• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಲೀಸರಿಗೆ ಸಿಗದ ಹನಿಪ್ರೀತ್ ಚಾನೆಲ್ ಗೆ ಸಿಕ್ಕಿದ್ದು ಹೇಗೆ? ಟ್ವಿಟ್ಟಿಗರ ಪ್ರಶ್ನೆ!

|

ನವದೆಹಲಿ, ಅಕ್ಟೋಬರ್ 03: ಎರಡು ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಮ್ ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿ ಈಗಾಗಲೇ ತಿಂಗಳು ಕಳೆದಿದೆ. ಆದರೆ ರಾಮ್ ರಹೀಮ್ ದತ್ತುಪುತ್ರಿ ಹನೀಪ್ರೀತ್ ಇನ್ಸಾನ್ ಮಾತ್ರ ಅಂದಿನಿಂದ ಕಾಣೆಯಾಗಿದ್ದರು.

ಅವರ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಆಕೆಯ ಪತ್ತೆಗೆ ಸಾಕಷ್ಟು ಪ್ರಯತ್ನಪಟ್ಟರೂ ಆಕೆ ಎಲ್ಲಿಯೂ ಕಾಣಿಸಿಕೊಂದಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಆಕೆ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಎತ್ತಿಹಿಡಿದೆ.

ರಾಮ್ ರಹೀಮ್ ಜತೆಗಿನ ಸಂಬಂಧ ಬಗ್ಗೆ ಹನಿಪ್ರೀತ್

ಪೊಲೀಸರ ಕಣ್ಣಿಗೆ ಮಣ್ಣೆರೆಚಿದ್ದ ಹನೀಪ್ರೀತ್ ಚಾನೆಲ್ ಗಳಿಗೆ ಸಿಕ್ಕಿದ್ದು ಹೇಗೆ? ಪೊಲೀಸರು ಹುಡುಕಾಡುತ್ತಿರುವ ಹನೀಪ್ರೀತ್ ರನ್ನು ಟಿಆರ್ ಪಿ ಗಾಗಿ ಸಂದರ್ಶನ ಮಾಡಿ, ಪೊಲೀಸರಿಗೆ ಆಕೆ ಇರುವ ಸ್ಥಳದ ಮಾಹಿತಿಯನ್ನೂ ನೀಡದ ಚಾನೆಲ್ ನ ನಿಲುವು ಸರಿಯೇ?

ಸಂದರ್ಶನದಲ್ಲಿ ಆಕೆ ಹೇಳಿದಂತೆ, ಆಕೆಗೂ-ರಾಮ್ ರಹೀಮ್ ಗೂ ತಂದೆ-ಮಗಳ ಪವಿತ್ರ ಸಂಬಂಧ ಬಿಟ್ಟು ಬೇರೆ ಸಂಬಂಧ ಇರಲೇ ಇಲ್ಲವೇ..? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಎದ್ದಿವೆ. ಟ್ವಿಟ್ಟರ್ ನಲ್ಲಿ ಹನೀಪ್ರೀತ್ ಇನ್ಸಾನ್ ಟ್ರೆಂಡಿಂಗ್ ಆಗಿದ್ದು, ಈ ಕುರಿತು ಹಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹೆಚ್ಚಿನ ಜನ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿದ್ದಾರೆ.

ಹರ್ಯಾಣ ಪೊಲೀಸರ ವೈಫಲ್ಯ

ಹರ್ಯಾಣ ಪೊಲೀಸರು ಹನೀಪ್ರೀತ್ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ. ಆದರೆ ಚಾನೆಲ್ ವೊಂದು ಅವರ ಸಂದರ್ಶನ ಮಾಡಿದೆ. ಇದು ಹರ್ಯಾಣ ಸರ್ಕಾರದ ಮತ್ತು ಪೊಲೀಸರಸ ವೈಫಲ್ಯವನ್ನು ಸಾಬೀತುಪಡದಿಸಿದೆ ಎಂದು ಪ್ರತಿಭಾ ಭಾಸ್ಕರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ದಾವೂದ್ ಇಬ್ರಾಹಿಂ ಪತ್ತೆಗೂ ಸರ್ಕಾರ ಚಾನೆಲ್ ಸಹಾಯ ಕೇಳಲಿ!

ಹನೀಪ್ರೀತ್ ರನ್ನು ಸುದ್ದಿ ವಾಹಿನಿ ಪತ್ತೆಹಚ್ಚಿದೆ. ದಾವೂದ್ ಇಬ್ರಾಹಿಂ ಪತ್ತೆಗೂ ಸರ್ಕಾರ ಸುದ್ದಿ ವಾಹಿನಿಗಳ ಸಹಾಯ ಕೇಳಬೇಕಿದೆ ಎಂದು ಠಾಕೂರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಚಾನೆಲ್ ಗಳಿಗೆ ಟಿಆರ್ ಪಿಯೇ ಎಲ್ಲ!

ಕೆಲವು ಚಾನೆಲ್ ಗಳು ಹನೀಪ್ರೀತ್ ರನ್ನು ಪತ್ತೆ ಮಾಡಬಲ್ಲವು. ಆದರೆ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾರವು. ಏಕೆಂದರೆ ಅವಕ್ಕೆ ಟಿಆರ್ ಪಿಯೇ ಎಲ್ಲ ಎಂದು ಆನಂದ್ ಪಾಂಡೆ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಚಾನೆಲ್ ಗಳು ಹೇಗೆ ಪತ್ತೆ ಮಾಡಿದವು?

ತನ್ನೆಲ್ಲ ಬಲಗಳನ್ನು ಉಪಯೋಗಿಸಿಯೂ ಸರ್ಕಾರ, ಹನೀಪ್ರೀತ್ ಇನ್ಸಾನ್ ಕುರಿತು ಯಾವುದೇ ಸುಳಿವನ್ನೂ ಪತ್ತೆ ಮಾಡಲಾಗದಿರುವಾಗ ನಮ್ಮ ಚಾನೆಲ್ ಗಳು ಹೇಗೆ ಪತ್ತೆ ಮಾಡಿದವು? ಎಂದು ಜಿಯಾ ನೋಮನಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪಂಖುರಿ ಪಾಠಕ್

ಹನೀಪ್ರೀತ್ ರನ್ನು ಚಾನೆಲ್ ಗಳು ಪತ್ತೆ ಮಾಡಬಲ್ಲವು, ಆದರೆ ಎಲ್ಲ ಸಂಪನ್ಮೂಲಗಳನ್ನು ಹೊಂದಿದ್ದರೂ ನಮ್ಮ ಸರ್ಕಾರಕ್ಕೆ, ಏಜೆನ್ಸಿಗಳಿಗೆ ಅದು ಸಾಧ್ಯವಾಗಿಲ್ಲ. ಅಚ್ಚರಿಯ ವಿಷಯವಲ್ಲವೇ? ಎಂದು ಪಂಖುರಿ ಪಾಠಕ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
Haryana police failed to trace Dera chief Ram rahims adopted daughter Honey Preet but a news channel had exclusive interview. Twitterians say, it shows failure of government and police power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more