ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲಪ್ರದೇಶದಲ್ಲಿ ಭಾರೀ ಮಳೆ, ಭೂ ಕುಸಿತಕ್ಕೆ ಕನಿಷ್ಠ 18 ಮಂದಿ ಸಾವು

|
Google Oneindia Kannada News

ಶಿಮ್ಲಾ (ಹಿಮಾಚಲಪ್ರದೇಶ), ಆಗಸ್ಟ್ 18: ಹಿಮಾಚಲಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಮಳೆಗೆ ಸಂಬಂಧಿಸಿದ ಅವಘಡದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಶಾಲೆಗಳನ್ನು ಸೋಮವಾರ ತೆರೆಯದಿರಲು ಆದೇಶ ಹೊರಡಿಸಲಾಗಿದೆ.

ಉತ್ತರಾಖಂಡದಲ್ಲಿ ಭೀಕರ ಮಳೆ: ಕನಿಷ್ಠ 18 ಮಂದಿ ನಾಪತ್ತೆ, ಕೊಚ್ಚಿಹೋದ ಇಪ್ಪತ್ತು ಮನೆಗಳುಉತ್ತರಾಖಂಡದಲ್ಲಿ ಭೀಕರ ಮಳೆ: ಕನಿಷ್ಠ 18 ಮಂದಿ ನಾಪತ್ತೆ, ಕೊಚ್ಚಿಹೋದ ಇಪ್ಪತ್ತು ಮನೆಗಳು

ಇನ್ನು ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಗುಡುಗು- ಸಿಡಿಲು ಸಹಿತ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕುಲು ಭಾಗದ ಸರಕಾರಿ- ಖಾಸಗಿಯ ಎಲ್ಲ ಶಾಲೆ- ಕಾಲೇಜುಗಳಿಗೆ ಸೋಮವಾರದಂದು ರಜಾ ಘೋಷಣೆ ಮಾಡಲಾಗಿದೆ.

Himachal pradesh

ಶಿಮ್ಲಾದಲ್ಲಿ ಎಂಟು ಮಂದಿ ಸಾವನ್ನಪ್ಪಿದರೆ, ಕುಲು, ಸಿರ್ಮೌರ್, ಸೋಲನ್ ಹಾಗೂ ಚಂಬಾದಲ್ಲಿ ತಲಾ ಇಬ್ಬರು, ಉನಾ ಮತ್ತು ಲಹೌಲ್- ಸ್ಪಿಟಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಿಮ್ಲಾದಲ್ಲಿ ಇರುವ ಆರ್ ಟಿಒ ಕಚೇರಿ ಬಳಿಯೇ ಭೂ ಕುಸಿತ ಸಂಭವಿಸಿದ ಬಗ್ಗೆ ವರದಿ ಆಗಿದ್ದು, ಆ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

English summary
Due to heavy rain and landslide at least 18 people dead in Himachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X