ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ ಗುಜರಾತ್ ನ ಹನ್ನೆರಡನೇ ತರಗತಿ ಟಾಪರ್

|
Google Oneindia Kannada News

ಅಹ್ಮದಾಬಾದ್, ಜೂನ್ 7: ಗುಜರಾತ್ ರಾಜ್ಯದ ಅಹ್ಮದಾಬಾದ್ ನ ಹದಿನೇಳು ವರ್ಷದ ವರ್ಷಿಲ್ ಶಾ ಹನ್ನೆರಡನೇ ತರಗತಿಯಲ್ಲಿ ಶೇ 99.9ರಷ್ಟು ಅಂಕ ಪಡೆದಿದ್ದು, ಇದೀಗ ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ.

ವರ್ಷಿಲ್ ಶಾರ ತಂದೆ ಸರಕಾರಿ ಉದ್ಯೋಗಿ. ಎರಡು ವಾರದ ಹಿಂದೆ ಗುಜರಾತ್ ನಲ್ಲಿ ಪ್ರಕಟವಾದ ಹನ್ನೆರಡನೇ ತರಗತಿ ಫಲಿತಾಂಶದಲ್ಲಿ ಟಾಪರ್ ಆಗಿದ್ದಾರೆ. "ನಾನು ಹೆಚ್ಚಿನ ಅಂಕವೇ ಪಡೆದಿರಬಹುದು. ಆದರೆ ಎಲ್ಲರೂ ಸಾಗುವ ಹಾದಿಯಲ್ಲೇ ಸಾಗುವುದು ಇಷ್ಟವಿಲ್ಲ" ಎಂದಿದ್ದಾರೆ.

He topped class 12th exam in Gujarat; now to become a monk

ನನ್ನ ಗುರಿ ಒಳಗಿನ ಶಾಂತಿ ಹಾಗೂ ಅಧ್ಯಾತ್ಮದ ಸಂತೋಷ. ಇದು ನನಗೆ ಸಿಗುವುದು ಎಲ್ಲವನ್ನೂ ತೊರೆದಾಗ ಹಾಗೂ ಜೈನ ಸನ್ಯಾಸಿಯಾದಾಗ ಎಂದು ವರ್ಷಿಲ್ ಹೇಳಿದ್ದಾರೆ. ಅವರ ಕುಟುಂಬದವರ ಬೆಂಬಲವೂ ಇದೆ. ಗುರುವಾರ ಅಂದರೆ ಜೂನ್ ಎಂಟರಂದು ವರ್ಷಿಲ್ ದೀಕ್ಷೆ ಸ್ವೀಕರಿಸಲಿದ್ದಾರೆ.

ಮಾನವನ ಆಸೆಗೆ ಕೊನೆ ಎಂಬುದೇ ಇಲ್ಲ. ಸಾವಿರ ಇರುವವರು ಲಕ್ಷಕ್ಕೆ, ಲಕ್ಷ ಇರುವವರು ಕೋಟಿಗಾಗಿ ಆಸೆ ಪಡುತ್ತಾರೆ. ಆಸೆಗೆ ಕೊನೆಯೇ ಇಲ್ಲ. ಜೈನ ಸನ್ಯಾಸಿಗಳ ಬಳಿ ಏನೂ ಇರುವುದಿಲ್ಲ. ಆದರೆ ಮನಸ್ಸಿನ ಒಳಗೆ ಸಂತೋಷ ಇರುತ್ತದೆ ಮತ್ತು ಜ್ಞಾನ ಇರುತ್ತದೆ ಎಂದು ವರ್ಷಿಲ್ ಹೇಳಿದ್ದಾರೆ.

English summary
Seventeen-year-old Varshil Shah, an Ahmedabad resident, scored 99.99 percentile in the class 12th examination in Gujarat. Now he is set to become a Jain monk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X