ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣದ ಹಳ್ಳಿಯೊಂದಕ್ಕೆ ಟ್ರಂಪ್ ಹೆಸರು, ಯಾಕಿರಬಹುದು ಊಹಿಸಿ...

|
Google Oneindia Kannada News

ಗುರ್ ಗಾಂವ್, ಜೂನ್ 14: ಹರಿಯಾಣದ ಮೇವಟ್ ನಲ್ಲಿರುವ ಗ್ರಾಮವೊಂದಕ್ಕೆ ಡೊನಾಲ್ಡ್ ಟ್ರಂಪ್ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ಬಹಿರಂಗ ಪಡಿಸಿರುವುದು ಸುಲಭ್ ಇಂಟರ್ ನ್ಯಾಷನಲ್ ನ ಸ್ಥಾಪಕ ಹಾಗೂ ಮುಖ್ಯಸ್ಥ ಬಿಂದೇಶ್ವರ್ ಪಾಠಕ್. ಈ ಗ್ರಾಮವು ಬಯಲು ಶೌಚಾಲಯಮುಕ್ತ ಗ್ರಾಮ ಎಂಬ ಅಗ್ಗಳಿಕೆ ಪಡೆದಿದೆ.

ಅತ್ತೆಗೆ ಶೌಚಾಲಯ ನಿರ್ಮಿಸಲು 6 ಮೇಕೆ ಮಾರಿದ ಸೊಸೆಅತ್ತೆಗೆ ಶೌಚಾಲಯ ನಿರ್ಮಿಸಲು 6 ಮೇಕೆ ಮಾರಿದ ಸೊಸೆ

ಅಂಥ ಗ್ರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲಾಗಿದೆ. ಈ ರೀತಿ ಟ್ರಂಪ್ ಹೆಸರಿಟ್ಟರೆ ಇಡೀ ಜಗತ್ತು ಭಾರತದ ಸ್ವಚ್ಛತಾ ಅಭಿಯಾನದ ಕಡೆಗೆ ತಿರುಗಿ ನೋಡುತ್ತದೆ ಎಂಬ ಲೆಕ್ಕಾಚಾರ ಈ ನಡೆಯ ಹಿಂದಿದೆ. ಈ ಸಂಸ್ಥೆಯು ಮೇವಟ್ ನ ಕೆಲವು ಗ್ರಾಮಗಳನ್ನು ಬಯಲು ಶೌಚಾಲಯಮುಕ್ತ ಮಾಡಲು ಹೊರಟಿದೆ.

Haryana's village to be named after Donald Trump

"ನಾವು ಪ್ರದೇಶ (ಮೇವಟ್)ವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಯಾವ ಹಳ್ಳಿಗೆ ಟ್ರಂಪ್ ಹೆಸರನ್ನು ಇಡಬೇಕು ಎಂಬುದನ್ನು ಮುಂದಿನ ಕೆಲವು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ" ಎಂದು ಪಾಠಕ್ ಅಮೆರಿಕದಿಂದ ಫೋನ್ ಮೂಲಕ ತಿಳಿಸಿದ್ದಾರೆ. ಭಾರತಕ್ಕೆ ಬಂದ ನಂತರ ಹಳ್ಳಿಗರ ಜತೆಗೆ ಚರ್ಚಿಸಿ, ಯಾವ ಹಳ್ಳಿಗೆ ಟ್ರಂಪ್ ಹೆಸರು ಇಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದಿದ್ದಾರೆ.

ಬಹಿರ್ದೆಸೆ ಮುಕ್ತ ಭಾರತ : ಮೋದಿ ಸರಕಾರದ ರಿಪೋರ್ಟ್ ಕಾರ್ಡ್ಬಹಿರ್ದೆಸೆ ಮುಕ್ತ ಭಾರತ : ಮೋದಿ ಸರಕಾರದ ರಿಪೋರ್ಟ್ ಕಾರ್ಡ್

ಸರಕಾರವು ದೇಶವನ್ನು ಬಯಲು ಶೌಚಾಲಯಮುಕ್ತವನ್ನಾಗಿ ಮಾಡಲು ಯತ್ನಿಸುತ್ತಿದೆ. ನಮ್ಮ ಸಂಸ್ಥೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಗುರಿ ಸಾಧಿಸಲು ಸಹಾಯ ಮಾಡಿ ಎಂದು ಜಾಗತಿಕ ಸಮುದಾಯವನ್ನು ಮನವಿ ಮಾಡುತ್ತಿದ್ದೇವೆ. ಕಾರ್ಪೋರೇಟ್ ಕಂಪೆನಿಗಳು ಹಳ್ಳಿ, ಬ್ಲಾಕ್ ಅಥವಾ ತಾಲೂಕನ್ನು ಈ ಅಭಿಯಾನದ ಭಾಗವಾಗಿ ದತ್ತು ತೆಗೆದೆಕೊಳ್ಳಬಹುದು ಎಂದು ಪಾಠಕ್ ಹೇಳಿದ್ದಾರೆ.

English summary
Sulabh International founder and chief Bindeshwar Pathak has announced that an open defecation-free (ODF) village in Mewat will be named after the US President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X