ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ರಾಜ್ಯಗಳ ಚುನಾವಣೆಗೆ ದಿನಾಂಕ ಫಿಕ್ಸ್

|
Google Oneindia Kannada News

ನವದೆಹಲಿ, ಸೆ. 12 : ಮಿನಿ ಸಮರವೆಂದೆ ಕರೆಯಲ್ಪಟ್ಟಿರುವ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 15ರಂದು ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಪತ್‌ಕುಮಾರ್‌ ಗುರುವಾರ ತಿಳಿಸಿದ್ದಾರೆ.(ಬಳ್ಳಾರಿ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ)

vs sampat

ಅದರಂತೆ ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.ಮಹಾರಾಷ್ಟ್ರದ 228 ಮತ್ತು ಹರಿಯಾಣಾದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈ ಬಗ್ಗೆ ಎಲ್ಲಾ ಮತಗಟ್ಟೆಗಳಿಗೆ ಸೆಪ್ಟಂಬರ್‌ 20ಕ್ಕೆ ಸ್ಪಷ್ಟ ಆದೇಶ ತಿಳಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಸೆಪ್ಟಂಬರ್‌ 27 ಕೊನೆ ದಿನವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಚುನಾವಣೆಗೆ ಸಂಬಂಧಿಸಿ ಮಹಾರಾಷ್ಟ್ರದಲ್ಲಿ 90,402 ಮತ್ತು ಹರಿಯಾಣದಲ್ಲಿ 16, 244 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ನಿಗದಿಯಂತೆ ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್‌ ವಿಧಾಸಸಭಾ ಚುನಾವಣೆಗೂ ದಿನಾಂಕ ನಿಗದಿಯಾಗಬೇಕಿತ್ತು. ಆದರೆ ಈ ರಾಜ್ಯಗಳ ಚುನಾವಣೆ ಜನವರಿ ತಿಂಗಳಿಗೆ ಮುಂದೆ ಹೋಗಿದೆ ಎಂದು ಹೇಳಲಾಗಿದೆ.

English summary
Assembly polls in Haryana and Maharashtra to be held on October 15 and counting will be on October 19. Notification for polls will be issued on September 20 and last date for filing nomination is September 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X