ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಂದ 'ದೂರ'ವಿರಲು ಇಲ್ಲಿದೆ 'ಮಾರ್ಗ'ಸೂಚಿ!

|
Google Oneindia Kannada News

ನವದೆಹಲಿ, ಮೇ.28: ಜಗತ್ತನ್ನೇ ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ಹಾವಳಿಯಿಂದ ಭಾರತ ಕೂಡಾ ಹೊರತಾಗಿಲ್ಲ. ದೇಶಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ಈಗಾಗಲೇ ದೃಢಪಟ್ಟಿದೆ.

ಗುರುವಾರದ ಅಂಕಿ-ಅಂಶಗಳ ಪ್ರಕಾರ ಭಾರತಾದ್ಯಂತ 4,534ಕ್ಕೂ ಅಧಿಕ ಮಂದಿ ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 1,58,086ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈ ಪೈಕಿ 67,749 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಆದರೆ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಭಾರತೀಯರಿಗೆ ಬಿಸಿಲಿನ ಬೇಗೆ ಮತ್ತೊಂದು ಸವಾಲನ್ನು ತಂದೊಡ್ಡಿದೆ.

ಕೊರೊನಾ ವೈರಸ್ ಕೊಲ್ಲುವಂತಾ ಬಿಸಿಲು ಬರುತ್ತೆ ಎಚ್ಚರ ಎಚ್ಚರ!ಕೊರೊನಾ ವೈರಸ್ ಕೊಲ್ಲುವಂತಾ ಬಿಸಿಲು ಬರುತ್ತೆ ಎಚ್ಚರ ಎಚ್ಚರ!

ದೇಶದಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಯಾವೆಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊರೊನಾ ವೈರಸ್ ಸೋಂಕು ಹರಡದಂತೆ ಏನೆಲ್ಲಾ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಕುರಿತು ಸವಿವರ ಮಾಹಿತಿಯನ್ನು 'ಒನ್ ಇಂಡಿಯಾ ಕನ್ನಡ' ಓದುಗರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ.

ಬಿಸಿಲಿನ ಶಾಖದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ

ಬಿಸಿಲಿನ ಶಾಖದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ

- ಮನೆಯಲ್ಲೇ ಇದ್ದುಕೊಂಡು ರೇಡಿಯೋ ಕೇಳಿ, ಟಿವಿ ನೋಡಿ, ಸುದ್ದಿ ಪತ್ರಿಕೆಗಳನ್ನು ಓದಿ, ಸ್ಥಳೀಯ ವಾತಾವರಣದ ಬಗ್ಗೆ ಹಾಗೂ ಕೊವಿಡ್-19 ಕುರಿತು ಮಾಹಿತಿ ತಿಳಿದುಕೊಳ್ಳುತ್ತಿರಿ.

- ಸಾಧ್ಯವಾದಷ್ಟು ಹೆಚ್ಚು ನೀರನ್ನು ಕುಡಿಯಿರಿ. ಕಿಡ್ನಿ, ಲಿವರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ ಆರೋಗ್ಯ ಸ್ಥಿತಿ ಹದಗೆಡುವ ಮುನ್ನವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

- ಓಆರ್ಎಸ್(ಓರಲ್ ರೀಹೈಡ್ರೇಶನ್ ಸೆಲ್ಯೂಷನ್)ನ್ನು ಬಳಸಿಕೊಳ್ಳಿರಿ. ಮನೆಯಲ್ಲೇ ಸಿದ್ಧಪಡಿಸುವ ಲಸ್ಸಿ, ಗಂಜಿ, ಲಿಂಬೆಹಣ್ಣಿನ ನೀರು ಮತ್ತು ಮಜ್ಜಿಗೆಯನ್ನು ಸೇವಿಸುವುದರಿಂದ ಆಹಾರ ಜೀರ್ಣಕ್ರಿಯೆ ಸರಳವಾಗಿರುತ್ತದೆ ಎಂದು ಸಲಹೆ ನೀಡಲಾಗಿದೆ.

- ಲೈಟ್ ವೇಟ್ ಮತ್ತು ಲೈಟ್ ಕಲರ್ ಮತ್ತು ಲೂಸ್ ಆಗಿರುವಂತಾ ಕಾಟನ್ ಬಟ್ಟೆಯನ್ನು ಧರಿಸಬೇಕು.

- ಹೊರಗೆ ತೆರಳುವುದನ್ನು ಆದಷ್ಟು ಕಡಿಮೆ ಮಾಡಿ. ಅಗತ್ಯವಾಗಿ ಹೊರಗಡೆ ಸಂಚರಿಸಬೇಕಿದ್ದಲ್ಲಿ ತಲೆ ಮತ್ತು ಮುಖದ ಭಾಗಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು.

- ಬೇರೆ ವ್ಯಕ್ತಿಗಳಿಂದ ಕನಿಷ್ಠ 1 ಮೀಟರ್ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು

- ಸೋಪ್ ಮತ್ತು ನೀರಿನಿಂದ ಕೈಗಳನ್ನು ಶುದ್ಧವಾಗಿ ಆಗಾಗ ತೊಳೆದುಕೊಳ್ಳಬೇಕು. ಸೋಪ್ ಹಾಗೂ ನೀರು ಸಿಗದಿರುವ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಬಳಸಬೇಕು.

- ಪ್ರತಿಯೊಬ್ಬರೂ ಮನೆಗಳಲ್ಲಿ ಪ್ರತ್ಯೇಕ ವಸ್ತ್ರವನ್ನು ಬಳಸಬೇಕು, ಪ್ರತಿನಿತ್ಯ ಈ ವಸ್ತ್ರಗಳನ್ನು ತೊಳೆಯಬೇಕು.

ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಬೇಕು

ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಬೇಕು

- ಲಾಕ್ ಡೌನ್ ಸಂದರ್ಭಗಳಲ್ಲಿ ಮನೆಗಳಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿರಿ. ಅಗತ್ಯ ಕೆಲಸದ ಮೇಲೆ ಹೊರಗಡೆ ತೆರಳಲೇಬೇಕಿದ್ದಲ್ಲಿ ತಂಪು ವಾತಾವರಣದ ಸಂದರ್ಭಗಳಲ್ಲಿ ಮನೆಗಳಿಂದ ಹೊರಗೆ ತೆರಳಬೇಕು. ಬಿಸಿಲಿನ ಶಾಖ ಹೆಚ್ಚಾಗಿರುವ ಸಂದರ್ಭದಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಹೊರಗಡೆ ಎಲ್ಲಿಯೂ ತೆರಳದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಸೂಕ್ತ.

- ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಬಟ್ಟೆ ಧರಿಸದೇ ಯಾವುದೇ ಕಾರಣಕ್ಕೂ ಹೊರಗೆ ಸಂಚರಿಸಬೇಡಿ.

- ಮಧ್ಯಾಹ್ನದ ಬಿಸಿಲಿನ ತಾಪ ಏರುವುದಕ್ಕೂ ಮೊದಲೇ ಆಹಾರ ತಯಾರಿಸಿಕೊಳ್ಳುವುದು ಉತ್ತಮ. ಅಡುಗೆ ತಯಾರಿಸುವ ಸಂದರ್ಭದಲ್ಲಿ ಆದಷ್ಟು ಅಡುಗೆ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡುವುದು ಸೂಕ್ತ.

- ದೇಹಕ್ಕೆ ಅಜೀರ್ಣವಾಗುವ ಆಲ್ಕೋಹಾಲ್, ಟೀ, ಕಾಫಿ, ಕಾರ್ಬೊನೆಟ್ ಸಾಫ್ಟ್ ಡ್ರಿಂಕ್ಸ್ ಗಳನ್ನು ಸೇವಿಸದಿರುವುದು ಉತ್ತಮ.

- ಹೈಪ್ಟೊಟೀನ್, ಮಸಾಲೆಯುಕ್ತ, ಸ್ಪೈಸಿ ಮತ್ತು ಹಳೆಯ ಮಾಡಿಟ್ಟ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿರಿ.

- ಕೈಗಳನ್ನು ತೊಳೆದುಕೊಳ್ಳದೇ ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳುವುದು ಒಳಿತಲ್ಲ.

- ಅನಾರೋಗ್ಯ ಪೀಡಿತರಿಂದ ಅಂತರ ಕಾಯ್ದುಕೊಳ್ಳಬೇಕು.

- ನಿಮ್ಮಲ್ಲಿ ಅನಾರೋಗ್ಯ ಕಂಡು ಬಂದಿದ್ದಲ್ಲಿ ಹೊರಗಡೆ ಎಲ್ಲೂ ಪ್ರಯಾಣಿಸಬೇಡಿ.

ಉದ್ಯೋಗಿಗಳು ಕೊರೊನಾವೈರಸ್ ನಿಂದ ತಪ್ಪಿಸಿಕೊಳ್ಳಲು ಮಾಡಬೇಕೇನು?

ಉದ್ಯೋಗಿಗಳು ಕೊರೊನಾವೈರಸ್ ನಿಂದ ತಪ್ಪಿಸಿಕೊಳ್ಳಲು ಮಾಡಬೇಕೇನು?

- ಕೆಲಸದ ಕಚೇರಿಯಲ್ಲಿ ನೌಕರರಿಗೆ ಶುದ್ಧ ಮತ್ತು ತಂಪಾದ ಕುಡಿಯುವ ನೀರಿ ವ್ಯವಸ್ಥೆ ಕಲ್ಪಿಸಬೇಕು.

- ತೆರೆದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವವರ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳದಂತೆ ಎಚ್ಚರಿಕೆ ವಹಿಸಬೇಕು. ಕೃಷಿ ಪ್ರಧಾನ ಕೆಲಸಗಳನ್ನು ಮಾಡುವ ರೈತರು ಮತ್ತು ಕೂಲಿ ಕಾರ್ಮಿಕರು ಮುಖ ಮತ್ತು ತಲೆಗೆ ಬಟ್ಟೆಯನ್ನು ಸುತ್ತಿಕೊಂಡಿರಬೇಕು.

- ತಂಪಾದ ವಾತಾವರಣವಿರುವ ಸಂದರ್ಭದಲ್ಲಿ ಕೆಲಸದ ಸಮಯವನ್ನು ನಿಗದಿಗೊಳಿಸುವುದು ಸೂಕ್ತ.

- ಗರ್ಭಿಣಿಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಿರಬೇಕು.

- ಎಲ್ಲ ಸಿಬ್ಬಂದಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಕನಿಷ್ಠ 1-1.50ರಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸೋಪ್ ನಿಂದ ಕೈಗಳನ್ನು ಆಗಾಗ ಶುದ್ಧವಾಗಿ ತೊಳೆದುಕೊಳ್ಳಬೇಕು. ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳದೇ ಮುಖವನ್ನು ಮುಟ್ಟಿಕೊಳ್ಳದಿರುವುದು.

- ಸ್ಯಾನಿಟೈಸರ್ ವರ್ಕರ್ಸ್ ಕೂಡಾ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಒಮ್ಮ ಧರಿಸಿದ ಮಾಸ್ಕ್ ಗಳನ್ನು ಮತ್ತೊಮ್ಮೆ ಮುಟ್ಟಿಕೊಳ್ಳುವಂತಿಲ್ಲ. ಶುದ್ಧವಾಗಿ ಕೈಗಳನ್ನು ಸೋಪ್ ನಿಂದ ತೊಳೆದುಕೊಳ್ಳಬೇಕು.

- ಕೆಲಸವನ್ನು ಮುಗಿಸಿ ಮನೆಗೆ ತೆರಳಿದ ಬಳಿಕ ಸ್ನಾನ ಮಾಡುವುದು ಹಾಗೂ ಧರಿಸಿದ ಬಟ್ಟೆಗಳನ್ನು ತೊಳೆದು ಹಾಕುವುದು.

- ಸದಾಕಾಲ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

- ಒಬ್ಬ ನೌಕರರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅಂಥವರು ಮೇಲ್ವಿಚಾರಕರ ಗಮನಕ್ಕೆ ತರುವುದು.

ಈ ತಪ್ಪುಗಳನ್ನು ಮಾಡಿದರೂ ಅಂಟಿಕೊಳ್ಳುತ್ತೆ ಕೊರೊನಾ ವೈರಸ್!

ಈ ತಪ್ಪುಗಳನ್ನು ಮಾಡಿದರೂ ಅಂಟಿಕೊಳ್ಳುತ್ತೆ ಕೊರೊನಾ ವೈರಸ್!

- ಕೆಲಸ ಮಾಡುವ ಪ್ರದೇಶದಲ್ಲಿ ಉಗುಳುವುದು, ಧೂಮಪಾನ, ಗುಟ್ಕಾ ಅಗಿಯುವುದು ಒಳ್ಳೆಯದ್ದಲ್ಲ.

- ಕೆಲಸದ ಸ್ಥಳದಲ್ಲಿ ಪರಸ್ಪರ ಹಸ್ತಲಾಘವ ಮತ್ತು ಅಪ್ಪಿಕೊಳ್ಳುವಿಕೆ ಒಳ್ಳೆಯದ್ದಲ್ಲ.

- ಯಾವುದೇ ಕಾರಣಕ್ಕೂ ಮುಖವನ್ನು ಮುಟ್ಟಿಕೊಳ್ಳಬೇಡಿ. ಅದರಲ್ಲೂ ಮೂಗು, ಬಾಯಿ, ಕಣ್ಣುಗಳನ್ನು ಪದೇ ಪದೆ ಮುಟ್ಟಿಕೊಳ್ಳಬಾರದು.

- ಅನಾರೋಗ್ಯಕ್ಕೆ ತುತ್ತಾಗಿರುವವರ ಹತ್ತಿರದ ಸಂಪರ್ಕದಿಂದ ಆದಷ್ಟು ದೂರವಿರಿ.

- ನಿಮ್ಮಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದಲ್ಲಿ ಯಾವುದೇ ಕಾರಣಕ್ಕೂ ಕೆಲಸಕ್ಕೆ ಹೋಗಬೇಡಿ. ಬದಲಿಗೆ ಮನೆಯಲ್ಲೇ ಇರಿ.

'ಖಾಕಿ'ಗೆ ಕೊರೊನಾ ವೈರಸ್ ಅಂಟಿಕೊಳ್ಳದಿರಲು ಮಾರ್ಗಸೂಚಿ ಸಿದ್ಧ

'ಖಾಕಿ'ಗೆ ಕೊರೊನಾ ವೈರಸ್ ಅಂಟಿಕೊಳ್ಳದಿರಲು ಮಾರ್ಗಸೂಚಿ ಸಿದ್ಧ

- ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಂಪಾಗಿರುವ ಜಾಕೆಟ್ ನ್ನು ಧರಿಸುವುದು ಉತ್ತಮ.

- ನಿಮ್ಮಿಂದ ದೂರದಲ್ಲಿಯೇ ವ್ಯಕ್ತಿಗಳು/ವಾಹನಗಳನ್ನು ತಡೆದು ನಿಲ್ಲಿಸಿರಿ. ಯಾವುದೇ ರೀತಿ ವಾಹನಗಳ ದಾಖಲೆಗಳನ್ನು ಕೈಗಳಿಂದ ಮುಟ್ಟಿ ಪರಿಶೀಲನೆ ಮಾಡುವುದನ್ನು ಸಾಧ್ಯವಾದಷ್ಟು ಬಿಡಬೇಕು.

- ಸಾಧ್ಯವಾದಷ್ಟು ಮಟ್ಟಿಗೆ ಕೈಗಳನ್ನು ಸೋಪಿನಿಂದ ಆಗಾಗ ತೊಳೆಯುತ್ತಿರಿ. ಸೋಪಿನ ವ್ಯವಸ್ಥೆ ಸಿಗದಿದ್ದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಉತ್ತಮ. ತೊಳೆಯದ ಕೈಗಳಿಂದ ಯಾವುದೇ ಕಾರಣಕ್ಕೂ ಮುಖವನ್ನು ಮುಟ್ಟಿಕೊಳ್ಳುವುದು ಸೂಕ್ತವಲ್ಲ.

- ಸದಾಕಾಲ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅದೇ ರೀತಿ ನೀವು ಧರಿಸಿದ ಮಾಸ್ಕ್ ಗಳನ್ನು ಸುರಕ್ಷಿತವಾಗಿ ಬೇರೆ ಕಡೆಗಳಲ್ಲಿ ಇರಿಸುವುದು ಕೂಡಾ ಅಷ್ಟೇ ಅಗತ್ಯವಾಗಿದೆ.

- ದಾಹವಾಗದಿದ್ದರೂ ಕೂಡಾ ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು.

- ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ಕಣ್ಣಿಗೆ ಕನ್ನಡಕವನ್ನು ಧರಿಸುವುದು ಉತ್ತಮ.

- ಸಾಧ್ಯವಾದಷ್ಟು ಮಟ್ಟಿಗೆ ಯುವಕರನ್ನೇ ಸಂಚಾರಿ ನಿಯಮಗಳ ಪರಾಮರ್ಶೆಯ ಕರ್ತವ್ಯಕ್ಕೆ ನಿಯೋಜನೆಗೊಳಿಸುವುದು ಉತ್ತಮವಾಗಿದೆ.

- ಕರ್ತವ್ಯ ಮುಗಿಸಿ ಮನೆಗೆ ತೆರಳಿದ ತಕ್ಷಣವೇ ಸ್ನಾನವನ್ನು ಮಾಡಿ ಧರಿಸಿದ್ದ ಬಟ್ಟೆಗಳನ್ನು ಶುದ್ಧವಾಗಿ ತೊಳೆಯಲು ಹಾಕುವುದು.

ಕೊವಿಡ್-19 ನಿಂದ ರಕ್ಷಿಸಿಕೊಳ್ಳಲು ಸೀನಿಯರ್ ಸಿಟಿಜನ್ಸ್ ಗೆ ಸಲಹೆ

ಕೊವಿಡ್-19 ನಿಂದ ರಕ್ಷಿಸಿಕೊಳ್ಳಲು ಸೀನಿಯರ್ ಸಿಟಿಜನ್ಸ್ ಗೆ ಸಲಹೆ

- ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ಇರಿ. ಪಾರ್ಕ್, ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳಂತಾ ಜನ ನಿಬಿಡ ಪ್ರದೇಶಗಳಿಂದ ಆದಷ್ಟು ದೂರದಲ್ಲಿ ಇರಬೇಕು.

- ಮನೆಯನ್ನು ಆದಷ್ಟು ತಂಪಾಗಿರಿಸಿ. ಫ್ಯಾನ್ ಮತ್ತು ಕೂಲರ್ ಗಳನ್ನು ಬಳಸುವುದು ಉತ್ತಮ.

- ಊಟಕ್ಕೂ ಮೊದಲು ಸೋಪಿನಿಂದ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು ಸೂಕ್ತ.

ಪ್ರಮುಖವಾಗಿ ಈ ಲಕ್ಷಣಗಳು ಕಂಡು ಬಂದಲ್ಲಿ ಆದಷ್ಟು ಬೇಗ ವೈದ್ಯರ ಬಳಿಗೆ ತೆರಳಬೇಕು.

ಪ್ರಮುಖವಾಗಿ ಈ ಲಕ್ಷಣಗಳು ಕಂಡು ಬಂದಲ್ಲಿ ಆದಷ್ಟು ಬೇಗ ವೈದ್ಯರ ಬಳಿಗೆ ತೆರಳಬೇಕು.

1. ಮೈಕೈ ನೋವು ಇಲ್ಲದೇ ಹೆಚ್ಚಿನ ಜ್ವರ ಕಾಣಿಸಿಕೊಂಡಿದ್ದರೆ,

2.ಎದೆಹಾರುವಂತೆ ಆಗುವುದು, ತಲೆನೋವು, ತಲೆ ತಿರುಗುವಂತೆ ಆಗುವುದು, ವಾಕರಿಕೆ, ದಿಗ್ಬ್ರಮೆ ಉಂಟಾಗುವುದು.

3. ಉಸಿರಾಟದಲ್ಲಿ ತೊಂದರೆ ಮತ್ತು ಕಫಗಟ್ಟುವುದು.

4. ಹಸಿವು ಆಗದೇ ಇರುವುದು.

- ಹಿರಿಯ ನಾಗರಿಕರಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಾಕ್ಷಣ ಏನು ಮಾಡಬೇಕು.

- ಹಿರಿಯ ನಾಗರಿಕರಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಾಕ್ಷಣ ಏನು ಮಾಡಬೇಕು.

1. ಪ್ರತಿನಿತ್ಯ ಅವರು ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಂತೆ ನೋಡಿಕೊಳ್ಳುವುದು.

2.ಸರಿಯಾದ ಸಮಯಕ್ಕೆ ಊಟ ಮತ್ತು ನೀರು ಕುಡಿಯುವಂತೆ ನೋಡಿಕೊಳ್ಳುವುದು.

3. ಅನಾರೋಗ್ಯ ಪೀಡಿತ ಹಿರಿಯ ನಾಗರಿಕರ ಬಳಿ ತೆರಳುವ ಮೊದಲು ನೀವು ಮುಖ ಮತ್ತು ಮೂಗು ಮುಚ್ಚಿಕೊಂಡು ಹೋಗುವುದು ಸೂಕ್ತ.

4. ಅನಾರೋಗ್ಯ ಪೀಡಿತ ಹಿರಿಯ ನಾಗರಿಕರನ್ನು ಮುಟ್ಟುವ ಮೊದಲು ಮತ್ತು ನಂತರದಲ್ಲಿ ಶುದ್ಧವಾಗಿ ಕೈಗಳನ್ನು ತೊಳೆದುಕೊಳ್ಳುವುದು.

5. ಒಂದು ವೇಳೆ ನಿಮ್ಮಲ್ಲಿ ಜ್ವರ, ಕಫ, ಉಸಿರಾಟ ತೊಂದರೆಗಳಂತಾ ಸಮಸ್ಯೆಗಳು ಕಂಡು ಬಂದಲ್ಲಿ ಹಿರಿಯ ನಾಗರಿಕರ ಬಳಿಗೆ ನೀವು ತೆರಳಬೇಡಿ. ಬದಲಿಗೆ ಮನೆಯಲ್ಲಿರುವ ಹಿರಿಯ ನಾಗರಿಕರ ಬಳಿಗೆ ಮತ್ತೊಬ್ಬರಿಗೆ ತೆರಳುವುದಕ್ಕೆ ತಿಳಿಸಿ.

English summary
Heatwave Amid Coronavirus Pandemic: Indian Meteorological Department Guidelines On What Is Good And Bad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X