• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

80,000 ಕೋಟಿ ರೂ ಲೆಕ್ಕಾಚಾರ ಒಪ್ಪುವುದಿಲ್ಲ ಎಂದ ಸರ್ಕಾರ

|

ನವದೆಹಲಿ, ಸೆಪ್ಟೆಂಬರ್ 29: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ವಿತರಣೆಗೆ 80,000 ಕೋಟಿ ರೂ ಬೇಕಾಗುತ್ತದೆ ಎಂಬ ಲೆಕ್ಕಾಚಾರವನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಖರೀದಿಸಲು ಮತ್ತು ಅದನ್ನು ದೇಶದ ಪ್ರತಿಯೊಬ್ಬರಿಗೂ ವಿತರಿಸಲು 80,000 ಕೋಟಿ ರೂ. ಮೊತ್ತದ ಅವಶ್ಯಕತೆ ಇದೆ. ಮುಂದಿನ ಒಂದು ವರ್ಷದವರೆಗೆ ಭಾರತ ಸರ್ಕಾರದ ಬಳಿ ಅಷ್ಟು ಹಣ ಲಭ್ಯವಿದೆಯೇ? ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಪ್ರಶ್ನಿಸಿದ್ದರು.

ರಾಜ್ಯದಲ್ಲಿ ಇಂದು 10 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣ

ಅದಾರ್ ಪೂನಾವಾಲಾ ಅವರು ಟ್ವಿಟ್ಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, '80,೦೦೦ ಕೋಟಿ ರೂ. ಲೆಕ್ಕಾಚಾರವನ್ನು ನಾವು ಒಪ್ಪುವುದಿಲ್ಲ. ಸರ್ಕಾರವು ಲಸಿಕೆ ಪರಿಣತರ ರಾಷ್ಟ್ರೀಯ ಸಮಿತಿಯೊಂದನ್ನು ರಚಿಸಿದ್ದು, ಇದುವರೆಗೂ ಐದು ಸಭೆಗಳನ್ನು ನಡೆಸಲಾಗಿದೆ' ಎಂದು ತಿಳಿಸಿದ್ದಾರೆ.

'ಈ ಸಭೆಗಳಲ್ಲಿ ನಾವು ಕೋವಿಡ್ ಲಸಿಕೆಗಳ ಹಂಚಿಕೆ ಹಾಗೂ ಜನಸಂಖ್ಯೆಗೆ ಆದ್ಯತೆ ಮೇರೆಗೆ ಒದಗಿಸಲು ಅಗತ್ಯವಿರುವ ಹಣಕಾಸಿನ ಬಗ್ಗೆ ಚರ್ಚಿಸಿದ್ದೇವೆ. ಲಸಿಕೆಗಳಿಗೆ ಬೇಕಾದ ಮೊತ್ತದ ಬಗ್ಗೆ ಸಭೆಗಳಲ್ಲಿ ನಾವು ಸಮಾಲೋಚನೆ ನಡೆಸಿ ಲೆಕ್ಕಾಚಾರ ಹಾಕಿದ್ದೇವೆ. ಪ್ರಸ್ತುತ ಅಷ್ಟು ಹಣ ಸರ್ಕಾರದ ಬಳಿ ಇದೆ' ಎಂದು ಅವರು ಹೇಳಿದ್ದಾರೆ.

ಪ್ರಾಣಿ ಮಾಂಸ ಸೇವಿಸಿದವರಿಗೆ ಅಂಟುತ್ತೆ ಕಾಂಗೋ ವೈರಸ್!

ಈ ಪ್ರಶ್ನೆ ಕೇಳಲು ಕಾರಣವಿದೆ. ಏಕೆಂದರೆ ಭಾರತ ಮತ್ತು ವಿದೇಶಗಳಲ್ಲಿನ ಲಸಿಕೆ ಉತ್ಪಾದಕರಿಗೆ ನಮ್ಮ ದೇಶದ ಖರೀದಿ ಹಾಗೂ ಹಂಚಿಕೆಯ ಅಗತ್ಯತೆಗಳ ಬಗ್ಗೆ ಯೋಜನೆ ರೂಪಿಸಿ ಹಾಗೂ ಮಾರ್ಗದರ್ಶನ ನೀಡಬೇಕಿದೆ ಎಂದು ಅದಾರ್ ಪೂನಾವಾಲಾ ಹೇಳಿದ್ದರು.

   ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು | Oneindia Kannada

   English summary
   Health Ministry said that, government does not agree with the calculation of Rs 80,000 crore for distribution of Covid-19 vaccine in India.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X