ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HCL ಟೆಕ್ಕಿಗಳಿಂದ 3 ಸಾವಿರ ಕೋಟಿ ದಾನ

By Srinath
|
Google Oneindia Kannada News

ನವದೆಹಲಿ, ನ.6:ಎಚ್ ಸಿಎಲ್ ಕಾರ್ಪೊರೇಶನ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಶಿವ್ ನಡಾರ್ ಅವರು ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ದಾನ ನೀಡಿದ್ದಾರೆ.

ಶಿವ್ ನಡಾರ್ ಅವರು ಫೌಂಡೇಶನ್ ಮೂಲಕ ಮುಂದಿನ 5 ವರ್ಷಗಳ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬರೋಬ್ಬರಿ 3,000 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. Shiv Nadar Foundation ಈಗಾಗಲೇ ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಲ್ಲೂ ಈ ಹಣ ವಿನಿಯೋಗಿಸುವುದಾಗಿ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

hcl-shiv-nadar-foundation-commits-rs-3000-cr-for-education

1994ರಲ್ಲಿ ಸ್ಥಾಪಿತಸವಾದ Shiv Nadar Foundation, 2013ರ ಮಾರ್ಚ್ ವರೆಗೂ 1,800 ಕೋಟಿ ಅನುದಾನ ಪಡೆದಿದೆ. 'ಬದಲಾವಣೆಯ ಶಿಕ್ಷಣಕ್ಕಾಗಿ' ಈ ಹಣ ವಿನಿಯೋಗಿಸಲಿದ್ದು, ಭವಿಷ್ಯದ ನಾಯಕರುಗಳನ್ನು ರೂಪಿಸುವುದು ಇದರ ಮಹತ್ತರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ VidyaGyan ಶಾಲೆಗಳು, ತಮಿಳುನಾಡಿನಲ್ಲಿ SSN ವಿದ್ಯಾ ಸಂಸ್ಥೆಗಳು ಹಾಗೂ ಗ್ರೇಟರ್ ನೋಯ್ಡಾದಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಶಿವ್ ನಡಾರ್ ವಿಶ್ವವಿದ್ಯಾಲಯದ ಯೋಜನೆಗಳಲ್ಲಿ ಈ ಹಣ ತೊಡಗಿಸುವುದಾಗಿ ಅವರು ವಿವರಿಸಿದ್ದಾರೆ.

ಇದನ್ನೆಲ್ಲ ಅಚ್ಚುಕಟ್ಟಾಗಿ/ ಪಾರದರ್ಶಕವಾಗಿ ಜಾರಿಗೊಳಿಸುವ ಉದ್ದೇಶದೊಂದಿಗೆ ಹಣಕಾಸು ಸದಚಿವ ಪಿ ಚಿದಂಬರಂ ಅವರ ಸಮ್ಮುಖದಲ್ಲಿಯೇ Foundationನ ಹಣಕಾಸು ವಿವರವನ್ನು ಸುದ್ದಿಗೋಷ್ಠಿಯ ಮೂಲಕ ಬಹಿರಂಗಪಡಿಸುತ್ತಿರುವುದಾಗಿ ಅವರು ತಿಳಿಸಿದರು.

Shiv Nadar Foundation ತನ್ನ 20 ವರ್ಷಗಳ ಅಸ್ತಿತ್ವದಲ್ಲಿ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರವಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ' ಎಂದು ಟ್ರಸ್ಟೀ ರೋಶಿನಿ ನಡಾರ್ ಮಲ್ಹೋತ್ರ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ HCL ಕಂಪನಿಯ ಮಾಜಿ ಅಧ್ಯಕ್ಷ ಶಿವ್ ಮತ್ತು ಹಾಲಿ ಅಧ್ಯಕ್ಷೆ ರೋಶಿನಿ ನಡಾರ್ ಅವರುಗಳಿಗೆ ಒಂದು ಪುಟ್ಟ ಥ್ಯಾಂಕ್ಸ್ ಹೇಳೋಣ.

English summary
HCL Shiv Nadar Foundation commits Rs 3000 cr for education. The foundation run by founder and chairman of HCL Corporation Shiv Nadar Tuesday committed Rs.3,000 crore to develop education institutions over the next five years. In the last 20 years of its journey, the foundation has directly impacted 15,000 students said Roshni Nadar Malhotra, trustee of Shiv Nadar Foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X