ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಯಿಯಲ್ಲಿ ಜ್ವಾಲಾಮುಖಿ ಸ್ಫೋಟ: ದೇಶದಲ್ಲಿ ನಡೆದ ಪ್ರಮುಖ ಘಟನೆಗಳು

By Nayana
|
Google Oneindia Kannada News

ಪಹೋ(ಹವಾಯಿ) ಮೇ 26: ಹವಾಯಿಯ ಕಿಲವ್ಯಾ ಜ್ವಾಲಾಮುಖಿ ಶುಕ್ರವಾರ ಮತ್ತೆ ಸ್ಫೋಟಿಸಿದ್ದು, ನೂರಾರು ಅಡಿ ಎತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಿಮ್ಮಿದೆ. ಆಗಸದಲ್ಲಿ 30 ಸಾವಿರ ಅಡಿ ಎತ್ತರಕ್ಕೆ ಜ್ವಾಲಾಮುಖಿಯ ಬೂದಿ ಹಾರಿದೆ.

ಮೇ 3ರಂದು ಉದ್ಭವವಾಗಿದ್ದ ಜ್ವಾಲಾಮುಖಿಯು 2,200 ಎಕರೆಗೆ ಹರಡಿದೆ. ಇದರಿಂದ ಸಾವಿರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ ವಿಜ್ಞಾನಿ ಮೈಕೆಲ್ ಕೂಂಬ್ಸ್ ಹೇಳುವಂತೆ ಮತ್ತೆ ಇಷ್ಟೇ ದೊಡ್ಡ ಪ್ರಮಾಣದ ಜ್ವಾಲಾಮುಖಿ ಚಿಮ್ಮುವ ಸಾಧ್ಯತೆ ಇದೆ.

ಬರ್ಲಿನ್ ನಲ್ಲಿ ಲಂಗ ದಾವಣಿ ತೊಟ್ಟ ಜರ್ಮನ್ ಬೆಡಗಿಯರು ಬರ್ಲಿನ್ ನಲ್ಲಿ ಲಂಗ ದಾವಣಿ ತೊಟ್ಟ ಜರ್ಮನ್ ಬೆಡಗಿಯರು

ಹವಾಯಿ ಜ್ವಾಲಾಮುಖಿ ವೀಕ್ಷಣಾಲಯದ ವೆಬ್‌ ಕ್ಯಾಮೆರಾದಲ್ಲಿ ಈ ಜ್ವಾಲಾಮುಖಿಯ ಪರಿಣಾಮವನ್ನು ಸೆರೆಹಿಡಿಯಲಾಗಿದ್ದು, ಧೂಳುಯುಕ್ತ ಬೂದಿಯ ಮಳೆ ಈಗಾಗಲೇ ಕಪ್ಪುಗಟ್ಟಿರುವ ದೃಶ್ಯಾವಳಿಯ ಮೇಲೆ ಆಗುತ್ತಿರುವುದನ್ನು ಇದು ಚಿತ್ರಿಸಿದೆ. ಬೆಂಕಿಯ ಜ್ವಾಲೆ ಒಂಬತ್ತು ಕಿಲೋ ಮೀಟರ್ ಎತ್ತರಕ್ಕೆ ವ್ಯಾಪಿಸಿರುವುದು ಕಂಡುಬಂದಿದೆ.

ಈಗಾಗಲೇ ಸಂಭವಿಸಿರುವ ಜ್ವಾಲಾಮುಖಿಯ ಲಾವಾರಸ ಮತ್ತೆ ನೆಲದೊಳಕ್ಕೆ ಸೇರುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ಇನ್ನಷ್ಟು ದೊಡ್ಡ ಜ್ವಾಲಾಮುಖಿಗೆ ಅವಕಾಶ ಮಾಡಿಕೊಡಲಿದೆ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ. ಮುಳುಗುತ್ತಿರುವ ಜ್ವಾಲಾಮುಖಿ ಶಿಲೆ ಅಂತರ್ಜಲದೊಂದಿಗೆ ಸೇರಿದಾಗ ಒತ್ತಡ ಮತ್ತಷ್ಟು ಹೆಚ್ಚಿ ಅದು ಮೇಲ್ಮುಖವಾಗಿ ಚಿಮ್ಮುವ ಸಾಧ್ಯತೆ ಹೆಚ್ಚು. ಇದರಿಂದಾಗಿ ದೊಡ್ಡ ಗಾತ್ರದ ಬಂಡೆ ಹಾಗೂ ಬೂದಿ ಹೊರಚಿಮ್ಮಲಿದೆ ಎಂದು ಎಚ್ಚರಿಸಿದ್ದಾರೆ.

ಕಳೆದ ಮೂರು ವಾರಗಳಿಂದ ಹೊಗೆಯುಗುಳುತ್ತಿದ್ದ ಜ್ವಾಲಾಮುಖಿ 1924ರಿಂದೀಚೆಗೆ ಸ್ಫೋಟಗೊಂಡಿದ್ದು ಇದೇ ಮೊದಲ ಬಾರಿಯಾಗಿದೆ. ಸ್ಫೋಟದಿಂದಾಗಿ ವಾತಾವರಣದಲ್ಲಿ ತುಂಬಿರುವ ಇಂಗಾಲದ ಡೈಆಜ್ಸೈಡಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಜ್ವಾಲಾಮುಖಿಯಿಂದ 25 ಮೈಲಿ ದೂರದಲ್ಲಿರುವ ಪಹೋವ ಗ್ರಾಮದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಹಲವಾರು ಮನೆಗಳೂ ನಾಶಗೊಂಡಿದ್ದು ಸುಮಾರು 2000 ಮಂದಿಯನ್ನು ಸ್ಥಳಾಂತರಿಸಲಾಗುತ್ತಿದೆ.

ಹವಾಯಿ ಜ್ವಾಲಾಮುಖಿ ಮತ್ತೆ ಸ್ಫೋಟ

ಹವಾಯಿ ಜ್ವಾಲಾಮುಖಿ ಮತ್ತೆ ಸ್ಫೋಟ

ಪಹೋದಲ್ಲಿ ಶುಕ್ರವಾರ ಸ್ಫೋಟಗೊಂಡಿರುವ ಹವಾಯಿ ಜ್ವಾಲಾಮುಖಿಯ ದೃಶ್ಯವನ್ನು ಅಮೆರಿಕಾದ ಜಿಯೋಲಾಜಿಕಲ್ ಸರ್ವೆ ಸೆರೆಹಿಡಿದಿದ್ದು ಹೀಗೆ. ಕಳೆದ ಮೂರು ವಾರಗಳಿಂದ ಹವಾಯಿಯಲ್ಲಾಗುತ್ತಿರುವ ಜ್ವಾಲಾಮುಖಿ ಸ್ಫೋಟದಿಂದ 2 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

ಜಬಲ್‌ಪುರದಲ್ಲಿ ಕೋಲ್ಮಿಂಚು ಕಾಣಿಸಿಕೊಂಡಿದ್ದು ಹೀಗೆ

ಜಬಲ್‌ಪುರದಲ್ಲಿ ಕೋಲ್ಮಿಂಚು ಕಾಣಿಸಿಕೊಂಡಿದ್ದು ಹೀಗೆ

ಜಬಲ್‌ಪುರದಲ್ಲಿ ಶುಕ್ರವಾರ ಮೋಡಕವಿತ ವಾತಾರವಣ ನಿರ್ಮಾಣವಾಗಿತ್ತು. ಮಳೆಯ ಬರುವಿಕೆಗಾಗಿ ಅಲ್ಲಿನ ಜನ ಕಾದು ಕುಳಿತಿದ್ದರು ಆ ಸಂದರ್ಭದಲ್ಲಿ ಆಗಸದಲ್ಲಿ ಕಂಡ ಕೋಲ್ಮಿಂಚು ಇದಾಗಿದೆ.

ಆರ್‌ಎಸ್‌ಎಸ್‌ ಮಹಿಳೆಯರಿಂದ ಪಥಸಂಚನ

ಆರ್‌ಎಸ್‌ಎಸ್‌ ಮಹಿಳೆಯರಿಂದ ಪಥಸಂಚನ

ಜಬಲ್‌ಪುರದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಕಾರ್ಯಕರ್ತರು ಅಲ್ಲಿನ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

ವಿಶ್ವಾಸಮತ ಯಾಚನೆ: ಬಿಜೆಪಿ ಸದನದಿಂದ ಹೊರಕ್ಕೆ

ವಿಶ್ವಾಸಮತ ಯಾಚನೆ: ಬಿಜೆಪಿ ಸದನದಿಂದ ಹೊರಕ್ಕೆ

ಎಚ್‌ಡಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಿದರು. ಸಂದರ್ಭದಲ್ಲಿ ಸದನದಿಂದ ಹೊರ ನಡೆಯುತ್ತಿರುವ ಬಿಜೆಪಿ ನಾಯಕರು.

ಸೇಫ್ಟಿ ಮಾಸ್ಕ್ ಧರಿಸಿರುವ ಬಾಲಕಿ

ಸೇಫ್ಟಿ ಮಾಸ್ಕ್ ಧರಿಸಿರುವ ಬಾಲಕಿ

ಕೇರಳದ ಕೊಯಿಕ್ಕೊಡ್ ನಲ್ಲಿ ನಿಪಾಹ್ ವೈರಸ್‌ನಿಂದಾಗಿ ಈಗಾಗಲೇ 12 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ಮಕ್ಕಳು, ಪೋಷಕರು ಸೇರಿದಂತೆ ಪ್ರತಿಯೊಬ್ಬರು ಸೇಫ್ಟಿ ಮಾಸ್ಕ್ ಧರಿಸಿ ಮನೆಯಿಂದ ತೆರಳುತ್ತಿದ್ದಾರೆ.

English summary
A tide of molten rock turned a Hawaii street into a volcanic wasteland on Friday as the number of homes destroyed by the erupting Kilauea volcano soared and authorities told residents to flee a surge of lava heading towards them. The destructive fury of the erupting Kilauea volcano was unleashed on the Big Island's Leilani Estates housing development, with the number of homes and other structures destroyed leaping to 82 from a previous count of 50, according to the Federal Emergency Management Agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X