ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ರಾಜಕೀಯ ಪಕ್ಷ ಹಣ ಸ್ವೀಕರಿಸುವುದು ಹೇಗೆ ಗೊತ್ತಾ?

By ವಿಕಾಸ್ ನಂಜಪ್ಪ
|
Google Oneindia Kannada News

ಚುನಾವಣೆ ನಡೆಯುತ್ತಿದೆ ಎಂದರೆ ಹವಾಲಾ ಜಾಲ ಸಕ್ರಿಯವಾಗಿದೆ ಎಂದರ್ಥ. ದೆಹಲಿ ಚುನಾವಣೆಯಲ್ಲೀಗ ಕೇಳಿಬಂದಿರು ಈ ಆರೋಪದಲ್ಲಿ ಆಶ್ಚರ್ಯವೇನೂ ಇಲ್ಲ.

ಯಾವುದೇ ವಿಳಾಸ ಹೊಂದಿರದ ಹಾಗೂ ಅನಧಿಕೃತ ಕಂಪನಿಯೊಂದು ಆಮ್ ಆದ್ಮಿ ಪಕ್ಷಕ್ಕೆ ಹವಾಲಾ ಮೂಲಕ ಹಣ ವರ್ಗಾಯಿಸಿದೆ ಎಂಬುದು ಆರೋಪದ ಮೂಲ.

ಮುಖ್ಯವಾಗಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ನೀಡಲಾಗುವ ನಿಧಿಯ ಮೇಲೆ ಕಣ್ಣಿಡಲು ಆರಂಭಿಸಿದ ಮೇಲೆ ಹವಾಲಾ ಜಾಲದ ಕಾರ್ಯ ಬೆಳಕಿಗೆ ಬರುತ್ತಿದೆ. ಅಲ್ಲದೆ, ಅನಧಿಕೃತ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ವರ್ಗಾಯಿಸುವುದು ಕೂಡ ಹವಾಲಾ ಜಾಲದ ಕಾರ್ಯಗಳಲ್ಲೊಂದು. [ಬುಕ್ಕಿಗಳಿಗೆ ಬಿಜೆಪಿ ನೆಚ್ಚಿನ ಕುದುರೆ]

ಹವಾಲಾ ಎಂದರೇನು? : ಹವಾಲಾ ಜಾಲಕ್ಕೆ ಹುಂಡಿ ಎಂಬ ಹೆಸರೂ ಇದೆ. ಇದೊಂದು ಪರ್ಯಾಯ ಹಣ ರವಾನೆ ಅಥವಾ ಅನೌಪಚಾರಿಕ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. ರಾಜಕೀಯ ಪಕ್ಷಗಳು, ಉಗ್ರವಾದಿ ಸಂಘಟನೆಗಳೂ ಹಾಗೂ ಉದ್ಯಮಿಗಳು ಈ ಮಾರ್ಗವನ್ನು ಹೆಚ್ಚು ಆಯ್ದುಕೊಳ್ಳುತ್ತಾರೆ.

money

ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳ ಕುರಿತು ಚುನಾವಣಾ ಆಯೋಗ ಲೆಕ್ಕ ಕೇಳುತ್ತದೆ. ಆದರೆ, ನಿಗದಿ ಮೀರಿ ಹಣ ವ್ಯಯಿಸುವಂತಿಲ್ಲ. ಆದ್ದರಿಂದ ಪರೋಕ್ಷ ದಾರಿಯ ಮೂಲಕ ಹಣ ಸಾಗಿಸಿ ಖರ್ಚು ಮಾಡುವುದು ಅನಿವಾರ್ಯವಾಗುತ್ತದೆ. ಬ್ಯಾಂಕ್‌ಗಳ ಮೂಲಕವೂ ರವಾನೆಯಾಗುವ ಕೆಲವೊಮ್ಮೆ ಹಣ ರವಾನೆಯಾಗುತ್ತದೆ. [ದೆಹಲಿಯಲ್ಲಿ ನರೇಂದ್ರ ಮೋದಿ ವಾಗ್ಝರಿ]

ವಿದೇಶದಲ್ಲಿಟ್ಟ ಹಣ ಭಾರತಕ್ಕೆ ಬರುವುದು ಇದೇ ಸಂದರ್ಭದಲ್ಲಿ. ಇತ್ತೀಚೆಗೆ ಹಲವು ಬ್ಯಾಂಕ್‌ಗಳು ಕಪ್ಪು ಹಣ ವ್ಯವಹಾರಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ. ಸುಳ್ಳು ಕಂಪನಿಗಳನ್ನು ತೆರೆದು ಈ ಮೂಲಕ ಕಪ್ಪು ಹಣ ವರ್ಗಾವಣೆ ಮಾಡುವಂತೆ ಬ್ಯಾಂಕ್‌ಗಳೇ ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ. ಏಕೆಂದರೆ ಕಪ್ಪು ಹಣ ಬ್ಯಾಂಕ್ ಮೂಲಕ ವರ್ಗಾವಣೆಯಾದಾಗ ಬಿಳಿಯಾಗುತ್ತದೆ.

ಸಾಮಾನ್ಯವಾಗಿ ಚುನಾವಣೆ ಘೋಷಣೆಯಾಗುವ ಒಂದು ತಿಂಗಳ ಮೊದಲೇ ಈ ಹವಾಲಾ ಹಣದ ಹರಿದಾಟ ಆರಂಭವಾಗಿರುತ್ತದೆ.

ಹವಾಲಾ ಹಗರಣಗಳು : 18 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಹವಾಲಾ ಜಾಲದ ಮೂಲಕ ಸಾಗಿಸಿದ್ದು ಜೈನ ಹವಾಲಾ ಹಗರಣ ಎಂದೇ ಕುಖ್ಯಾತಿ ಪಡೆದಿದೆ. [ಬಿಜೆಪಿ ದೂರದೃಷ್ಟಿ ದಾಖಲೆಯಲ್ಲಿ 270 ಅಂಶ]

ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಕೂಡ ರಾಜಕೀಯ ಪಕ್ಷಗಳಿಗೆ ಹವಾಲಾ ಜಾಲದ ಮೂಲಕವೇ ಹಣ ರವಾನಿಸುತ್ತದೆ ಎನ್ನಲಾಗಿದೆ. ಈ ಹಗರಣದಲ್ಲಿ 115 ರಾಜಕಾರಣಿಗಳು, ಅಧಿಕಾರಿಗಳ ಹೆಸರು ಹೊರಬಂದಿತ್ತು.

ಇದು ದೇಶದ ಅತಿದೊಡ್ಡ ಹವಾಲಾ ಹಗರಣ ಎನ್ನಲಾಗಿದೆ. ಆದರೆ, ಇವರಲ್ಲಿ ಹೆಚ್ಚಿನವರು 1997-98ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಬಿಡುಗಡೆಯಾದರು. ಇವೆಲ್ಲವೂ ಹವಾಲಾ ಜಾಲ ಇಂದಿಗೂ ಸಕ್ರಿಯವಾಗಿದೆ ಎಂಬುದಕ್ಕೆ ಸಾಕ್ಷಿ.

English summary
Hawala will be active in the time of all election. It is the main source of political parties to get their funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X