ನಟಿಗೆ ಲೈಂಗಿಕ ಕಿರುಕುಳ ಪ್ರಕರಣ, ದಿಲೀಪ್ ಜಾಮೀನು ಅರ್ಜಿ ತಿರಸ್ಕೃತ

Subscribe to Oneindia Kannada

ತಿರುವನಂತರಪುರಂ, ಆಗಸ್ಟ್ 29: ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಮತ್ತೆ ತಿರಸ್ಕರಿಸಿದೆ.

ಬಹುಭಾಷಾ ನಟಿ ಲೈಂಗಿಕ ಪ್ರಕರಣ: ಮಲಯಾಳಂ ನಟ ದಿಲೀಪ್ ಬಂಧನ

ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ ಈ ಹಿಂದೆ ಜುಲೈ 24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಹೈಕೋರ್ಟ್ ಜಾಮೀನು ತಿರಸ್ಕರಿಸಿತ್ತು. ಇದೀಗ ಎರಡನೇ ಬಾರಿಗೆ ಜಾಮೀನು ಅರ್ಜಿ ತಿರಸ್ಕರಿಸಿದೆ.

HC rejects bail plea of actor Dileep

"ತನಿಖೆ ಇನ್ನೂ ಪ್ರಗತಿಯಲ್ಲಿದೆ. ಜತೆಗೆ ನಟ ಭಾರೀ ಪ್ರಭಾವಿಯಾಗಿದ್ದಾನೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಕ್ಷ್ಯಗಳ ನಾಶ ಮಾಡುವ ಸಾಧ್ಯತೆ ಇದೆ," ಎಂದು ತನಿಖಾಧಿಕಾರಿಗಳ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಮನ್ನಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಫೆಬ್ರವರಿ 17ರಂದು ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿಯನ್ನು ಅಪಹರಿಸಿ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ದಿಲೀಪ್ ಆರೋಪಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Kerala High Court today refused to grant bail to Malayalam actor Dileep, arrested on charges of plotting the abduction and sexual assault of a noted South Indian film actress here in February this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ