ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಮಹಾರಾಷ್ಟ್ರದಲ್ಲಿ 60% ಹರಿಯಾಣದಲ್ಲಿ 65% ಮತದಾನ ದಾಖಲು

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಇಂದು(ಸೋಮವಾರ) ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.

ಎರಡೂ ರಾಜ್ಯಗಳ ಚುನಾವಣೆ ಕುತೂಹಲ ಕೆರಳಿಸಿದ್ದು, ಮತದಾನದ ನಿಮಿತ್ತ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. ಎರಡು ರಾಜ್ಯಗಳಲ್ಲೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮಹಾರಾಷ್ಟ್ರ, ಹರ್ಯಾಣ ಚುನಾವಣೆ; ಸೋಮವಾರ ಮತದಾನಮಹಾರಾಷ್ಟ್ರ, ಹರ್ಯಾಣ ಚುನಾವಣೆ; ಸೋಮವಾರ ಮತದಾನ

Haryana, Maharashtra Assembly Election Polling 2019 Live Updates in Kannada

ಫಲಿತಾಂಶ ಅಕ್ಟೋಬರ್ 24 ರಂದು ಹೊರಬೀಳಲಿದ್ದು, ಕಳೆದ ಏಪ್ರಿಲ್ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿ ಮಾಡಿಕೊಂಡಿವೆ. ಎರಡೂ ರಾಜ್ಯಗಳಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಫಲಿತಾಂಶ ಕುತೂಹಲ ಕೆರಳಿಸಿದೆ.

"ಎಲೆಕ್ಷನ್ ಗಳು ಇರುವಾಗೆಲ್ಲ ಸರ್ಜಿಕಲ್ ಸ್ಟ್ರೈಕ್ ಮಾಡುವ ಪರಿಪಾಠ"

ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆಯ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಲೈವ್ ಅಪ್ಡೇಟ್ಸ್ ಗಳ ಮೂಲಕ ನೀಡಲಿದೆ.

Newest FirstOldest First
8:35 PM, 21 Oct

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಹರಿಯಾಣ ರಾಜ್ಯದಲ್ಲಿ ದಾಖಲೆಯ 65% ಮತದಾನವಾಗಿದೆ. ಮಹಾರಾಷ್ಟ್ರ ದಲ್ಲಿ 60.25% ಮತದಾನವಾಗಿದೆ.
6:15 PM, 21 Oct

ಮತದಾನ ಅಂತ್ಯವಾದ ನಂತರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 55.45% ಮತದಾನ ಆಗಿದೆ. ಹರಿಯಾಣಾ ಚುನಾವಣೆಯಲ್ಲಿ 61.92% ಮತದಾನವಾಗಿದೆ.
6:10 PM, 21 Oct

ಮಹಾರಾಷ್ಟ್ರ ಮತ್ತು ಹರಿಯಾಣಾ ವಿಧಾನಸಭೆ ಚುನಾವಣೆಗೆ ಮತದಾನ ಅಂತ್ಯಗೊಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
3:52 PM, 21 Oct

ಪ್ರತಿಯೊಬ್ಬರೂ ಮತಗಟ್ಟೆಗೆ ಬಂದು ಮತಚಲಾಯಿಸಿ. ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸಿ- ಶರದ್ ಪವಾರ್, ಎನ್ ಸಿಪಿ ಮುಖಂಡ
3:49 PM, 21 Oct

ಮುಂಬೈಯ ಅಂಧೇರಿ(ಪಶ್ಚಿಮ) ಕ್ಷೇತ್ರದಲ್ಲಿ ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ ಮತ ಚಲಾಯಿಸಿದರು.
3:02 PM, 21 Oct

ಮುಂಬೈಯಲ್ಲಿ ಮತ ಚಲಾಯಿಸಿದ ಶಬಾನಾ ಆಜ್ಮಿ, ಜಾವೇದ್ ಅಖ್ತರ್
3:01 PM, 21 Oct

ಬಾಂದ್ರಾ(ಪಶ್ಚಿಮ) ಕ್ಷೇತ್ರದಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
Advertisement
2:01 PM, 21 Oct

ಅಂಧೇರಿ(ಪಶ್ಚಿಮ) ಕ್ಷೇತ್ರದಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟರಾದ ಹೃತಿಕ್ ರೋಷನ್, ಅನಿಲ್ ಕಪೂರ್
12:36 PM, 21 Oct

ಬಾಂದ್ರಾ (ಪಶ್ಚಿಮ) ಕ್ಷೇತ್ರದ ಮತಗಟ್ಟಯಲ್ಲಿ ಮತ ಚಲಾಯಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಪತ್ನಿ ಅಂಜಲಿ, ಪುತ್ರ ಅರ್ಜುನ್
12:21 PM, 21 Oct

ಹಿರಿಯ ಕಾಂಗ್ರೆಸ್ ಮುಖಂಡ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭುಪೀಂದರ್ ಸಿಂಗ್ ಹೂಡಾ ಅವರು ರೋಹ್ಟಕ್ ನಲ್ಲಿ ಮತ ಚಲಾಯಿಸಿದರು.
11:55 AM, 21 Oct

ಬಾಂದ್ರಾ(ಪೂರ್ವ) ಕ್ಷೇತ್ರದಲ್ಲಿ ಮತ ಚಲಾಯಿಸಿದ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಪತ್ನಿ ರಶ್ಮಿ, ಪುತ್ರರಾದ ತೇಜಸ್ ಮತ್ತು ಆದಿತ್ಯ ಠಾಕ್ರೆ. ಆದಿತ್ಯ ಠಾಕ್ರೆ ಮಹಾರಾಷ್ಟ್ರದ ವೋರ್ಲಿ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
11:26 AM, 21 Oct

ದಾಖಲೆಯ ವಿಜಯದೊಂದಿಗೆ ಬಿಜೆಪಿ-ಶಿವಸೇನೆ ಮುಂದಿನ ಸರ್ಕಾರ ರಚಿಸಲಿದೆ- ನಿತಿನ್ ಗಡ್ಕರಿ, ಕೇಂದ್ರ ಸಚಿವ
Advertisement
11:21 AM, 21 Oct

ಹರ್ಯಾಣ

ಹರ್ಯಾಣದಲ್ಲಿ 10 ಗಂಟೆಯವರೆಗೆ 9% ಮತದಾನ
10:43 AM, 21 Oct

ಮಹಾರಾಷ್ಟ್ರ

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಪತ್ನಿ ಅಮೃತಾ, ತಾಯಿ ಸರಿತಾ ಅವರು ನಾಗ್ಪುರದಲ್ಲಿ ಮತ ಚಲಾಯಿಸಿದರು.
10:21 AM, 21 Oct

ಮಹಾರಾಷ್ಟ್ರ

ಬಾಂದ್ರಾ(ಪಶ್ಚಿಮ) ಕ್ಷೇತ್ರದಲ್ಲಿ ಮತ ಚಲಾಯಿಸಿದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಮತ್ತು ಪತ್ನಿ ಲಾರಾ ದತ್ತ
10:20 AM, 21 Oct

ಹರ್ಯಾಣ

ಮತ ಚಲಾಯಿಸಲು ಸೈಕಲ್ ನಲ್ಲಿ ಬಂದ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
9:57 AM, 21 Oct

ಮಹಾರಾಷ್ಟ್ರ

ಮಹಾರಾಷ್ಟ್ರದ ಲಾತುರ್ ನಲ್ಲಿ ಧಾರಾಕಾರ ಮಳೆಯಲ್ಲೇ ಬಂದು ಮತಚಲಾಯಿಸಿದ ಜನ
9:44 AM, 21 Oct

ಹರಿಯಾಣ

ಕುಸ್ತಿಪಟುಗಳಾದ ಬಬಿತಾ ಫೋಗಟ್ ಮತ್ತು ಗೀತಾ ಫೋಗಟ್ ಚಾರ್ಕಿ ದಾದ್ರಿ ಕ್ಷೇತ್ರದಲ್ಲಿ ಮತ ಚಲಾಯಿಸಿದರು.
9:41 AM, 21 Oct

ಹರಿಯಾಣ

ಜನನಾಯಕ್ ಜನತಾ ಪಕ್ಷದ ನಾಯಕ ದುಷ್ಯಂತ್ ಚೌಟಾಲಾ ಅವರು ಮತ್ತು ಅವರ ಕುಟುಂಬ ಟ್ರ್ಯಾಕ್ಟರ್ ನಲ್ಲಿ ಬಂದು ಸಿರಾ ಮತಗಟ್ಟೆಯಲ್ಲಿ ಮತಚಲಾಯಿಸಿದರು.
9:38 AM, 21 Oct

ಮಹಾರಾಷ್ಟ್ರ

ಮುಂಬೈಯ ಹತ್ತು ಕ್ಷೇತ್ರಗಳಲ್ಲಿ 9 ಗಂಟೆಯವರೆಗೆ ಶೇ.5 ರಷ್ಟು ಮತದಾನ
9:03 AM, 21 Oct

ಹರಿಯಾಣ

ಟಿಕ್ ಟಾಕ್ ಸ್ಟಾರ್, ಅದಾಂಪುರ ಬಿಜೆಪಿ ಅಭ್ಯರ್ಥಿ ಸೊನಾಲಿ ಫೋಗಟ್ ಮತ ಚಲಾಯಿಸಿದರು.
9:01 AM, 21 Oct

ಮಹಾರಾಷ್ಟ್ರ

"ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ 225 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲ್ಲಿದೆ ಎಂಬ ವಿಶ್ವಾಸ ನನಗಿದೆ. ವಿರೋಧ ಪಕ್ಷಗಳು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಅವರು ಸ್ಪರ್ಧೆಗೇ ಇಲ್ಲ! ಜನರು ಮೋದಿ ಮತ್ತು ಫಡ್ನವಿಸ್ ಪರವಿದ್ದಾರೆ" - ಪಿಯೂಷ್ ಗೋಯಲ್, ಕೇಂದ್ರ ಸಚಿವ
8:55 AM, 21 Oct

ಮಹಾರಾಷ್ಟ್ರ

ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪತ್ನಿ ಕಾಂಚನಾ ಅವರು ನಾಗ್ಪುರದಲ್ಲಿ ಮತ ಚಲಾಯಿಸಿದರು
8:53 AM, 21 Oct

ಮಹಾರಾಷ್ಟ್ರ

ಮಹಾರಾಷ್ಟ್ರದ ಬಾರಾಮತಿಯಲ್ಲಿ ಮತ ಚಲಾವಣೆ ಮಾಡಿದ ಎನ್ ಸಿಪಿ ನಾಯಕಿ ಸುಪ್ರಿಯಾ ಸುಳೆ
8:45 AM, 21 Oct

ಹರ್ಯಾಣ

ಹರ್ಯಾಣದಲ್ಲಿ ಎಎಪಿ 46, ಬಿಎಸ್‌ಪಿ 87 ಕ್ಷೇತ್ರದಲ್ಲಿ ಕಣಕ್ಕಿಳಿದಿವೆ.
8:29 AM, 21 Oct

ಹರ್ಯಾಣ

ಹರ್ಯಾಣ ವಿಧಾನಸಭೆಯಲ್ಲಿ 90 ಸೀಟುಗಳಿವೆ. ರಾಜ್ಯದಲ್ಲಿ 1.83 ಕೋಟಿ ಮತದಾರರು ಇದ್ದಾರೆ. ಇವರಲ್ಲಿ 83 ಲಕ್ಷ ಮಹಿಳೆಯರು.
8:19 AM, 21 Oct

ಮಹಾರಾಷ್ಟ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 147 ಮತ್ತು ಎನ್‌ಸಿಪಿ 121 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.
8:10 AM, 21 Oct

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ.
7:40 AM, 21 Oct

235 ಮಹಿಳೆಯರು ಸೇರಿದಂತೆ 3237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 95,473 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ.
7:27 AM, 21 Oct

ಈ ರಾಜ್ಯದಲ್ಲಿ ಒಟ್ಟು 8,98,39,600 ಮತದಾರರಿದ್ದು, ಅವರಲ್ಲಿ 4,28,43,635 ಮಹಿಳೆಯರು ಮತ್ತು 4,68,75,750 ಪುರುಷ ಮತದಾರರಿದ್ದಾರೆ.
READ MORE

English summary
Maharashtra, Haryana Assembly Election 2019 Polling Live Updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X