• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚರ್ಚೆಗೆ ಗ್ರಾಸವಾಗಿರುವ ರಾಹುಲ್ ಕೊರಳಲ್ಲಿನ ರುದ್ರಾಕ್ಷಿ ಹಾರ

By Prasad
|
   ರಾಹುಲ್ ಗಾಂಧಿ ರುದ್ರಾಕ್ಷಿ ಮಾಲೆ ಹಾಕೊಂಡಿರೋ ಹಿಂದಿದೆ ಒಂದು ರಹಸ್ಯ!

   ಅಹ್ಮದಾಬಾದ್, ಡಿಸೆಂಬರ್ 12 : ರಾಹುಲ್ ಗಾಂಧಿಯವರು ಮಂಗಳವಾರ ಶ್ವೇತವಸ್ತ್ರಧಾರಿಯಾಗಿ ಅಹ್ಮದಾಬಾದ್ ನಲ್ಲಿರುವ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿನ ಕೋಣೆಯೊಳಗೆ ಅರ್ಚಕ ದಿಲೀಪ್ ದಾಸ್ ಅವರೊಂದಿಗೆ, ಮಾಧ್ಯಮದ ಕಣ್ಣು ತಪ್ಪಿಸಿ ಹೋಗಿದ್ದಾದರೂ ಏಕೆ?

   'ಪ್ರಶ್ನೆಯಿಂದ ನುಣುಚಿಕೊಳ್ಳಲು ಸಾಗರ ವಿಮಾನದಲ್ಲಿ ಮೋದಿ ಹಾರಾಟ'

   ಡಿಸೆಂಬರ್ 16ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ, ಗುಜರಾತ್ ಎರಡನೇ ಹಂತದ ಮತದಾನಕ್ಕೂ ಮುನ್ನ ಭರ್ಜರಿ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ ಅವರನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರು ಜಗನ್ನಾಥ ದೇವಾಲಯದ ಕೋಣೆಯೊಳಗೆ ಸೀಕ್ರೆಟ್ ಆಗಿ ಹೋಗಿದ್ದೇಕೆ ಎಂಬುದು ಗೊತ್ತಾಗುತ್ತದೆ.

   ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗೆ ಮೋದಿ ಶುಭಾಶಯ

   ಅವರ ಕತ್ತಿನಲ್ಲಿ ರುದ್ರಾಕ್ಷಿ ಮಾಲೆ ಕಾಣಿಸಿಕೊಂಡಿದೆ. ತಮ್ಮನ್ನು ಸುತ್ತಿರುವ ಕಷ್ಟಕೋಟಲೆಗಳಿಂದ ರಕ್ಷಣೆ ಪಡೆಯಲು ಅವರು ರುದ್ರಾಕ್ಷಿ ಮಾಲೆಯ ಮೊರೆ ಹೋದರಾ ಎಂಬ ಅನುಮಾನ ಹಲವರನ್ನು ಕಾಡಲು ಆರಂಭಿಸಿದೆ. ದೇವಸ್ಥಾನಕ್ಕೆ ಹೋಗಿ ಬಂದ ನಂತರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಅವರ ಕೊರಳಲ್ಲಿ ರುದ್ರಾಕ್ಷಿ ಮಾಲೆ!

   ವಿಡಿಯೋ: ಗುಜರಾತ್ ನಲ್ಲಿ ರಾಹುಲ್ ಗೆ 'ಮೋದಿ' ಘೋಷಣೆಯ ಮುಜುಗರ

   ತಾವು ಶಿವನ ಭಕ್ತ ಎಂದು ಹೇಳಿರುವ ರಾಹುಲ್ ಗಾಂಧಿಯವರು ರುದ್ರಾಕ್ಷಿ ಮಾಲೆ ಧರಿಸುವುದರಲ್ಲಿ ತಪ್ಪೇನೂ ಇಲ್ಲ, ಅಚ್ಚರಿಯೂ ಇಲ್ಲ. ಇದು ಮೂಢನಂಬಿಕೆಯ ಸಂಗತಿಯೂ ಅಲ್ಲ. ಹಿಂದೆ ಅವರ ತಂದೆಯವರಾದ ರಾಜೀವ್ ಗಾಂಧಿ ಮತ್ತು ಅಜ್ಜಿಯವರಾದ ಇಂದಿರಾ ಗಾಂಧಿ ಕೂಡ ಕೊರಳಲ್ಲಿ ರುದ್ರಾಕ್ಷಿಯನ್ನು ಧರಿಸಿದ್ದರ ಕುರುಹುಗಳಿವೆ.

   ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನದೊಳಗೆ ರೈತರ ಸಾಲಮನ್ನಾ: ರಾಹುಲ್

   ಇಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವವರು ರುದ್ರಾಕ್ಷಿ ಮಾಲೆಯನ್ನು ಧರಿಸುವುದು ರೂಢಿ. ಗುಜರಾತಿನಲ್ಲಿ ದೇವಸ್ಥಾನ ತಿರುಗುತ್ತಿರುವುದಕ್ಕಾಗಿ ಬಿಜೆಪಿಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ರಾಹುಲ್ ಗಾಂಧಿಯವರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಈ ರುದ್ರಾಕ್ಷಿಯನ್ನು ಧರಿಸಿದರಾ?

   ಹಿಂದೂ ಆಗಿದ್ದರೂ ರಾಮಮಂದಿರಕ್ಕೆ ವಿರೋಧವೇಕೆ?

   ಹಿಂದೂ ಆಗಿದ್ದರೂ ರಾಮಮಂದಿರಕ್ಕೆ ವಿರೋಧವೇಕೆ?

   ಇಷ್ಟೊಂದು ಹಿಂದೂ ದೇವಾಲಯಗಳನ್ನು ರಾಹುಲ್ ಸುತ್ತುತ್ತಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕರು, ಗುಜರಾತಿನಲ್ಲಿ ಹಿಂದೂ ಮತಗಳನ್ನು ಕಬಳಿಸುವ ಹುನ್ನಾರದಿಂದ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

   ದೇಗುಲ ಭೇಟಿಯ ಬಗ್ಗೆ ಯೋಗಿ ತಮಾಷೆ

   ದೇಗುಲ ಭೇಟಿಯ ಬಗ್ಗೆ ಯೋಗಿ ತಮಾಷೆ

   ರಾಹುಲ್ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಿರುವುದರ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಒಂದು ತಮಾಷೆಯ ಮಾತನ್ನಾಡಿದ್ದರು. ಅದೇನೆಂದರೆ, ಗುಜರಾತ್ ವಿಧಾನಸಭೆ ಚುನಾವಣೆ ಡಾ. ಮನಮೋಹನ ಸಿಂಗ್ ಅವರಿಗೆ ಮಾತಾಡುವುದನ್ನು ಕಲಿಸಿದೆ ಮತ್ತು ರಾಹುಲ್ ಅವರಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಕಲಿಸಿದೆ.

   ಸೋಮನಾಥ ದೇವಸ್ಥಾನ ಭೇಟಿಯ ವಿವಾದ

   ಸೋಮನಾಥ ದೇವಸ್ಥಾನ ಭೇಟಿಯ ವಿವಾದ

   ನವೆಂಬರ್ 29ರಂದು ಸೋಮನಾಥ ದೇಗುಲಕ್ಕೆ ರಾಹುಲ್ ಅವರು ಭೇಟಿ ನೀಡಿದ ನಂತರ, ಅವರ ಭೇಟಿ ವಿವಾದಕ್ಕೆ ಕಾರಣವಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದವರ ಹೆಸರಿರುವ ರಿಜಿಸ್ಟರ್ ನಲ್ಲಿ ರಾಹುಲ್ ಹೆಸರನ್ನು ಹಿಂದೂಯೇತರ ಪಟ್ಟಿಯಲ್ಲಿ ನಮೂದಿಸಲಾಗಿತ್ತು. ಇದನ್ನು ಅಹ್ಮದ್ ಪಟೇಲ್ ಅವರು ಅಕಸ್ಮಾತಾಗಿ ಮಾಡಿದ್ದರು. ಆದರೂ ರಾಹುಲ್ ನಿಲುವಿನ ಬಗ್ಗೆ ಪ್ರಶ್ನೆಗಳೇಳುವಂತೆ ಮಾಡಿತ್ತು.

   ರಾಹುಲ್ ಅವರು ಜನಿವಾರ ಧರಿಸುತ್ತಾರೆ

   ರಾಹುಲ್ ಅವರು ಜನಿವಾರ ಧರಿಸುತ್ತಾರೆ

   ಇದು ನಕಲಿ ದಾಖಲೆ ಪುಸ್ತಕವಾಗಿದ್ದು, ಅಸಲಿ ದಾಖಲೆ ಪುಸ್ತಕದಲ್ಲಿ ಅವರು ಹಿಂದೂ ಎಂದೇ ನಮೂದಿಸಲಾಗಿದೆ. ಸುಳ್ಳು ಫೋಟೋವನ್ನು ಬೇಕಂತಲೇ ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗುತ್ತಿದೆ. ರಾಹುಲ್ ಅವರು ಹಿಂದೂ ಧರ್ಮದವರೇ ಆಗಿದ್ದು, ಅವರು ಜನಿವಾರ ಧರಿಸುತ್ತಾರೆ ಎಂದು ಸಮಜಾಯಿಷಿ ಕೊಡುವಲ್ಲಿ ಕಾಂಗ್ರೆಸ್ ನಾಯಕರಿಗೆ ಸಾಕುಬೇಕಾಗಿತ್ತು.

   ಡಿಸೆಂಬರ್ 14ರಂದು ಎರಡನೇ ಹಂತದ ಮತದಾನ

   ಡಿಸೆಂಬರ್ 14ರಂದು ಎರಡನೇ ಹಂತದ ಮತದಾನ

   ಈ ಧರ್ಮದ ವಿಚಾರಗಳು ಏನೇ ಇರಲಿ, ರಾಹುಲ್ ಅವರಂತೂ, 22 ವರ್ಷಗಳಿಂದ ಗುಜರಾತಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಈಬಾರಿ ಭಾರೀ ಪೈಪೋಟಿ ನೀಡುತ್ತಿದ್ದಾರೆ. 89 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಗಿದಿದ್ದು, 182 ವಿಧಾನಸಭೆ ಕ್ಷೇತ್ರಗಳಿರುವ ಗುಜರಾತಿನಲ್ಲಿ ಉಳಿದ 93 ಕ್ಷೇತ್ರಗಳಿಗೆ ಡಿಸೆಂಬರ್ 14ರಂದು ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ಮತದಾರ ತಿಳಿಯಪಡಿಸಲಿದ್ದಾನೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Has Rahul Gandhi started wearing Rudraksha beads? This is the question that is being raised after Congress President-elect Rahul Gandhi on Tuesday addressed a press conference here after visiting Jagannath Temple here.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more