ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದಲ್ಲಿ ಭಾರೀ ಮಳೆ, ಜಮ್ಮುವಿನಲ್ಲಿ ಹಿಮಪಾತ

|
Google Oneindia Kannada News

ನವದೆಹಲಿ, ಮಾರ್ಚ್, 13: : ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ್ ಮತ್ತು ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ಸೇನೆಗೂ ಹಿಮಪಾತ ಅಡ್ಡಿ ಉಂಟುಮಾಡಿದೆ. ಪ್ರವಾಸಿಗಗರು ಮತ್ತು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದೆ. ಶುಕ್ರವಾರದಿಂದ ಮಳೆ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿತ್ತು. [ಕೆಆರ್‌ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!]

rain

ಮೂರು ದಿನಗಳ ಹಿಂದೆ ಹವಾಮಾನ ಇಲಾಖೆ ಮಳೆ ಮುನ್ನೆಚ್ಚರಿಕೆ ನೀಡಿತ್ತು. ಚಳಿಗಾಲ ಮುಗಿದು ಕೆಲವೆ ದಿನಗಳಲ್ಲಿ ನಿರಂತರ ಮಳೆಯಾಗುತ್ತಿರುವುದು ಪ್ರಕೃತಿ ವೈಚಿತ್ರಕ್ಕೆ ಸಾಕ್ಷಿಯಾಗಿದೆ. ರಾಜಧಾನಿ ಬೆಂಗಳೂರಲ್ಲಿ ದಿನೆ ದಿನೆ ಸೆಕೆ ಏರುತ್ತಿದ್ದು ಭಾನುವಾರ ಒಂದೆರಡು ಹನಿ ಮಳೆಯಾಗಿದೆ.

ಮಾರ್ಚ್ ತಿಂಗಳ ಆರಂಭದಲ್ಲೇ ಮಳೆಯಾಗಿರುವುದು ಈ ಬಾರಿಯ ಬೇಸಿಗೆ ಕಾಲದ ಮುಂದಿನ ಪರಿಣಾಮವನ್ನು ಇಂದೆ ವಿವರಿಸಿದೆ. ಬೆಂಗಳೂರಿನಲ್ಲಿ ಸಹ 36 ಡಿಗ್ರಿ ಉಷ್ಣತೆ ದಾಖಲಾಗಿತ್ತು.

English summary
Good rains have been lashing the Northwestern Plains for quite some time now. Most parts of the region have been receiving heavy rains accompanied with hailstorm for the past two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X