ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಲ್ ವಿನ್ಸಿ ಯಾನೆ ರಾಹುಲ್ ಗಾಂಧಿ ಎಂಫಿಲ್ ಪಾಸ್ ಆಗಿದ್ದು ನಿಜಾನಾ?

|
Google Oneindia Kannada News

ಅಮೇಥಿ, ಏಪ್ರಿಲ್ 13 : ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಇಬ್ಬರು ಪ್ರಮುಖ ಹುರಿಯಾಳುಗಳಾದ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ಅವರು ಪಡೆದಿರುವ ಪದವಿಗಳ ವಿಷಯವೇ ಪ್ರಮುಖ ಚರ್ಚಾವಸ್ತುವಾದರೂ ಅಚ್ಚರಿಯಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶುಕ್ರವಾರ, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು, ತಾವು ಡಿಗ್ರಿ ಪೂರ್ತಿ ಮಾಡಿಲ್ಲ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವುದು ಚರ್ಚಾವಸ್ತುವಾಗಿದ್ದರೆ, ಶನಿವಾರ, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ (ರೌಲ್ ವಿನ್ಸಿ) ಅವರ ಎಂಫಿಲ್ ಬಗ್ಗೆ ರಸವತ್ತಾದ ಚರ್ಚೆ ನಡೆಯುತ್ತಿದೆ.

ಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿ

ಮುಂಬೈ ನಿವಾಸಿಯಾಗಿರುವ ಆಶಿಶ್ ಶೆಟ್ಟಿ ಎಂಬುವವರು, ರಾಹುಲ್ ಗಾಂಧಿ ಪಡೆದಿದ್ದಾರೆ ಎನ್ನಲಾಗಿರುವ ಎಂಫಿಲ್ ಪದವಿಯ ಅಂಕಪಟ್ಟಿಯನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ರೌಲ್ ವಿನ್ಸಿ ಹೆಸರಿನಲ್ಲಿಯೇ ಭಾರತೀಯ ಪಾಸ್ ಪೋರ್ಟ್ ಕೂಡ ಇದೆ ಎಂದಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವ, ತಾವು ಹೆಮ್ಮೆಯ ರೈತನ ಮಗನೆಂದು ಕರೆದುಕೊಂಡಿರುವ ಆಶಿಶ್ ಪಟೇಲ್ ಎಂಬುವವರು ಕೂಡ, ರಾಹುಲ್ ಗಾಂಧಿ ಅವರು ಜಾತಕವನ್ನು ಬಯಲಿಗೆಳೆದಿದ್ದು, ಬಾರ್ಕಲೇಸ್ ಬ್ಯಾಂಕ್ ನಲ್ಲಿ ರೌಲ್ ವಿನ್ಸಿ ಹೆಸರಿನಲ್ಲಿ ಖಾತೆ ಇದೆ ಎಂದಿದ್ದಾರೆ.

ಅವಮಾನಿಸಿದಷ್ಟೂ ಕಾಂಗ್ರೆಸ್ ವಿರುದ್ಧ ಹೆಚ್ಚು ಕೆಲಸ ಮಾಡುತ್ತೇನೆ: ಸ್ಮೃತಿ ಇರಾನಿಅವಮಾನಿಸಿದಷ್ಟೂ ಕಾಂಗ್ರೆಸ್ ವಿರುದ್ಧ ಹೆಚ್ಚು ಕೆಲಸ ಮಾಡುತ್ತೇನೆ: ಸ್ಮೃತಿ ಇರಾನಿ

ಇದನ್ನೇ ಇಟ್ಟುಕೊಂಡು, ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬದ ಪ್ರಬಲ ಟೀಕಾಕಾರರಾಗಿರುವ ಮತ್ತು ಎಕಾನಾಮಿಕ್ಸ್ ನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡಿರುವ, ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಇದೇ ಸಂದರ್ಭವನ್ನು ಬಳಸಿಕೊಂಡು ರಾಹುಲ್ ಪಡೆದಿರುವ ಅಂಕಪಟ್ಟಿಯ ವಿಶ್ಲೇಷಣೆ ಆರಂಭಿಸಿದ್ದಾರೆ.

ಡೆವಲೆಪ್ಮೆಂಟ್ ಸ್ಟಡೀಸ್ ನಲ್ಲಿ ಎಂಫಿಲ್

ಕೇಂಬ್ರಿಜ್ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಮಿತಿ, 2008ರ ಏಪ್ರಿಲ್ 22ರಂದು ಮಿ. ರೌಲ್ ವಿನ್ಸಿ ಅವರಿಗೆ, ಡೆವಲೆಪ್ಮೆಂಟ್ ಸ್ಟಡೀಸ್ ನಲ್ಲಿ ಎಂಫಿಲ್ ಪದವಿಯಲ್ಲಿ ಗಳಿಸಿದ ಅಂಕಗಳ ಬಗ್ಗೆ ಪತ್ರವನ್ನು ನೀಡಿದೆ. ಇಲ್ಲಿ ರೌಲ್ ವಿನ್ಸಿ ಅಂದ್ರೆ ರಾಹುಲ್ ಗಾಂಧಿ. ಆ ಸಮಯದಲ್ಲಿ ರಕ್ಷಣೆಯ ದೃಷ್ಟಿಯಿಂದ ಅವರ ಹೆಸರನ್ನು ರೌಲ್ ವಿನ್ಸಿ ಎಂದು ನಮೂದಿಸಲಾಗಿದೆ ಎಂಬ ವಿವರವನ್ನು ನೀಡಲಾಗಿದೆ. ಆ ಅಂಕಪಟ್ಟಿಯಲ್ಲಿ, ಪಾಸ್ ಆಗಲು ಕನಿಷ್ಠ 60 ಅಂಕ ಪಡೆದಿರಬೇಕು. ಹೈ ಪಾಸ್ ಅಥವಾ ಪಿಎಚ್ಡಿಗೆ ಪ್ರವೇಶ ಪಡೆಯಲು 65 ಅಂಕ ಪಡೆದಿರಬೇಕಾಗಿತ್ತು ಮತ್ತು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಲಿ 70 ಅಂಕ ಪಡೆದಿರಬೇಕಾಗಿತ್ತು.

ರೌಲ್ ವಿನ್ಸಿ ಪಡೆದಿರುವ ಅಂಕಗಳೆಷ್ಟು?

ಆದರೆ, ರೌಲ್ ವಿನ್ಸಿ ಅವರು ಸರಾಸರಿ 62.8ರಷ್ಟು ಅಂಕಗಳನ್ನು ಪಡೆದಿದ್ದಾರೆ. ಅದರರ್ಥ ಪಾಸಾಗಿದ್ದಾರಾ? ಇಲ್ಲ. ಡೆವಲಪ್ಮೆಂಟ್ ಎಕಾನಾಮಿಕ್ಸ್ ನಲ್ಲಿ 65 ಅಂಕಗಳು, ಇನ್ಸ್ ಸ್ಟಿಟ್ಯೂಷನ್ ಅಂಡ್ ಡೆವಲ್ಮೆಂಟ್ ನಲ್ಲಿ 62 ಅಂಕಗಳು, ಇಂಟರ್ನ್ಯಾಷನಲ್ ಎಕಾನಾಮಿಕ್ ಇಂಟಿಗ್ರೇಷನ್ ಎಂಬ ವಿಷಯದಲ್ಲಿ 66 ಅಂಕಗಳು ಮತ್ತು ಕಡೆಯದಾಗಿ, ನ್ಯಾಷನಲ್ ಎಕಾನಾಮಿಕ್ ಪ್ಲಾನಿಂಗ್ ಅಂಡ್ ಪಾಲಿಸಿಯಲ್ಲಿ ಅವರು ಪಡೆದಿರುವ ಅಂಕ 58. ಅಂದ್ರೆ, ಒಟ್ಟಾರೆಯಾಗಿ ಪಾಸ್ ಅಂಕ ಪಡೆದಿದ್ದರೂ, ಒಂದು ವಿಷಯದಲ್ಲಿ ಫೇಲ್ ಆಗಿದ್ದಾರೆ. ಆದರೂ, ರಾಹುಲ್ ಗಾಂಧಿ ಅವರು ತಮ್ಮ ಅಫಿಡವಿಟ್ ನಲ್ಲಿ ತಾವು ಎಂಫಿಲ್ ಮಾಡಿದ್ದೇನೆ ಎಂದೇ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ : ಸ್ಮೃತಿ ವಿದ್ಯಾರ್ಹತೆ ವಿಡಂಬನೆಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ : ಸ್ಮೃತಿ ವಿದ್ಯಾರ್ಹತೆ ವಿಡಂಬನೆ

ಥೀಸಿಸ್ ಏಕೆ ಪ್ರಕಟಿಸಿಲ್ಲ? ಸ್ವಾಮಿ ಪ್ರಶ್ನೆ

'ಅವರ' ಕೇಂಬ್ರಿಜ್ ಸರ್ಟಿಫಿಕೇಟ್ ಹೇಳತ್ತೆ ಅವರ ಹೆಸರು ರೌಲ್ ವಿನ್ಸಿ, ಅವರು ಎಂಫಿಲ್ ಅಧ್ಯಯನ ಮಾಡಿದ್ದಾರೆ ಮತ್ತು ನ್ಯಾಷನಲ್ ಎಕಾನಾಮಿಕ್ ಪ್ಲಾನಿಂಗ್ ಅಂಡ್ ಪಾಲಿಸಿಯಲ್ಲಿ ಫೇಲ್ ಆಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ. ರೌಲ್ ವಿನ್ಸಿ ಅವರು ಫೇಲ್ ಆಗಿರುವ ಸರ್ಟಿಫಿಕೇಟ್ ಅನ್ನು ಅಪ್ಲೋಡ್ ಮಾಡಿದ್ದಕ್ಕೆ ಆಶಿಶ್ ಶೆಟ್ಟಿ ಅವರಿಗೆ ಧನ್ಯವಾದಗಳು. 'ಅವರು' ಎಂಫಿಲ್ ಮಾಡಿದ್ದೇ ಆಗಿದ್ದಲ್ಲಿ ಥೀಸಿಸ್ ಏಕೆ ಪ್ರಕಟಿಸಿಲ್ಲ? ಎಂದು ಪ್ರಶ್ನಿಸಿರುವ ಅವರು, ಅಲ್ಲಿ ಯಾವುದೂ ಇಲ್ಲ, ಏಕೆಂದರೆ ಎಲ್ಲ ನೆಹರೂಗಳಂತೆ 'ಅವರು' ಕೂಡ ಫೇಲ್ ಆಗಿದ್ದಾರೆ ಎಂದು ಡಾ. ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಒಂದೇ ವರ್ಷದಲ್ಲಿ ಎಂಫಿಲ್ ಪೂರೈಸಲು ಸಾಧ್ಯವೆ?

ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಅವರು 19 ವರ್ಷದವರಿದ್ದಾಗ (ಹುಟ್ಟಿದ್ದು 1970ರಲ್ಲಿ) 12ನೇ ತರಗತಿಯನ್ನು ಪಾಸ್ ಮಾಡಿದ್ದಾರೆ (ಎಐಎಸ್ಎಸ್ಸಿಇ 1989ರಲ್ಲಿ), ನಂತರ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಿಂದ ಬ್ಯಾಚಲರ್ ಆಫ್ ಆರ್ಟ್ಸ್ ಪಾಸ್ ಮಾಡಿದ್ದು 1994ರಲ್ಲಿ. ಅಂದರೆ, 12ನೇ ತರಗತಿಯಿಂದ ಬಿಎ ಪೂರೈಸಲು 5 ವರ್ಷ ತೆಗೆದುಕೊಂಡಿದ್ದಾರೆ. ನಂತರ ಒಂದೇ ವರ್ಷದಲ್ಲಿ 1995ರಲ್ಲಿ ಎಂಫಿಲ್ ಪೂರೈಸಿದ್ದಾರೆ. ಎಂಫಿಲ್ ಮಾಡಲು ಒಂದೇ ವರ್ಷ ಸಾಕೆ? ಇದು ಹೇಗೆ ಸಾಧ್ಯ? ಎಂದು ಅಜಯ್ ಚಾಲೋತ್ರೆ ಎಂಬುವವರು ಪ್ರಶ್ನಿಸಿದ್ದಾರೆ. ಇದಕ್ಕೇನು ಉತ್ತರ ನೀಡುತ್ತಾರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು?

ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

ಸ್ಮೃತಿ ಇರಾನಿ ವಿದ್ಯಾರ್ಹತೆ ಏನು?

ಸ್ಮೃತಿ ಇರಾನಿ ವಿದ್ಯಾರ್ಹತೆ ಏನು?

ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಎದುರಾಳಿಯಾಗಿ ಮತ್ತೆ ಸ್ಪರ್ಧಿಸುತ್ತಿರುವ (ಕಳೆದ ಬಾರಿ ಸೋತಿದ್ದಾರೆ) ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ತಮ್ಮ ಅಫಿಡವಿಟ್ ನಲ್ಲಿ ಬ್ಯಾಚಲರ್ ಆಫ್ ಕಾಮರ್ಸ್ ಪೂರ್ತಿ ಮಾಡಿಲ್ಲ ಎಂದು ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, ಹಿಂದೆ ತಾವು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ್ದಾಗಿ ನಮೂದಿಸಿದ್ದರು. ಜವಳಿ ಖಾತೆ ಮಂತ್ರಿಯಾಗಿರುವ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ವಿರುದ್ಧ ಮತ್ತೆ ಸೆಡ್ಡು ಹೊಡೆದಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಥಿಯ ಜೊತೆಗೆ ಕೇರಳದ ವಯನಾಡಿನಿಂದಲೂ ಈ ಬಾರಿ ಸ್ಪರ್ಧೆಗಿಳಿದಿದ್ದಾರೆ. ಅಮೇಥಿಯಲ್ಲಿ ಸೋಲುವ ಭೀತಿ ಇದ್ದಿದ್ದರಿಂದಲೇ ಮತ್ತೊಂದು ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸುತ್ತಿದ್ದಾರೆ ಎಂದು ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.

English summary
Has Rahul Gandhi completed MPhil? As per affidavit submitted by Rahul Gandhi has completed MPhil from Cambridge University in the name of Raul Vinci. Dr Subramanian Swamy has made mockery of Rahul's degree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X