• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಲಿಮಂಜಾರೊ ಪರ್ವತವೇರಿ ಸಾಧನೆ ಮಾಡಿದ ಹರಿಯಾಣದ ಯುವತಿ

|

ನವದೆಹಲಿ, ಜುಲೈ 28: ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಕಿರಿಯ ಭಾರತೀಯ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಹರಿಯಾಣದ ಯುವತಿ ಶಿವಾಂಗಿ ಪಾಠಕ್, ಆಫ್ರಿಕಾದ ಅತ್ಯಂತ ಎತ್ತರ ಪರ್ವತ ಮೌಂಟ್ ಕಿಲಿಮಂಜಾರೊವನ್ನು ಏರಿದ್ದಾರೆ.

ಹರಿಯಾಣದ ಹಿಸಾರ್ ನಗರದ 17 ವರ್ಷದ ಶಿವಾಂಗಿ, ಮೂರು ದಿನಗಳಲ್ಲಿ ಕಿಲಿಮಂಜಾರೊವನ್ನು ಏರಿದ್ದಾರೆ. ಈ ಮೂಲಕ ಶಿವಾಂಗಿ ಇನ್ನೊಂದು ದಾಖಲೆಯನ್ನು ನಿರ್ಮಿಸಿರುವ ಸಾಧ್ಯತೆ ಇದೆ. ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ದೊರಕಬೇಕಿದೆ.

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಚಿಕ್ಕಂದಿನಿಂದಲೂ ತಮಗೆ ಅತಿ ಎತ್ತರದ ಪರ್ವತಗಳನ್ನು ಏರಬೇಕು ಎಂಬ ಆಸೆ ಇದ್ದಿದ್ದಾಗಿ ಶಿವಾಂಗಿ ಹೇಳಿಕೊಂಡಿದ್ದಾರೆ.

ಅರುಣಿಮಾ ಸ್ಫೂರ್ತಿ

ಅರುಣಿಮಾ ಸ್ಫೂರ್ತಿ

'ಜನಜಂಗುಳಿಯಿಂದ ಹೊರಗಿರಲು ಮತ್ತು ವಿಭಿನ್ನವಾದುದ್ದನ್ನು ಸಾಧಿಸಲು ಯಾವಾಗಲೂ ಬಯಸುತ್ತಿದ್ದೆ. ಒಮ್ಮೆ ಅರುಣಿಮಾ ಸಿನ್ಹಾ ಅವರ ವಿಡಿಯೋವನ್ನು ನೋಡಿ ಸ್ಫೂರ್ತಿಗೊಂಡೆ.

ಅಲ್ಲಿಂದ ಪರ್ವತಾರೋಹಣದ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದೆ. ಅಲ್ಲಿಂದ ಈ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸಲು ನನಗೆ ಪ್ರೇರಣೆ ದೊರಕಿತು ಎಂದು ಹೇಳಿದ್ದಾರೆ.

ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!

ಸ್ಫೂರ್ತಿಯಾಗುವ ಬಯಕೆ

ಸ್ಫೂರ್ತಿಯಾಗುವ ಬಯಕೆ

ಪೋಷಕರು ಮತ್ತು ಕುಟುಂಬದಿಂದ ಬೆಂಬಲ ಪಡೆದುಕೊಂಡಿರುವ ಶಿವಾಂಗಿ, ದೇಶದ ಎಲ್ಲ ಯುವತಿಯರಿಗೆ ತಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಸ್ಫೂರ್ತಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.

'ತಮ್ಮ ಗುರಿಗಳನ್ನು ಈಡೇರಿಸಿಕೊಳ್ಳಬಲ್ಲೆವು ಎಂದು ಯುವತಿಯರು ತಮ್ಮ ಪೋಷಕರ ಮನವೊಲಿಸಬೇಕು. ಅದೇ ರೀತಿ ಪೋಷಕರು ತಮ್ಮಿಂದ ಸಾಧ್ಯವಾದಷ್ಟೂ ರೀತಿಯಲ್ಲಿ ಮಕ್ಕಳಿಗೆ ಬೆಂಬಲ ನೀಡಬೇಕು. ಮಹಿಳೆ ಸಾಧಿಸಲಾರದ್ದು ಯಾವುದೇ ಇಲ್ಲ ಎಂದು ಶಿವಾಂಗಿ ಹೇಳಿದ್ದಾರೆ.

ಶಿವಾಂಗಿ ಸಾಹಸಕ್ಕೆ ಮೆಚ್ಚುಗೆ

ಹರಿಯಾಣದ ಹಿಸಾರ್‌ನ 17 ವರ್ಷದ ಶಿವಾಂಗಿ ಆಫ್ರಿಕಾದ 'ಮೌಂಟ್ ಎವರೆಸ್ಟ್' ಅನ್ನು ಏರಿದ ಭಾರತದ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಪ್ರದೀಪ್ ದಾಸ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಮೈಲುಗಲ್ಲು

ಸಣ್ಣ ಪಟ್ಟಣ ಹಿಸಾರ್‌ನ 17 ವರ್ಷದ ಯುವತಿ ಶಿವಾಂಗಿ ಪಾಠಕ್ ಆಫ್ರಿಕಾದ ಅತಿ ಎತ್ತರದ ತುದಿ ಮೌಂಟ್ ಕಿಲಿಮಂಜಾರೊವನ್ನು ಯಶಸ್ವಿಯಾಗಿ ಏರುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. 5,895 ಎತ್ತರವಿರುವ ಇದು ಜಗತ್ತಿನ ಅತಿ ಎತ್ತರದ ಏಕಾಂಗಿ ಪರ್ವತ ಎಂದು ಅಕ್ಷಿತ್ ವೇದ್ಯನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಯುವತಿಯರಿಂದ ಹೆಮ್ಮೆ

ಕ್ರೀಡೆಯ ಯಾವುದೇ ವಿಭಾಗ ತೆಗೆದುಕೊಂಡರೂ, ಹರಿಯಾಣದ ಯುವತಿಯರು ರಾಜ್ಯ ಮತ್ತು ದೇಶಕ್ಕೆ ಹೆಮ್ಮೆ ಉಂಟುಮಾಡುತ್ತಿದ್ದಾರೆ ಎಂದು ಪ್ರದೀಪ್ ಪೋರಿಯಾ ಎಂಬುವವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Haryana's Shivangi Pathak scaled Africa's highest peak Mount Kilimanjaro in three days. She has become youngest Indian to scale it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more