ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಳು ಮಿಶ್ರಿತ ಬಿರುಗಾಳಿ ಉತ್ತರ ಭಾರತ ತತ್ತರ! ಸ್ಥಿತಿ ಹೇಗಿದೆ?

By Nayana
|
Google Oneindia Kannada News

ಬಿಕಾನೇರ್: ರಾಜಸ್ತಾನದಲ್ಲಿ ಭಾರೀ ಬಿರುಗಾಳಿಗೆ 27 ಜನ ಬಲಿಯಾಗಿದ್ದು 100ಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ರಾತ್ರಿ ರಾಜಸ್ತಾನದ ಹಲವು ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಬೀಸಿದೆ. ಭರತಪುರದಲ್ಲಿ 11 ಜನ, ಅಲ್ವಾರಾ 4, ಧೋಲ್‌ಪುರ 5, ಬಿಕೇನಾರ್ ಮತ್ತು ಜೂನಾಜುನ್‌ನಲ್ಲಿ ಒಬ್ಬರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಹಲವರು ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಿರುಗಾಳಿಯ ರಭಸಕ್ಕೆ 100ಕ್ಕೂ ಹೆಚ್ಚು ಮರಗಳು ಹಾಗೂ 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭರತಪುರ, ಅಲ್ವಾರಾ ಮತ್ತು ಧೋಲ್‌ಪುರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ!ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ!

ಸಂಜೆ ಹಾಗೂ ರಾತ್ರಿ ಮನೆಯಿಂದ ಹೊರ ಬರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ವೈದ್ಯಕೀಯ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಸ್ಥಳದಲ್ಲಿ ಮೊಕ್ಕಂ ಹೊಡಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗೈಗೊಂಡಿವೆ ಎಂದು ರಾಜಸ್ತಾನ ಸರ್ಕಾರ ತಿಳಿಸಿದೆ.

ಇನ್ನು ದೆಹಲಿಯಲ್ಲಿ ಕೂಡ ಬಿರುಗಾಳಿ ಮುಂದುವರೆದಿದ್ದು, ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಧೂಳು ಮಿಶ್ರಿತ ಬಿರುಗಾಳಿ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇತ್ತೇಚೆಗೆ ದೆಹಲಿಯಲ್ಲಿ ವಾಹನ ದಟ್ಟಣೆಯಿಂದಾಗಿ ವಾಯು ಮಾಲಿನ್ಯದೃಷ್ಟಿಯಾಗಿದ್ದು ಇದೀಗ ಬಿರುಗಳಾಯಿಂದ ಸುದ್ದಿ ಮಾಡುತ್ತಿದೆ.

ಧೂಳು ಮಿಶ್ರಿತ ಬಿರುಗಾಳಿ

ಧೂಳು ಮಿಶ್ರಿತ ಬಿರುಗಾಳಿ

ರಾಜಸ್ತಾನದ ಬಿಕಾನೇರ್‌ನಲ್ಲಿ ಬುಧವಾರ ಧೂಳು ಮಿಶ್ರಿತ ಗಾಳಿ ಕಾಣಿಸಿಕೊಂಡಿದ್ದು, 27ಜನ ಬಲಿಯಾಗಿದ್ದಾರೆ. ಬಿರುಗಾಳಿಯ ರಭಸಕ್ಕೆ 100ಕ್ಕೂ ಹೆಚ್ಚು ಮರಗಳು ಹಾಗೂ 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭರತಪುರ, ಅಲ್ವಾರಾ ಮತ್ತು ಧೋಲ್‌ಪುರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬಿರುಗಾಳಿ ಲೆಕ್ಕಕ್ಕಿಲ್ಲ

ಬಿರುಗಾಳಿ ಲೆಕ್ಕಕ್ಕಿಲ್ಲ

ರಾಜಸ್ತಾನದ ಬಿಕಾನೇರ್‌ನಲ್ಲಿ ಉಂಟಾದ ಧೂಳು ಮಿಶ್ರಿತ ಬಿರುಗಾಳಿಗೆ ಜನರು ತತ್ತರಿಸಿದ್ದಾರೆ. ಧೂಳು ಮಿಶ್ರಿತ ಭಾರಿ ಬಿರುಗಾಳಿ ಬೀಸುತ್ತಿದ್ದರೂ, ಲೆಕ್ಕಿಸದೇ ಮುನ್ನುಗ್ಗುತ್ತಿರುವ ವಾಹನ ಸವಾರರು

ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತರಾದ ಮಾಧ್ಯಮದವರಿಗೆ ಶ್ರದ್ಧಾಂಜಲಿ

ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತರಾದ ಮಾಧ್ಯಮದವರಿಗೆ ಶ್ರದ್ಧಾಂಜಲಿ

ಕಾಬೂಲ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಸೋಮವಾರ ನಡೆಸಿದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹತ್ತು ಪತ್ರಕರ್ತರು ಸೇರಿದಂತೆ ಒಟ್ಟು 25 ಮಂದಿ ಸಾವನ್ನಪ್ಪಿದ್ದರು.ದಾಳಿಯಲ್ಲಿ ನಾಲ್ವರು ಪೊಲೀಸರು ಹತ್ಯೆಯಾಗಿದ್ದು, ಎರಡೂ ದಾಳಿಗಳಲ್ಲಿ 45 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಎಎಫ್‌ಪಿ ಛಾಯಾಗ್ರಾಹಕ ಹಾಗೂ ಸ್ಥಳೀಯ ಚಾನಲ್‌ನ ವಿಡಿಯೋಗ್ರಾಫರ್‌ ಸೇರಿದ್ದರು. ಬೆಳಿಗ್ಗೆ ಕಾರ್‌ ಬಾಂಬ್‌ ಸ್ಫೋಟಗೊಂಡ ಕೆಲ ಗಂಟೆಗಳಲ್ಲಿಯೇ ದಕ್ಷಿಣ ಭಾಗದ ಕಂದಹಾರ್‌ನಲ್ಲಿ ಇನ್ನೊಂದು ಬಾಂಬ್‌ ಸ್ಫೋಟಗೊಂಡು 11 ಮಂದಿ ಮಕ್ಕಳು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಹತರಾದ ಪತ್ರಕರ್ತರಿಗೆ ಕೊಲ್ಕತ್ತದಲ್ಲಿ ಪತ್ರಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ದೆಹಲಿಯಲ್ಲಿ ಹವಾಮಾನ ಬದಲಾವಣೆ: ಆಟದಲ್ಲಿ ನಿರತರಾಗಿರುವ ಮಕ್ಕಳು

ದೆಹಲಿಯಲ್ಲಿ ಹವಾಮಾನ ಬದಲಾವಣೆ: ಆಟದಲ್ಲಿ ನಿರತರಾಗಿರುವ ಮಕ್ಕಳು

ಪಂಜಾಬ್, ಹರಿಯಾಣದಲ್ಲಿ ಹವಾಮಾನ ಬದಲಾವಣೆಯಾಗಿದ್ದು, ಧೂಳು ಮಿಶ್ರಿತ ಗಾಳಿ ಬೀಸುತ್ತಿದೆ. ಗಾಳಿಯ ತೀವ್ರತೆ 45 ಕೆಎಂಪಿಎಚ್ ಇದೆ. ಚಂಡೀಘಡದಲ್ಲಿ ವಾಹನವನ್ನು ಚಲಾಯಿಸಲು ಅಸಾಧ್ಯವಾಗುವ ರೀತಿಯಲ್ಲಿ ಗಾಳಿಯ ತೀವ್ರತೆ ಇದೆ. ಇದರ ಮಧ್ಯೆ ಮಕ್ಕಳು ಯಾವುದನ್ನೂ ಲೆಕ್ಕಿಸದೆ ಆಟದಲ್ಲಿ ನಿರತರಾಗಿದ್ದ ದೃಶದಯವನ್ನು ನೋಡಬಹುದು.

ಕಾರಿನ ಮೇಲೆ ಉರುಳಿದ ಮರ

ಕಾರಿನ ಮೇಲೆ ಉರುಳಿದ ಮರ

ಪಂಜಾಬ್‌ನಲ್ಲಿ ಉಂಟಾದ ಭಾರಿ ಧೂಳು ಮಿಶ್ರಿತ ಬಿರುಗಾಳಿಯ ರಭಸಕ್ಕೆ 100ಕ್ಕೂ ಹೆಚ್ಚು ಮರಗಳು ಹಾಗೂ 1000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಭರತಪುರ, ಅಲ್ವಾರಾ ಮತ್ತು ಧೋಲ್‌ಪುರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಂಜೆ ಹಾಗೂ ರಾತ್ರಿ ಮನೆಯಿಂದ ಹೊರ ಬರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ವೈದ್ಯಕೀಯ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಸ್ಥಳದಲ್ಲಿ ಮೊಕ್ಕಂ ಹೊಡಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗೈಗೊಂಡಿವೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ.

ಅಲಿಗಢ ವಿವಿಯಲ್ಲಿ ಹಿಂಸಾಚಾರ

ಅಲಿಗಢ ವಿವಿಯಲ್ಲಿ ಹಿಂಸಾಚಾರ

ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್‌ ಅಲಿ ಜಿನ್ನಾ ಭಾವಚಿತ್ರವನ್ನು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ತೂಗು ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ವೇಳೆ ಹಿಂಸಾಚಾರ ನಿಯಂತ್ರಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಚಂದ್ರಭೂಷಣ್ ಸಿಂಗ್‌ ಅವರು ತಿಳಿಸಿದ್ದಾರೆ.

English summary
The death toll caused by the high-speed dust storm, which wreaked havoc on Wednesday night in Rajasthan’s Bharatpur, Alwar and Dholpur districts, rose to 27 people on Thursday. Over 100 people were also left injured in the calamity. Earlier today, it was reported that 22 people were killed, of which eleven people died in Bharatpur, six in Dholpur, four in Alwar and one in Jhunjhunu as the dust storm left a trail of destruction leaving hundreds of trees and electric poles uprooted. people, injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X