ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮುಂದಿನ 3-4 ದಿನ ದೇಶದಲ್ಲಿ ಭಾರಿ ಮಳೆಯ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 09: ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮಧ್ಯ ಭಾರತ ಮತ್ತು ಭಾರತದ ಪಶ್ಚಿಮ ಕರಾವಳಿಯಲ್ಲಿ ವ್ಯಾಪಕ ಮತ್ತು ಅತ್ಯಂತ ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ತಿಳಿಸಿದೆ.

Recommended Video

Bengaluru Rain ಆಗಸ್ಟ್ ತಿಂಗಳಿನಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲೇ ಆಗಿಲ್ಲ | OneIndia Kannada

ಭಾನುವಾರ, ಛತ್ತೀಸ್‌ಗಢ, ಕೊಂಕಣ, ಗೋವಾ, ವಿದರ್ಭ ಮತ್ತು ಒಡಿಶಾದ ಹಲವು ಭಾಗಗಳಲ್ಲಿ ಭಾರಿ ಮಳೆ ದಾಖಲಾಗಿದೆ.

ಮಂಡ್ಯ; ಕಾವೇರಿ ನದಿ ಪ್ರವಾಹದಲ್ಲೇ ಶವ ಸಾಗಿಸಿದ ಗ್ರಾಮಸ್ಥರುಮಂಡ್ಯ; ಕಾವೇರಿ ನದಿ ಪ್ರವಾಹದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

'ಮಾನ್ಸೂನ್ ಮಳೆ ಸಕ್ರಿಯವಾಗಿದೆ. ಮುಂದಿನ 4-5 ದಿನಗಳಲ್ಲಿ ಮಳೆ ಹೀಗೆಯೇ ಇರುತ್ತದೆ. ವಾಯುವ್ಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಕರಾವಳಿ ಒಡಿಶಾ, ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಮೇಲೆ ವ್ಯಾಪಕ ಮಳೆಯಾಗಲಿದೆ' ಎಂದು ತಿಳಿಸಿದೆ.

Heavy rain expected in central India over next 3-4 days

ಇದು ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತವಾಗಿ ಕೇಂದ್ರೀಕೃತಗೊಂಡು ಒಡಿಶಾ ಮತ್ತು ಛತ್ತೀಸ್‌ಗಢದಾದ್ಯಂತ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ.

ಆಗಸ್ಟ್ 11 ರವರೆಗೆ ಗಂಗಾನದಿಯ ಪಶ್ಚಿಮ ಬಂಗಾಳದ ಮೇಲೆ ಪ್ರತ್ಯೇಕವಾದ ಭಾರಿ ಮಳೆ ಮತ್ತು ಗುಡುಗು ಮಿಂಚುಗಳೊಂದಿಗೆ ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 10 ಮತ್ತು 11 ರಂದು ಜಾರ್ಖಂಡ್, ಆಗಸ್ಟ್ 12 ರವರೆಗೆ ಒಡಿಶಾ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಆಗಸ್ಟ್ 8 ಮತ್ತು 9 ರಂದು ಮಳೆಯಾಗಲಿದ್ದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಮೇಲೆ ಆಗಸ್ಟ್ 12 ರವರೆಗೆ ಭಾರಿ ಮಳೆಯಾಗಲಿದೆ.

ಆಗಸ್ಟ್ 10 ರಂದು ಒಡಿಶಾದಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 9 ರಂದು ಒಡಿಶಾದಲ್ಲಿ 20 cm ಗಿಂತ ಹೆಚ್ಚು ಮಳೆಯಾಗಲಿದೆ.

Heavy rain expected in central India over next 3-4 days

ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢದಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 12 ರವರೆಗೆ ಮಧ್ಯ ಮಹಾರಾಷ್ಟ್ರ, ಕೊಂಕಣ ಮತ್ತು ಗೋವಾದ ಘಟ್ಟ ಪ್ರದೇಶಗಳು, ಆಗಸ್ಟ್ 11 ರವರೆಗೆ ಗುಜರಾತ್ ಮತ್ತು ಆಗಸ್ಟ್ 8 ರಿಂದ 10 ರವರೆಗೆ ಮರಾಠವಾಡದ ಮೇಲೆ ಮಳೆ ಅಬ್ಬರಿಸಲಿದೆ.

ಆಗಸ್ಟ್ 9 ರಂದು ವಿದರ್ಭದಲ್ಲಿ ಅತ್ಯಂತ ಭಾರಿ ಮಳೆಯ ಸಾಧ್ಯತೆ. ಆಗಸ್ಟ್ 10 ರವರೆಗೆ ಮಧ್ಯ ಮಹಾರಾಷ್ಟ್ರದ ಕೊಂಕಣ, ಗೋವಾ ಮತ್ತು ಘಾಟ್ ಪ್ರದೇಶಗಲ್ಲಿ, ಆಗಸ್ಟ್ 9 ಮತ್ತು 10 ರಂದು ಗುಜರಾತ್ ಮತ್ತು ಆಗಸ್ಟ್ 10 ರಂದು ಸೌರಾಷ್ಟ್ರ ಮತ್ತು ಕಚ್ ಮೇಲೆ ವ್ಯಾಪಕ ಮಳೆಯಾಗುತ್ತದೆ.

ಆಗ್ನೇಯ ರಾಜಸ್ಥಾನದ ಮೇಲೆ ಆಗಸ್ಟ್ 12 ರವರೆಗೆ ಪ್ರತ್ಯೇಕವಾದ ಭಾರಿ ಮಳೆ ಮತ್ತು ಗುಡುಗು, ಮಿಂಚಿನ ಸಾಧ್ಯತೆಯಿದೆ. ಆಗಸ್ಟ್ 11 ರಂದು ಪೂರ್ವ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ, ಆಗಸ್ಟ್ 12 ರಂದು ಪಶ್ಚಿಮ ಉತ್ತರ ಪ್ರದೇಶ, ಆಗಸ್ಟ್ 10 ರಂದು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಭಾನುವಾರ ಮತ್ತು ಸೋಮವಾರದ ನಡುವೆ, ಛತ್ತೀಸ್‌ಗಢದ ಕಾಟೇಕಲ್ಯಾಣದಲ್ಲಿ 36 ಸೆಂ.ಮೀ, ಬಸ್ತಾರ್ (ಬಸ್ತಾರ್ ಜಿಲ್ಲೆ) 20 ಸೆಂ, ಬಿಜಾಪುರ (ಬಿಜಾಪುರ ಜಿಲ್ಲೆ) 20 ಸೆಂ.ಮೀ, ಛಿಂದ್‌ಗಢ (ಸುಕ್ಮಾ ಜಿಲ್ಲೆ) 18 ಸೆಂ.ಮೀ, ಉಸೂರ್ (ಬಿಜಾಪುರ ಜಿಲ್ಲೆ) 15 ಸೆಂ.ಮೀ ಮಳೆ ದಾಖಲಾಗಿದೆ.

ಲಾಂಜಾ (ರತ್ನಗಿರಿ ಜಿಲ್ಲೆ) 29cm, ಶ್ರೀವರ್ಧನ್ (ರಾಯಗಢ ಜಿಲ್ಲೆ) 25cm, ದಾಪೋಲಿ_ಅಗ್ರಿ (ರತ್ನಗಿರಿ ಜಿಲ್ಲೆ) 22cm, ಮ್ಹಾಸ್ಲಾ (ರಾಯಗಢ ಜಿಲ್ಲೆ) 21cm, ಚಿಪ್ಲುನ್ (ರತ್ನಗಿರಿ ಜಿಲ್ಲೆ) 21cm, ಗುಹಾಘರ್ (ರತ್ನಗಿರಿ ಜಿಲ್ಲೆ) 21cm ಮಳೆಯಾಗಿದೆ.

English summary
extremely heavy rain is expected to continue over central India and the west coast of India over the next 3-4 days says India Meteorological Department. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X