ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಧ್ರಾ ತೀರ್ಪು; 19 ವರ್ಷ ನೋವು ಅನುಭವಿಸಿದ್ದಾರೆ ಎಂದ ಅಮಿತ್‌ ಶಾ

|
Google Oneindia Kannada News

ನವದೆಹಲಿ, ಜೂ. 25: 2002ರ ಫೆಬ್ರವರಿ 27ಎಂದು ಗುಜರಾತ್‌ನ ಗೋಧ್ರಾದಲ್ಲಿ ನಡೆದ ಗಲಭೆ ದೊಡ್ಡ ಪಿತೂರಿ ಎಂದು ಆರೋಪಿಸಿ ತನಿಖೆ ನಡೆಸಲು ಕೋರಿದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶ್ಲಾಘಿಸಿದ್ದಾರೆ.

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ 60 ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾತನಾಡಿ, ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ವಿರುದ್ಧ ಆರೋಪಗಳನ್ನು ಹರಡಲು 'ವಿರೋಧ ಪಕ್ಷಗಳ ಮೂವರು, ಸೈದ್ಧಾಂತಿಕವಾಗಿ ಪ್ರೇರೇಪಿತ ಅಂಶಗಳು ಮತ್ತು ಕೆಲವು ಎನ್‌ಜಿಒಗಳನ್ನು ಶಾ ಹೊಣೆಗಾರರನ್ನಾಗಿಸಿದರು.

Breaking: ಗುಜರಾತ್ ಗಲಭೆ 2002: ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾBreaking: ಗುಜರಾತ್ ಗಲಭೆ 2002: ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾ

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ಒಬ್ಬ ಪ್ರಬುದ್ಧ ನಾಯಕನು 18- 19 ವರ್ಷಗಳ ಸುದೀರ್ಘ ಹೋರಾಟವನ್ನು ಒಂದು ಮಾತನ್ನೂ ಹೇಳದೆ ಎಲ್ಲಾ ನೋವನ್ನು ಧೈರ್ಯದಿಂದ ಎದುರಿಸಿದ್ದಾರೆ. ನಾನು ಇದನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಒಬ್ಬ ಬಲವಾದ ಇಚ್ಛಾಶಕ್ತಿಯ ವ್ಯಕ್ತಿಯಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದರು.

ಗುಜರಾತ್ ಗಲಭೆ 2002 Timeline: ಮೋದಿ v/s ಜಾಫ್ರಿ ಕಾನೂನು ಸಮರ, ಹತ್ಯಾಕಾಂಡ - ಕ್ಲೀನ್ ಚಿಟ್ ಗುಜರಾತ್ ಗಲಭೆ 2002 Timeline: ಮೋದಿ v/s ಜಾಫ್ರಿ ಕಾನೂನು ಸಮರ, ಹತ್ಯಾಕಾಂಡ - ಕ್ಲೀನ್ ಚಿಟ್

ಎಲ್ಲರೂ ಸುಳ್ಳನ್ನು ಸತ್ಯವೆಂದು ನಂಬಿದರು

ಎಲ್ಲರೂ ಸುಳ್ಳನ್ನು ಸತ್ಯವೆಂದು ನಂಬಿದರು

ಬಿಜೆಪಿಯ ರಾಜಕೀಯ ಪ್ರತಿಸ್ಪರ್ಧಿಗಳ ಮೇಲಾಟ ಹಾಗೂ ರಾಜಕೀಯ ಪ್ರೇರಿತ ಪತ್ರಕರ್ತರು ಮತ್ತು ಕೆಲವು ಎನ್‌ಜಿಒಗಳು ಆರೋಪಗಳನ್ನು ಅವರ ವಿರುದ್ಧ ಪ್ರಚಾರ ಮಾಡಿವೆ. ಅವರು ಅಧಿಕಾರವನ್ನು ಆಗ ಹೊಂದಿದ್ದರು. ಆದ್ದರಿಂದ ಎಲ್ಲರೂ ಸುಳ್ಳನ್ನು ಸತ್ಯವೆಂದು ನಂಬಲು ಪ್ರಾರಂಭಿಸಿದರು ಎಂದು ಅಮಿತ್‌ ಶಾ ಹೇಳಿದರು.

ಬೇರೊಬ್ಬರ ಸೂಚನೆಗಳ ಮೇಲೆ ಕೆಲಸ

ಬೇರೊಬ್ಬರ ಸೂಚನೆಗಳ ಮೇಲೆ ಕೆಲಸ

ಸಂದರ್ಶನದ ವೇಳೆ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ನಾಯಕ, ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಬಗ್ಗೆಯೂ ಶಾ ಮಾತನಾಡಿ, ಇಂದು ಎಸ್‌.ಸಿ. ಜಾಕಿಯಾ ಜಾಫ್ರಿ ಬೇರೊಬ್ಬರ ಸೂಚನೆಗಳ ಮೇಲೆ ಕೆಲಸ ಮಾಡಿದ್ದಾರೆ. ಎನ್‌ಜಿಒ ಹಲವಾರು ಅಫಿಡವಿಟ್‌ಗಳಿಗೆ ಸಹಿ ಹಾಕಿಸಿದೆ. ಇದು ಅವರಿಗೆ ತಿಳಿದಿರಲಿಲ್ಲ. ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲರಾದ ತೀಸ್ತಾ ಸೆಟಲ್ವಾಡ್ ಅವರನ್ನು ಟೀಕಿಸಿದ ಶಾ, ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ಇದನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆ ಸಮಯದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಅದು ಎನ್‌ಜಿಒಗೆ ಸಹಾಯ ಮಾಡಿತು ಎಂದು ಗೃಹ ಸಚಿವರು ಹೇಳಿದರು, ದೂಷಿಸಿದರು.

ಮೋದಿ ಜೀ ಈ ನಾಟಕ ಮಾಡಲಿಲ್ಲ

ಮೋದಿ ಜೀ ಈ ನಾಟಕ ಮಾಡಲಿಲ್ಲ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅದರ ನಾಯಕ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿದಾಗ ಪ್ರತಿಭಟಿಸಿದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಶಾ, ನರೇಂದ್ರ ಮೋದಿ ಎಸ್‌ಐಟಿ ಮುಂದೆ ಹಾಜರಾಗುವಾಗ ಈ ನಾಟಕ ಮಾಡಲಿಲ್ಲ. ನನ್ನ ಬೆಂಬಲಕ್ಕೆ ಬನ್ನಿ ಎಂದು ಶಾಸಕರು, ಸಂಸದರನ್ನು ಕರೆದು ಧರಣಿ ನಡೆಸಲಿಲ್ಲ. ಅವರನ್ನು ಎಸ್‌ಐಟಿ ಪ್ರಶ್ನಿಸಲು ಬಯಸಿದರೆ, ಅವರೇ ಸಹಕರಿಸಲು ಸಿದ್ಧ. ಇನ್ನೂ ಏಕೆ ಪ್ರತಿಭಟನೆ? ಎಂದು ಅವರು ಹೇಳಿದರು.

 56 ಯಾತ್ರಾರ್ಥಿಗಳು ಸಜಿವ ದಹನ

56 ಯಾತ್ರಾರ್ಥಿಗಳು ಸಜಿವ ದಹನ

2002 ಫ್ರೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಆಯೋಧ್ಯೆಯಿಂದ ವಾಪಸ್‌ ಆಗುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಎಸ್‌ 6 ಕೋಚ್‌ನಲ್ಲಿದ್ದ 56 ಯಾತ್ರಾರ್ಥಿಗಳು ಸಜೀವ ದಹನವಾಗಿದ್ದರು. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಗುಜರಾತ್‌ನ ಹಲವು ಪ್ರದೇಶಗಳಲ್ಲಿ ಕೋಮು ಗಲಭೆ ನೆಡೆದು 1000ಕ್ಕೂ ಅಧಿಕ ಜನರು ಸಾವನಪ್ಪಿದ್ದರು. ಫೆ. 28ರಂದು ಗೋಧ್ರಾದಲ್ಲಿ ನಡೆದ ಹತ್ಯಾಕಾಂಡದಲ್ಲಿ ಜಾಕಿಯಾ ಜ್ರಾಫ್ರಿ ಪತಿ ಹಾಗೂ ಕಾಂಗ್ರೆಸ್‌ ಸಂಸದ ಇಶಾನ್ ಜಾಫ್ರಿ ಸೇರಿದಂತೆ 65 ಜನರು ಸಜಿವ ದಹನವಾಗಿದ್ದರು. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಜನರ ಬಂಧನವಾಗಿತ್ತು. ಹತ್ಯಾಕಾಂಡ ಸಂಬಂಧ ತನಿಖೆಗೆ ಗುಜರಾತ್‌ ಸರ್ಕಾರದಿಂದ ನಾನಾವತಿ ಶಾ ಕಮಿಷನ್‌ ಕೂಡ ನೇಮಕ ಮಾಡಲಾಗಿತ್ತು.

English summary
Union Home Minister Amit Shah reaction on Supreme Court's judgment on reject a plea to investigate a major conspiracy in Godhra, Gujarat, riits on February 27, 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X