ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಅಧಿಸೂಚನೆಯಲ್ಲಿ ಗೋ ಹತ್ಯೆ ನಿಷೇಧ ಅಂತ ಎಲ್ಲಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 30: ಕೇಂದ್ರ ಸರಕಾರವು ಪ್ರಾಣಿಗಳ ಮಾರಾಟದ ವಿಚಾರವಾಗಿ ಹೊರಡಿಸಿದ ಅಧಿಸೂಚನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಗದ್ದಲ ಎಬ್ಬಿಸಿದೆ. ಇನ್ನು ರಾಜಕಾರಣಿಗಳು ಕೇಂದ್ರದ ವಿರುದ್ಧ ಹುಯಿಲೆಬ್ಬಿಸುತ್ತಿದ್ದಾರೆ. ರಾಜ್ಯ ಸರಕಾರಗಳಂತೂ ಈ ಅಧಿಸೂಚನೆಗೆ ಪ್ರತಿಯಾಗಿ ಶಾಸನ ಮಂಡಿಸುವುದಕ್ಕೆ ಮುಂದಾಗಿವೆ.

ಮುಖ್ಯವಾದ ಪ್ರಶ್ನೆ ಏನೆಂದರೆ, ಕೇಂದ್ರದ ಅಧಿಸೂಚನೆಯಲ್ಲಿ ನಿಜವಾಗಲೂ ಗೋ ಹತ್ಯೆ ನಿಷೇಧದ ಬಗ್ಗೆ ಪ್ರಸ್ತಾವ ಇದೆಯಾ? ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ಪರಿಶೀಲಿಸೋಣ. ಇಷ್ಟುದ್ದದ ಅಧಿಸೂಚನೆಯನ್ನು ತುಂಬ ಸರಳವಾಗಿ ಹೇಳಬೇಕು ಅಂದರೆ, ಪಶು ಮಾರುಕಟ್ಟೆಯಲ್ಲಿ ರಾಸುಗಳನ್ನು ಕಸಾಯಿ ಖಾನೆಗಳಿಗೆ ಮಾರುವುದಕ್ಕೆ ಮಾತ್ರ ನಿಷೇಧವಿದೆ.[ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ]

ಈ ಅಶಿಸೂಚನೆಯಲ್ಲಿ ನಿಯಮಗಳು ಹಾಘೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿರುವುದು ಹೌದು. ಆದರೆ ಅವುಗಳನ್ನು ಮಾಡಿರುವುದು ಪಶು ಮಾರುಕಟ್ಟೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ. ಪಶುಗಳ ಮಾರಾಟದ ಸಂದರ್ಭದಲ್ಲಿ ಹೇಗೆಂದರೆ ಹಾಗೆ ನಡೆಸಿಕೊಳ್ಳದಿರಲಿ ಎಂದು ನಿಯಮಗಳನ್ನು ರೂಪಿಸಲಾಗಿದೆ.

Have they read it right? Where does the notification speak of a beef ban?

ಅಂದಹಾಗೆ, ಅಧಿಸೂಚನೆಯಲ್ಲಿ ಇರುವುದೇನು?
* ಪಶು ಮಾರುಕಟ್ಟೆಗೆ ಜಾನುವಾರುಗಳನ್ನು ತರುವಾಗ ಲಿಖಿತ ಘೋಷಣೆಗೆ ಅದರ ಮಾಲೀಕರ ಸಹಿ ಒಳಗೊಂಡ ಪತ್ರವನ್ನು ಸಲ್ಲಿಸಬೇಕು. ಮಾಲೀಕರಾದವರು ತಮ್ಮ ಏಜೆಂಟ್ ಗಾದರೂ ಈ ರೀತಿಯ ಲಿಖಿತ ದಾಖಲೆ ನೀಡಬೇಕು. ಮತ್ತು ಅದನ್ನು ಹೊಸ ಸಮಿತಿಯ ಕಾರ್ಯದರ್ಶಿಗೆ ಕೊಡಬೇಕು.

* ರಾಸುಗಳ ಮಾಲೀಕರ ಹೆಸರು ಹಾಗೂ ವಿಳಾಸ, ಫೋಟೋ ಒಳಗೊಂಡಂಥ ಗುರುತಿನ ಚೀಟಿಯನ್ನು ನೀಡಬೇಕು.

* ಪಶು ಮಾರುಕಟ್ಟೆಯಲ್ಲಿ ನಡೆಯುವ ರಾಸುಗಳ ವ್ಯಾಪಾರ ಕೃಷಿ ಉದ್ದೇಶಕ್ಕಾಗಿಯೇ ನಡೆಯಬೇಕು.[ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪೇಜಾವರ ಶ್ರೀ ಹೇಳಿದ್ದಿಷ್ಟು...]

* ಧಾರ್ಮಿಕ ಉದ್ದೇಶಗಳಿಗೆ ಬಲಿ ಕೊಡುವ ಕಾರಣಕ್ಕೆ ರಾಸುಗಳನ್ನು ಖರೀದಿಸುವುದಕ್ಕೆ ನಿಬಂಧನೆ ಇದೆ.

Have they read it right? Where does the notification speak of a beef ban?

ಪಶು ಮಾರುಕಟ್ಟೆ ಅಂದರೇನು?
ಯಾವುದೇ ಸ್ಥಳದಲ್ಲಿ ಅಥವಾ ಮಾರುಕಟ್ಟೆ ಪ್ರದೇಶ ಅಥವಾ ಅಂಗಳ-ಸ್ಥಳದಲ್ಲಿ ಪ್ರಾಣಿಗಳ ಪ್ರದರ್ಶನ ಮಾಡಿ, ಮಾರಾಟ ಹಾಗೂ ಹರಾಜು ಹಾಕುವುದಕ್ಕೆ ಪಶು ಮಾರುಕಟ್ಟೆ ಅಂತ ಕರೆಯುತ್ತಾರೆ. ಮಾರುಕಟ್ಟೆಗೆ ಹೊಂದಿಕೊಂಡಂತೆ ಇರುವ ಕಸಾಯಿ ಖಾನೆ, ಅದಕ್ಕೆ ಹೊಂದಿದಂತೆ ಇರುವ ವಾಹನ ನಿಲುಗಡೆ ಸ್ಥಳ, ಮತ್ತು ಜಾಣುವಾರುಗಳ ಜಾತ್ರೆ ನಡೆವ ಸ್ಥಳ, ಎಲ್ಲಿ ಪಶುಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಾರೋ ಅದು ಪಶು ಮಾರುಕಟ್ಟೆ.

Have they read it right? Where does the notification speak of a beef ban?

ಗೊಂದಲ ಇರುವುದೆಲ್ಲಿ?
ಕಸಾಯಿಖಾನೆಗಳವರು ನೇರವಾಗಿ ರೈತರಿಂದ ಜಾನುವಾರುಗಳನ್ನು ಖರೀದಿಸಲು ಅನುಮತಿ ಇದೆಯಾ ಎಬ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಎಲ್ಲೂ ಕೂಡ ಅದಕ್ಕೆ ನಿಷೇಧ ಹೇರಿದ ಬಗ್ಗೆ ಉಲ್ಲೇಖವಿಲ್ಲ. ಈ ನಿಯಮಗಳು ಕಸಾಯಿಖಾನೆಗಳು ಕಾರ್ಯನಿರ್ವಹಿಸುವುದಕ್ಕೆ ತೊಡಕಾಗಿವೆ.[ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ]

ಕೆಲವು ಕಠಿಣ ನಿಬಂಧನೆಗಳಿವೆ. ಆದರೆ ಅವು ಗೋ ಹತ್ಯೆ ನಿಷೇಧದ ಬಗ್ಗೆ ಎಲ್ಲೂ ಹೇಳಿಲ್ಲ. ಜಾನುವಾರುಗಳನ್ನು ಕೆಟ್ಟದಾಗಿ ನಡೆಸುಕೊಳ್ಳುತ್ತಿದ್ದ ರೀತಿಗೆ ಕಡಿವಾಣ ಬಿದ್ದಿದೆ. ಈಗ ಕಸಾಯಿಖಾನೆ ನಡೆಸುವವರು ರಾಸುಗಳನ್ನು ನೇರವಾಗಿ ರೈತರಿಂದಲೇ ಖರೀದಿಸಬೇಕು, ಅದೂ ಅವರು ಮಾರಾಟ ಮಾಡುವವರೆಗೆ ಅವಕಾಶ ಇಲ್ಲ.

ಪರವಾನಗಿ ಇರುವ ಕಸಾಯಿಕಾನೆ ಮಾಲೀಕರು ರಾಸುಗಳನ್ನು ಖರೀದಿಸಲು ಕೃಷಿಕರನ್ನೇ ಅವಲಂಬಿಸಬೇಕು.

English summary
The question is, does the centre's notification really speak about a beef ban? Let us examine the notification issued by the Ministry of Environment and Forests. To cut a long story short, the notification only sets out a restriction on sale of cattle for slaughter in animal markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X