ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್‌ನಲ್ಲಿ 50 ಕೋಟಿ ಸಾಲ; ಬೆಚ್ಚಿ ಬಿದ್ದ ಟೀ ಅಂಗಡಿ ಮಾಲೀಕ

|
Google Oneindia Kannada News

ಚಂಡೀಗಢ, ಜುಲೈ 23 : ಕೊರೊನಾ ಲಾಕ್ ಡೌನ್ ಪರಿಸ್ಥಿತಿ ಹಿನ್ನಲೆಯಲ್ಲಿ ಅರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಟೀ ಅಂಗಡಿ ಮಾಲೀಕ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗಿದ್ದ. ಬ್ಯಾಂಕ್ ಅಧಿಕಾರಿಗಳ ಮಾತು ಕೇಳಿ ಆತ ಬೆಚ್ಚಿ ಬಿದ್ದಿದ್ದಾನೆ.

ರಾಜ್‌ ಕುಮಾರ್ ಎಂಬಾತ ಹರ್ಯಾಣ ರಾಜ್ಯದ ಕುರುಕ್ಷೇತ್ರದ ರಸ್ತೆ ಬದಿ ಟೀ ವ್ಯಾಪಾರಿ ಮಾಡುತ್ತಿದ್ದ. ಕೊರೊನಾ ಕಾರಣದಿಂದಾಗಿ ವ್ಯಾಪಾರ ಸರಿಯಾಗಿ ನಡೆಯದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ.

ಲಾಕ್‌ಡೌನ್ ಎಫೆಕ್ಟ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸಾಲ ಜಿಡಿಪಿಯ ಶೇ. 87.6ರಷ್ಟು ತಲುಪಲಿದೆಲಾಕ್‌ಡೌನ್ ಎಫೆಕ್ಟ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸಾಲ ಜಿಡಿಪಿಯ ಶೇ. 87.6ರಷ್ಟು ತಲುಪಲಿದೆ

ಬ್ಯಾಂಕ್‌ನಿಂದ ಸಾಲ ಪಡೆದು ವ್ಯಾಪಾರ ಮುಂದುವರೆಸುವ ತೀರ್ಮಾನ ಕೈಗೊಂಡಿದ್ದ ರಾಜ್ ಕುಮಾರ್ ಬ್ಯಾಂಕ್‌ಗೆ ಹೋಗಿ ಸಾಲಕ್ಕಾಗಿ ಅರ್ಜಿ ಹಾಕಿದ್ದ. ಅರ್ಜಿಯನ್ನು ಬ್ಯಾಂಕ್ ಸಿಬ್ಬಂದಿ ತಿರಸ್ಕರಿಸಿದ್ದಾರೆ.

ವಿಶೇಷ: ಭಾರತೀಯ ಬ್ಯಾಂಕ್‌ಗಳಿಗೆ ₹1.47 ಲಕ್ಷ ಕೋಟಿ ಸಾಲ ಬಾಕಿ..! ವಿಶೇಷ: ಭಾರತೀಯ ಬ್ಯಾಂಕ್‌ಗಳಿಗೆ ₹1.47 ಲಕ್ಷ ಕೋಟಿ ಸಾಲ ಬಾಕಿ..!

Haryana Tea Stall Owner Have Debt Of 50 Crore In Bank

ಬ್ಯಾಂಕ್ ಅಧಿಕಾರಿಗಳ ಪ್ರಕಾರ ರಾಜ್ ಕುಮಾರ್ ಈಗಾಗಲೇ 50 ಕೋಟಿ ಸಾಲ ಪಡೆದಿದ್ದಾನೆ. ಆದ್ದರಿಂದ, ಆತನಿಗೆ ಮತ್ತೆ ಸಾಲ ನೀಡಲು ಸಾಧ್ಯವಿಲ್ಲ. ಬ್ಯಾಂಕ್ ಅಧಿಕಾರಿಗಳ ಮಾತು ಕೇಳಿ ರಾಜ್ ಕುಮಾರ್ ಬೆಚ್ಚಿ ಬಿದ್ದಿದ್ದಾರೆ.

ಸದ್ಯದಲ್ಲೇ 'ಗೂಗಲ್ ಪೇ'ಯಿಂದ ಸಾಲ ಸೌಲಭ್ಯಸದ್ಯದಲ್ಲೇ 'ಗೂಗಲ್ ಪೇ'ಯಿಂದ ಸಾಲ ಸೌಲಭ್ಯ

"ತಾನು ಇದುವರೆಗೂ ಯಾವುದೇ ಸಾಲವನ್ನು ಪಡೆದಿಲ್ಲ. ಆದರೆ, ಬ್ಯಾಂಕ್ ಅಧಿಕಾರಿಗಳ ಪ್ರಕಾರ, ದಾಖಲೆಗಳ ಪ್ರಕಾರ 50 ಕೋಟಿ ಸಾಲವನ್ನು ನಾನು ಪಡೆದಿದ್ದೇನೆ. ಇದು ಹೇಗೆ ಎಂದು ಅರ್ಥವೇ ಆಗುತ್ತಿಲ್ಲ" ಎಂದು ರಾಜ್ ಕುಮಾರ್ ಹೇಳಿದ್ದಾರೆ.

ಟೀ ಅಂಗಡಿಗೆ ಬರುವ ಜನರಿಗೆ ಕಾಗದ ಪತ್ರಗಳನ್ನು ತೋರಿಸುತ್ತಿದ್ದಾರೆ. ಇದು ಹೇಗೆ ಸಾಧ್ಯ? ಬ್ಯಾಂಕ್‌ನಿಂದ ಆಗಿರುವ ವಂಚನೆಗೆ ತನಗೆ ನ್ಯಾಯ ಬೇಕು ಎಂದು ಕೇಳುತ್ತಿದ್ದಾನೆ. ಒಂದು ವೇಳೆ ಬ್ಯಾಂಕ್ ಸಾಲ ಮರುವಪಾವತಿ ಮಾಡುವಂತೆ ನೋಟಿಸ್ ನೀಡಿದರೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ ರಾಜ್ ಕುಮಾರ್.

English summary
Haryana Kurukshetra based Rajkumar who run tea stall upset after bank rejected his loan application. Bank said that he already have debt of Rs 50 crore. But Rajkumar don't know how it is possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X