ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಡೇವಿಡ್ ಹೆಡ್ಲಿ ಬಾಯಿಬಿಟ್ಟ ರೋಚಕ ಸತ್ಯಗಳು

|
Google Oneindia Kannada News

ನವದೆಹಲಿ, ಮಾರ್ಚ್, 25: 'ಚಿಕ್ಕವನಿದ್ದಾಗಲಿಂದಲೂ ನನಗೆ ಭಾರತವನ್ನು ಕಂಡರೆ ನನಗೆ ದ್ವೇಷ. ಹೀಗಾಗಿ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾನು ಉಗ್ರನಾಗಿ ಬದಲಾದೆ' ಇದು ಉಗ್ರ ಡೇವಿಡ್ ಹೆಡ್ಲಿ ಬಾಯಿ ಬಿಟ್ಟ ಸತ್ಯ.

ಇದೇ ಕಾರಣಕ್ಕೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸೇರಿದ್ದೆ ಎಂದು 26/11ರ ಮುಂಬೈ ದಾಳಿಯ ಆರೋಪಿ ಡೇವಿಡ್ ಹೆಡ್ಲಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾನೆ ಎಂದು ಉಗ್ರ ಡೇವಿಡ್ ಹೆಡ್ಲಿ ಹೇಳಿದ್ದಾನೆ.[ಮುಂಬೈ ದಾಳಿ ತಪ್ಪೊಪ್ಪಿಕೊಂಡ ಹೆಡ್ಲಿ]

terrorists

ಮುಂಬೈ ದಾಳಿ ರೂವಾರಿ ಹೆಡ್ಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. 1971ರಲ್ಲಿ ನಾನು ಓದುತ್ತಿದ್ದ ಶಾಲೆಯ ಮೇಲೆ ಭಾರತೀಯ ಸೇನೆಯ ಹೆಲಿಕಾಫ್ಟರ್ ಗಳು ಬಾಂಬ್ ಹಾಕಿದ್ದವು. ಇದೇ ಕಾರಣಕ್ಕೆ ಬಾಲ್ಯದಿಂದಲೂ ಭಾರತವನ್ನು ದ್ವೇಷಿಸಲು ಆರಂಭಿಸಿದೆ. ಭಾರತಕ್ಕೆ ಹಾನಿ ಮಾಡಬೇಕು, ವಿಧ್ವಂಸಕ ಕೃತ್ಯ ಎಸಗಬೇಕು ಎಂದು ಸಿದ್ಧತೆ ಆರಂಭಿಸಿದ್ದೆ ಎಂದು ಹೇಳಿದ್ದಾನೆ.[26/11 ದಾಳಿ : ಡೇವಿಡ್ ಹೆಡ್ಲಿ ಬಾಯ್ಬಿಟ್ಟರೆ ಭಾರತಕ್ಕೇನು ಲಾಭ!]

ನಾನು ದುಷ್ಟ ಎಂಬುದು ಸತ್ಯ. ಆದರೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಕಠೋರಿಯಾಗಿ ಬದಲಾದೆ ಎಂದು ಹೇಳಿದ್ದಾನೆ. ಅಮರಿಕದ ಜೈಲಿನಲ್ಲಿರುವ ಹೇಡ್ಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಹೇಡ್ಲಿ ತನಗೆ ಶಿವಸೇನೆಯ ಮಾಜಿ ಮುಖಂಡನೊಂದಿಗೆ ಸಂಪರ್ಕ ಇತ್ತು ಎಂದು ಹೇಳಿದ್ದು ಮತ್ತಷ್ಟು ಹೊಸ ಸಮಶಯಗಳನ್ನು ಹುಟ್ಟುಹಾಕಿದೆ.

English summary
Pakistani-American LeT terrorist-turned-approver David Coleman Headley said here on Friday,March 25 that he nursed a hatred towards India and Indians since December 1971 when his school was bombed by Indian fighter planes during India-Pakistan war which saw the creation of Bangladesh. "I have this hatred... towards Indian since December 7, 1971... When Indian planes had bombed my school... The school was destroyed and many people who worked there had died," Headley claimed on the third day of his ongoing cross-examination before Special Judge G. A. Sanap on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X