ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಸುದ್ದಿ: ಕಾರ್ಮೋಡಗಳ ಕತ್ತಲಲ್ಲಿ ಮಕ್ಕಳ ಚೆಂಡಿನಾಟ!

By Nayana
|
Google Oneindia Kannada News

ನವದೆಹಲಿ, ಜೂನ್‌ 27: ದಟ್ಟ ಮೋಡಗಳ ಸಾಲು ಆಗಸವನ್ನು ತುಂಬಿದೆ, ಕಣ್ಣಾಡಿಸಿದಂತೆಲ್ಲಾ ಕಾರ್ಮೋಡಗಳೇ ಗೋಚರಿಸುತ್ತಿದೆ, ಆದರೆ ಮಕ್ಕಳಿಗೆ ಮಳೆ, ಮೋಡ, ಕತ್ತಲು ಆಟವೆಂದರೆ ಅಚ್ಚುಮೆಚ್ಚು. ತಮ್ಮ ಓದು, ಶಾಲೆ ಎಲ್ಲವನ್ನೂ ಬಿಟ್ಟು ವಿಶಾಲವಾದ ಜಾಗದಲ್ಲಿ ಆಟವಾಡಲು ಇಷ್ಟಪಡುತ್ತಾರೆ.

ಮುಂಬೈ, ದೆಹಲಿ, ಗುಜರಾತ್‌ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಗಾರು ಪ್ರವೇಶವಾದ ನಂತರ ಅಷ್ಟೇನು ಮಳೆ ಬಂದಿರಲಿಲ್ಲ ಆದರೆ ಕಳೆದ ಎರಡು ವಾರಗಳಿಂದೀಚೆಗೆ ಭಾರಿ ಮಳೆಯಾಗುತ್ತಿದೆ.

ಜೂನ್ 29 ರಿಂದ ಜುಲೈ 1ರ ಅವಧಿಯಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಗವನ್ನು ಮುಂಗಾರು ಮಾರುತಗಳು ಆವರಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಈ ಮಳೆಯ ಮೋಡದ ನಡುವೆಯೇ ಮಕ್ಕಳು ಆಟಗಳನ್ನು ಆಡಿ ಸಂತಸ ಪಡುತ್ತಿದ್ದ ದೃಶ್ಯಗಳು ಕಂಡುಬಂತು.

ಕರಾವಳಿಯಲ್ಲಿ ಬಿಡದ ಮಳೆ, ಬೆಂಗಳೂರಲ್ಲಿ ತುಂತುರು ಸಾಧ್ಯತೆಕರಾವಳಿಯಲ್ಲಿ ಬಿಡದ ಮಳೆ, ಬೆಂಗಳೂರಲ್ಲಿ ತುಂತುರು ಸಾಧ್ಯತೆ

ಮುಂಬೈಯಲ್ಲಿ ಸುರಿದ ಭಾರೀ ಕೆಲವು ಮೂಲಗಳ ಪ್ರಕಾರ 10 ಜನ ಬಲಿಯಾಗಿದ್ದಾರೆ. ಮುಂಬೈಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರೀ ಮಳೆಗೆ ನಗರ ಅರ್ಧ ಮುಳುಗಿದಂತಾಗಿದ್ದು, ರಸ್ತೆಯಲ್ಲಿ ಎಲ್ಲೆಲ್ಲೂ ನೀರು ತುಂಬಿಕೊಂಡಿದೆ. ಟ್ರಾಫಿಕ್ ಸಮಸ್ಯೆಯಿಂದ ಜನರು ಪರಿತಪಿಸುವಂತಾಗಿದೆ.

ಜೂನ್ 24, 25ರಂದು ಮುಂಬೈನಲ್ಲಿ ಸುರಿದಿದ್ದ ಭಾರಿ ಮಳೆ ಇಂದು ಸ್ವಲ್ಪ ಬಿಡುವು ನೀಡುವ ಸಾಧ್ಯತೆ ಇದ್ದು, ಉತ್ತನ ಕೊಂಕಣ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನೈಋತ್ಯ ಮಾರುತಗಳು ಉತ್ತರ ಅರಬ್ಬಿ ಸಮುದ್ರ, ಗುಜರಾತ್ ರಾಜ್ಯಗಳ ಹೆಚ್ಚಿನ ಭಾಗಮಹಾರಾಷ್ಟ್ರದ ಉಳಿದ ಭಾಗಗಳು; ಮಧ್ಯಪ್ರದೇಶ, ಛತ್ತೀಸಗಡದ ಇನ್ನಷ್ಟು ಭಾಗಗಳು; ಒಡಿಶಾ, ಪಶ್ಚಿಮ ಬಂಗಾಳದ ಉಳಿದ ಭಾಗಗಳು ಮತ್ತು ಜಾರ್ಖಂಡ್ ಹಾಗೂ ಬಿಹಾರದ ಮತ್ತಷ್ಟು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಚುರುಕಾಗಲು ಅನುಕೂಲಕರವಾದ ವಾತಾವರಣವಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ವರದಿ ತಿಳಿಸಿದೆ.

 ಆಗಸದ ಚಂದ್ರ ಮರೆಯಾದನಲ್ಲ, ಕೈಗೆ ಚೆಂಡು ದಕ್ಕಿತಲ್ಲ

ಆಗಸದ ಚಂದ್ರ ಮರೆಯಾದನಲ್ಲ, ಕೈಗೆ ಚೆಂಡು ದಕ್ಕಿತಲ್ಲ

ಆಕಾಶ ಸಂಪೂರ್ಣವಾಗಿ ಮೋಡಗಳಿಂದ ತುಂಬಿ, ಭೂಮಿಯನ್ನು ಕತ್ತಲು ಆವರಿಸಿದೆ ಇನ್ನೇನು ಮಳೆ ಬಂದು ಬೀಳುತ್ತದೆ ಎನ್ನುವ ವಾತಾವರಣ ದೆಹಲಿಯಲ್ಲಿ ನಿರ್ಮಾಣವಾಗಿದೆ ಇದ್ಯಾವುದನ್ನೂ ಲೆಕ್ಕಿಸದೆ ಬಾಲಕಿಯೊಬ್ಬಳು ಚೆಂಡಿನಾಟದಲ್ಲಿ ಮಗ್ನಳಾಗಿರುವ ದೃಶ್ಯವನ್ನು ನೋಡಬಹುದು.

 ಲಖ್ನೌ: ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು

ಲಖ್ನೌ: ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು

ಲಖ್ನೌನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಲ್ಲಿನ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಅದೇ ರಸ್ತೆಯಲ್ಲಿ ನೀರಿನ ಮಧ್ಯೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ

ಕೋಲ್ಕತ್ತದಲ್ಲಿ ಮಳೆ ತಂದ ಅವಾಂತರ

ಕೋಲ್ಕತ್ತದಲ್ಲಿ ಮಳೆ ತಂದ ಅವಾಂತರ

ದೆಹಲಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ, ಜೂನ್ 29 ರಿಂದ ಜುಲೈ 1ರ ಅವಧಿಯಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಗವನ್ನು ಮುಂಗಾರು ಮಾರುತಗಳು ಆವರಿಸಲಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತದಲ್ಲಿ ಸುರಿದ ಭಾರಿ ಮಳೆಗೆ ಸಂಚಾರ ಅಸ್ತವ್ಯವಸ್ತವಾಗಿದೆ.

 ಭಾರತದ ಅತಿ ಕಿರಿ ಗ್ರ್ಯಾಂಡ್‌ ಮಾಸ್ಟರ್‌ ಆರ್‌ ಪ್ರಜ್ಞಾನಂದ್‌ಗೆ ಅದ್ಧೂರಿ ಸ್ವಾಗತ

ಭಾರತದ ಅತಿ ಕಿರಿ ಗ್ರ್ಯಾಂಡ್‌ ಮಾಸ್ಟರ್‌ ಆರ್‌ ಪ್ರಜ್ಞಾನಂದ್‌ಗೆ ಅದ್ಧೂರಿ ಸ್ವಾಗತ

ಚೆನ್ನೈ ಮೂಲದ ಭಾರತದ ಆರ್. ಪ್ರಜ್ಞಾನಂದ ಅವರು ದೇಶದ ಕಿರಿಯ ಹಾಗೂ ವಿಶ್ವದ ಎರಡನೇ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್ ಎಂಬ ಕೀರ್ತಿ ಗಳಿಸಿದ್ದಾರೆ. ಅವರು ಚೆನ್ನೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ಕೋರಲಾಯಿತು.

English summary
Delhi, Mumbai, Gujarat and other parts of northern India have witnessed heavy rain for the last two weeks and it was expected that rain will continue till July 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X