿರುವ ಗಿರ್‌ಗಾವ್‌ ಚೌಪಟ್ಟಿಯಲ್ಲಿ ಕಂಡುಬಂದ 7 ಅಡಿ ಉದ್ದದ ಡಾಲ್ಫಿನ್‌ನ್ನು ವೀಕ್ಷಿಸುತ್ತಿರುವ ಜನತೆ.

English summary
Heavy rain fall in Mathura and Meerut has hit normal life and many houses collapsed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X