ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ನವದೆಹಲಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳ ವಿವರ

|
Google Oneindia Kannada News

ನವದೆಹಲಿ, ಸಪ್ಚೆಂಬರ್.23: ಉತ್ತರ ಭಾರತದಲ್ಲಿ ನವದೆಹಲಿ ಮತ್ತು ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ತತ್ತರಿಸಿ ಹೋಗಿವೆ. ಕಳೆದ ರಾತ್ರಿ ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂಬೈನಲ್ಲಿ ಸುರಿದ ಮಳೆಯಿಂದ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ರದ್ದುಗೊಳಿಸಲಾಗಿದೆ. ಠಾಣೆಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ವಶಿ ನಡುವಿನ ರೈಲ್ವೆ ಸಂಚಾರವು ಬಂದ್ ಆಗಿದೆ.

ಶಿವಮೊಗ್ಗ: ಭಾರಿ ಮಳೆಯಿಂದ ಜೋಗದ ಮನೆಗಳ ಮುಂಭಾಗ ತಡೆಗೋಡೆ ಕುಸಿತಶಿವಮೊಗ್ಗ: ಭಾರಿ ಮಳೆಯಿಂದ ಜೋಗದ ಮನೆಗಳ ಮುಂಭಾಗ ತಡೆಗೋಡೆ ಕುಸಿತ

ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು ಸಿಯಾನ್-ಕುರ್ಲಾ, ಚುನಭಟ್ಟಿ ಕುರ್ಲಾ ಮತ್ತು ಮಸೀದ್ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೂರದ ರೈಲುಗಳ ಸಂಚಾರ ಬಂದ್ ಅಥವಾ ಸಮಯ ಬದಲಾವಣೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮುಂದುವರಿಯಲಿರುವ ಮಳೆ

ಮಂಗಳವಾರ ಮುಂಬೈನಲ್ಲಿ 23.4ರಷ್ಟು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗೊರೆಗಾವ್ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲಿ ನೀರು ನಿಂತಿದ್ದು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಸೃಷ್ಟಿಸಿದ ಅವಾಂತರವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ವರುಣನ ಅಟ್ಟಹಾಸಕ್ಕೆ ತತ್ತರಿಸಿದ ಮುಂಬೈ

ಮಳೆಯ ಹೊಡೆತಕ್ಕೆ ರಾತ್ರಿ ಕಳೆದು ಬೆಳಗಾಗುವಷ್ಟರಷ್ಟೇ ಮುಂಬೈ ನಗರದ ಚಿತ್ರಣವೇ ಬದಲಾಗಿದೆ. ಮಳೆ ನೀರಿನ ನಡುವೆ ಸಿಲುಕಿದ ವಾಹನ ಸವಾರರ ಪರದಾಟ, ಮನೆಗಳಿಂದ ಹೊರ ಬರುವುದಕ್ಕೂ ಆಗದಂತೆ ದಿಗ್ಬಂಧನಕ್ಕೆ ಒಳಗಾಗಿರುವ ಜನರು, ಬೆಳ್ಳಂಬೆಳಗ್ಗೆ ಹಿಡಿದ ಜಿಟಿ ಜಿಟಿ ಮಳೆಗೆ ಜನಜೀವನ ಸ್ತಬ್ಧಗೊಂಡಿದೆ. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಬುಧವಾರ ಕೂಡಾ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಬುಧವಾರ ದೆಹಲಿಯಲ್ಲೂ ಧಾರಾಕಾರ ಮಳೆ

ಬುಧವಾರ ದೆಹಲಿಯಲ್ಲೂ ಧಾರಾಕಾರ ಮಳೆ

ಉತ್ತರ ಭಾರತದಲ್ಲಿ ವರುಣನ ಅಟ್ಟಹಾಸ ಬುಧವಾರವೂ ಮುಂದುವರಿಯಲಿದೆ. ಗೋಹಾನ್, ಜಿಂದ್, ಹಸ್ತಿನಾಪುರ್, ಚಾಂದ್ ಪುರ್, ಸಹಸ್ವಾನ್, ಬದೌನ್, ಅಮ್ರೋಹಾ, ಮೊರದಾಬಾದ್ ನಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ನವದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಕುಲದೀಪ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲೂ ಮಳೆ ಅಟ್ಟಹಾಸ

ಉತ್ತರ ಪ್ರದೇಶದಲ್ಲೂ ಮಳೆ ಅಟ್ಟಹಾಸ

ಉತ್ತರ ಪ್ರದೇಶದ ದಿಯೋಬಂದ್, ಶಾಮ್ಲಿ, ಮುಜಾಫರ್ ನಗರ್, ದಿಯೋ ಬಂದ್, ಅಸ್ಸಂದ್ ಪ್ರದೇಶಗಳಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀ ಮಳೆಯನ್ನು ಅಲ್ಪ, 15 ರಿಂದ 64.5 ಮಿ.ಮೀ ಮಳೆಯನ್ನು ಸಾಧಾರಣ ಮತ್ತು 64.5 ಮಿ.ಮೀಟರ್ ಗಿಂತ ಹೆಚ್ಚಿನ ಮಳೆಯನ್ನು ಭಾರಿ ಮಳೆ ಎಂದು ಗುರುತಿಸಲಾಗುತ್ತದೆ.

English summary
Heavy Rain Affected On People's Normal Life At Maharashtra, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X