ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1987ರ ಮುಸ್ಲೀಮರ ಮಾರಣಹೋಮ: 16 ಮಾಜಿ ಪೊಲೀಸರಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಬರೋಬ್ಬರಿ 31 ವರ್ಷಗಳ ಹಿಂದೆ ಕೆಲವು ಪೊಲೀಸರು ನಡೆಸಿದ್ದ ಮಾರಣಹೋಮಕ್ಕೆ ಇದೀಗ ನ್ಯಾಯಾಲಯವು ಶಿಕ್ಷೆ ನೀಡಿದೆ. ಜೀವ ಕಳೆದುಕೊಂಡವರ ಕುಟುಂಬಕ್ಕೆ ಮೂರು ದಶಕಗಳ ನಂತರ ನ್ಯಾಯ ದೊರೆತಿದೆ.

1987 ರ ಮಾರ್ಚ್‌ 22 ರಂದು ಸಶಸ್ತ್ರ ಕಾನ್ಸ್ಟೇಬಲ್‌ಗಳು ಉತ್ತರ ಪ್ರದೇಶ ರಾಜ್ಯದ ಮೀರಟ್‌ ಬಳಿಯ ಹಶಿಮ್‌ಪುರ ಹಳ್ಳಿಯಿಂದ 50 ಮುಸ್ಲಿಮರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಆ ನಂತರ ಅದರಲ್ಲಿ 42 ಜನರ ಶವ ಸಮೀಪದ ಕಾಲೆವೆಯಲ್ಲಿ ದೊರೆತಿದ್ದವು.

ಕಾಂಗ್ರೆಸ್ ಗೆ ಬಿಸಿ ತುಪ್ಪವಾದ ದಕ್ಷಿಣಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ತೀರ್ಮಾನ ಕಾಂಗ್ರೆಸ್ ಗೆ ಬಿಸಿ ತುಪ್ಪವಾದ ದಕ್ಷಿಣಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ತೀರ್ಮಾನ

ಈ ಪ್ರಕರಣವನ್ನು ಹಾಶಿಂಪುರ ಹತ್ಯಾಕಾಂಡ ಎಂದೇ ಕರೆಯಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಜನ ಪೊಲೀಸರಿಗೆ ಈಗ ಜೀವಾವಧಿ ಶಿಕ್ಷೆ ಆಗಿದೆ. ಎಲ್ಲರೂ ಪೊಲೀಸ್‌ ವೃತ್ತಿಯಿಂದ ನಿವೃತ್ತರಾಗಿದ್ದು, ಒಬ್ಬ ವ್ಯಕ್ತಿ ತೀರ್ಪು ಬಂದ ಈ ದಿನವೇ ಸಾವನ್ನಪ್ಪಿದ್ದಾನೆ.

ಭಾರಿ ಗಲಭೆ ಸೃಷ್ಠಿಸಿದ್ದ ಹತ್ಯಾಕಾಂಡ

ಭಾರಿ ಗಲಭೆ ಸೃಷ್ಠಿಸಿದ್ದ ಹತ್ಯಾಕಾಂಡ

ಭಾರಿ ಆಕ್ರೋಶ ಸೃಷ್ಠಿಸಿದ್ದ ಈ ಹತ್ಯಾಕಾಂಡ ದೇಶದಾದ್ಯಂತ ಕೋಮು ಗಲಭೆಗೆ ಮೂಲವಾಗಿತ್ತು. ಈ ಘಟನೆ ನಡೆದ ನಂತರ ಗಲಭೆಗಳಲ್ಲಿ ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಪೊಲೀಸರನ್ನು ಕೊಂದಿದ್ದರು.

ಗಂಗಾಧರ ಚಡಚಣ ಹತ್ಯೆ : ಎಂ.ಬಿ.ಅಸೋಡೆ 14 ದಿನ ನ್ಯಾಯಾಂಗ ಬಂಧನಕ್ಕೆ ಗಂಗಾಧರ ಚಡಚಣ ಹತ್ಯೆ : ಎಂ.ಬಿ.ಅಸೋಡೆ 14 ದಿನ ನ್ಯಾಯಾಂಗ ಬಂಧನಕ್ಕೆ

19 ಜನರ ಮೇಲೆ ಚಾರ್ಜ್‌ಶೀಟ್‌

19 ಜನರ ಮೇಲೆ ಚಾರ್ಜ್‌ಶೀಟ್‌

ಪ್ರಕರಣವನ್ನು 1988 ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಸಿಬಿಐಯು ಪೊಲೀಸ್ ಕಾನ್ಸ್ಟೇಬಲ್‌ಗಳು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 60 ಜನರ ತನಿಖೆ ನಡೆಸಿ ವರದಿ ಸಲ್ಲಿಸಿತು. ಕೊನೆಗೆ 1996 ರಲ್ಲಿ 19 ಜನರ ಮೇಲೆ ಚಾರ್ಜ್‌ಶೀಟ್‌ ಸಲ್ಲಿಸಲಾಯಿತು. 161 ಜನರನ್ನು ಸಾಕ್ಷಿಯಾಗಿಸಲಾಗಿತ್ತು.

ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ

2015 ರಲ್ಲಿ ಆರೋಪಿಗಳ ವಜಾ ಆಗಿತ್ತು

2015 ರಲ್ಲಿ ಆರೋಪಿಗಳ ವಜಾ ಆಗಿತ್ತು

2015ರಲ್ಲಿ ದೆಹಲಿ ನ್ಯಾಯಾಲಯವು 16 ಜನಆರೋಪಿಗಳನ್ನುಅವರ ಗುರುತು ಪತ್ತೆ ಆಗಲಿಲ್ಲವೆಂಬ ಕಾರಣಕ್ಕೆ ಅನುಮಾನದ ಆಧಾರದಲ್ಲಿ ಪ್ರಕರಣದಿಂದ ವಜಾ ಮಾಡಿ ತೀರ್ಪು ನೀಡಿತು. ಆದರೆ ಆ ತೀರ್ಪು ಪ್ರಶ್ನಿಸಿ ಸಾಕ್ಷಿಗಳು ಹಾಗೂ ಸತ್ತವರ ಕುಟುಂದವರು ಉಚ್ಛ ನ್ಯಾಯಾಲಯದ ಮೊರೆ ಹೋದರು.

16 ಅಪರಾಧಿಗಳಿಗೆ ಜೀವಾವಧಿ

16 ಅಪರಾಧಿಗಳಿಗೆ ಜೀವಾವಧಿ

ಮಾನವ ಹಕ್ಕು ಸಮಿತಿ ಸೇರಿ ಇನ್ನೂ ಹಲವು ಸಂಸ್ಥೆಗಳು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದವು. ಹಾಗೇ ಮರು ತನಿಖೆ ಮಾಡಿದ ನಂತರ 16 ಆರೋಪಿಗಳು ಅಪರಾಧಿಗಳೆಂದು 2018 ರ ತೀರ್ಪಿನಲ್ಲಿ ಹೇಳಲಾಯಿತು. ಇದೀಗ ಇಂದು (ಅಕ್ಟೋಬರ್ 31) ರಂದು 16 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

English summary
Delhi HC sentences 16 ex-policemen to life imprisonment in 1987 Hashimpura massacre case . Police constables killed 42 Muslims of Hashimpura in 1987.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X