ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ಕೇಸ್: ವರನ ಕುಟುಂಬಕ್ಕೆ ಹಾಕಿದ ದಂಡವೆಷ್ಟು ಗೊತ್ತೇ?

|
Google Oneindia Kannada News

ಚಂಡೀಗಢ, ಏ 16: ಈ ಘಟನೆಗೆ ನ್ಯಾಯಾಲಯದ ಅಪಹಾಸ್ಯ ಅನ್ನಬೇಕೇ, ಏನೋ? ಒಟ್ಟಿನಲ್ಲಿ ಹರ್ಯಾಣದ ಪಂಚಾಯತಿಯೊಂದು ವಿಚಿತ್ರವಾದ ಆದೇಶ ನೀಡಿ ಸುದ್ದಿ ಮಾಡಿದೆ.

ಪಂಜಾಬ್ ಮತ್ತು ಹರ್ಯಾಣ ರಾಜ್ಯದ ಎರಡು ಕುಟುಂಬದ ವರದಕ್ಷಿಣೆ ಕೇಸಿನ ವಿಚಾರಣೆ ನಡೆಸುತ್ತಿದ್ದ ಹರ್ಯಾಣದ ಫತೇಬಾದ್ ಜಿಲ್ಲೆಯ ಪಂಚಾಯತಿ, ವರನ ಕುಟುಂಬಕ್ಕೆ ಕೇವಲ 75 ಪೈಸೆ ದಂಡ ವಿಧಿಸಿ ಎಲ್ಲರ ಹೆಬ್ಬೇರಿಸುವಂತೆ ಮಾಡಿದೆ. (ವರದಕ್ಷಿಣೆ ಕಿರುಕುಳ: ಪತಿಗೆ ಹತ್ತು ವರ್ಷ ಜೈಲು)

ಹರ್ಯಾಣದ ರಾತಿಯಾ ಗ್ರಾಮದ ಯುವತಿಗೆ ಮತ್ತು ಪಂಜಾಬಿನ ಗೇಲೆ ಗ್ರಾಮದ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಇದಾದ ನಂತರ ವರನ ಕಡೆಯವರು ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು.

Haryana panchayat settles dowry case by fining accused 75 paise

ಆರ್ಥಿಕವಾಗಿ ಸಭಲರಾಗಿರದ ವಧುವಿನ ಕುಟುಂಬ ವರನ ಕಡೆಯ ಬೇಡಿಕೆಯನ್ನು ತಿರಸ್ಕರಿಸಿದ್ದರು. ಹೀಗಾಗಿ, ಮದುವೆ ಮುರಿದು ಬಿದ್ದು ಸ್ಥಳೀಯ ಪಂಚಾಯತಿಯ ಮೆಟ್ಟಲೇರಿತ್ತು.

ವಿಚಾರಣೆ ನಡೆಸಿದ ಪಂಚಾಯತಿಯವರು ಕೊನೇ ಪಕ್ಷ ವಧುವಿನ ಕಡೆಯವರು ಶಕುನ ರೂಪದಲ್ಲಿ ಹಿಂದೆ ನೀಡಿದ್ದ 2.11 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಆದೇಶಿಸಿಸದೇ, ವರನ ಕಡೆಯವರಿಗೆ ಕೇವಲ 75 ಪೈಸೆ ದಂಡ ವಿಧಿಸಿ ಪ್ರಕರಣಕ್ಕೆ ಮಂಗಳ ಹಾಡಿದ್ದಾರೆ. 20.01.2014ಕ್ಕೆ ನಿಶ್ಚಿತಾರ್ಥ ನಡೆದು 22.04.2015ಕ್ಕೆ ಮದುವೆಗೆ ದಿನ ನಿಗದಿಯಾಗಿತ್ತು.

ಮದುವೆಯ ದಿನ ಹತ್ತಿರ ಬರುತ್ತಿದ್ದಂತೆಯೇ ವರನ ಕಡೆಯವರಿಂದ ಕಾರಿನ ಬೇಡಿಕೆ ಬಂತು. ಇದು ನಮಗೆ ಅಸಾಧ್ಯವಾಗಿತ್ತು, ಹೀಗಾಗಿ ಮದುವೆ ಮುರಿದಿದೆ. ನಾವು ಆಮಂತ್ರಣ ಪತ್ರವನ್ನು ಹಂಚುತ್ತಿದ್ದೆವು ಎಂದು ವಧುವಿನ ತಂದೆ ನೋವನ್ನು ವ್ಯಕ್ತ ಪಡಿಸುತ್ತಾರೆ.

ಬೇರೆ ದಾರಿಯಿಲ್ಲದೆ ನಾವು ಪೊಲೀಸರು ಮೊರೆ ಹೋದೆವು. ಫತೇಬಾದ್ ಪೊಲೀಸರು ಕೇಸನ್ನು ಪಂಚಾಯತಿ ಮಟ್ಟದಲ್ಲಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.

ನಮಗೆ ವರನ ಕಡೆಯಿಂದ ಏನೂ ಪರಿಹಾರ ಬರದಿದ್ದರೂ ಚಿಂತೆಯಿಲ್ಲ, ಮಗಳನ್ನು ಇಂತಹ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿಲ್ಲ ಎನ್ನುವ ತೃಪ್ತಿಯಿದೆ ಎಂದು ವಧುವಿನ ತಂದೆ ನಿಟ್ಟುಸಿರು ಬಿಡುತ್ತಾರೆ.

English summary
A panchayat in Fatehabad district in Haryana settled a dowry case by fining the accused family of just 75 paise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X