ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುತ್ವದಲ್ಲಿ ತಾಲಿಬಾನ್: ಶಶಿ ತರೂರ್ ಹೊಸ ವಿವಾದ!

|
Google Oneindia Kannada News

ತಿರುವನಂತಪುರಂ, ಜುಲೈ 18: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದುತ್ವದಲ್ಲಿ ತಾಲಿಬಾನ್ ಸೃಷ್ಟಿಸಲು ನೋಡುತ್ತಿದೆಯೇ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಹಿಂದು ಪಾಕಿಸ್ತಾನ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ತರೂರ್, ಇದೀಗ ಮತ್ತೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ದಾಳಿಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ದಾಳಿ

"ಅವರು(ಬಿಜೆಪಿ) ನನ್ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳುತ್ತಾರೆ. ನಾನು ಹಿಂದುವಲ್ಲ ಎಂದು ಹೇಳಲು ಅವರಿಗೆ ಅಧಿಕಾರ ನೀಡಿದವರು ಯಾರು? ಈ ದೇಶದಲ್ಲಿ ಬದುಕಲು ನನಗೆ ಹಕ್ಕಿಲ್ಲ ಎನ್ನಲು ಅವರ್ಯಾರು? ಅವರೇನು ಹಿಂದುತ್ವದಲ್ಲಿ ತಾಲಿಬಾನ್ ಸೃಷ್ಟಿಸಲು ನೋಡುತ್ತಿದ್ದಾರೆಯೇ?" ಎದು ತರೂರ್ ಪ್ರಶ್ನಿಸಿದ್ದಾರೆ.

Has BJP started Taliban in Hinduism: Shashi Tharoor

ಜು.16 ರಂದು ಬಿಜೆಪಿ ಯುವ ಮೋರ್ಚಾ ಸದಸ್ಯರು ಕೇರಳದ ತಿರುವನಂತಪುರಂ ನಲ್ಲಿರುವ ಶಶಿ ತರೂರ್ ಕಚೇರಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ರೀತಿ ಹೇಳಿದ್ದಾರೆ.

ಹಿಂದು ಪಾಕಿಸ್ತಾನ, ಮುಸ್ಲಿಂ ಪಾಕಿಸ್ತಾನ: ಟ್ವಿಟ್ಟರ್ ಗಲಾಟೆ ನೋಡಿ!ಹಿಂದು ಪಾಕಿಸ್ತಾನ, ಮುಸ್ಲಿಂ ಪಾಕಿಸ್ತಾನ: ಟ್ವಿಟ್ಟರ್ ಗಲಾಟೆ ನೋಡಿ!

ಕಳೆದ ವಾರವಷ್ಟೇ ಕೇರಳದಲ್ಲಿ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ತರೂರ್, '2019 ರಲ್ಲೂಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ. ಪಾಕಿಸ್ತಾನದಲ್ಲಿ ಹೇಗೆ ಅಲ್ಪಸಂಖ್ಯಾತರ ಹಕ್ಕನ್ನು ಹತ್ತಿಕ್ಕಲಾಗುತ್ತಿದೆಯೋ, ಹಾಗೆಯೇ ಭಾರತದಲ್ಲೂ ಆಗಲಿದೆ' ಎಂಬ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ದೇಶದಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

English summary
Congress leader Shashi Tharoor, who earlier triggered a controversy after his "Hindu Pakistan" comment, has once again hit out at the BJP-led Centre and questioned whether they are trying to start Taliban in Hinduism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X