ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆರ್‌ಎಸ್‌ಎಸ್ ಎಂಬ ದೇಶಭಕ್ತಿಯ ದೇವಸ್ಥಾನ ಪ್ರವೇಶಿಸಲು ದೆವ್ವಗಳಿಗೆ ಭಯ'

|
Google Oneindia Kannada News

ಅಂಬಾಲ (ಹರಿಯಾಣ), ಸೆಪ್ಟೆಂಬರ್ 17: ಆರ್‌ಎಸ್‌ಎಸ್‌ನ ಮೂರು ದಿನಗಳ ಉಪನ್ಯಾಸ ಸರಣಿಯನ್ನು ಧಿಕ್ಕರಿಸುತ್ತಿರುವ ವಿರೋಧ ಪಕ್ಷಗಳ ನಾಯಕರು ಆರ್‌ಎಸ್‌ಎಸ್‌ ಎಂಬ 'ದೇಶಭಕ್ತಿಯ ದೇವಸ್ಥಾನವನ್ನು' ಪ್ರವೇಶಿಸಲು ಹೆದರುತ್ತಿರುವ 'ದೆವ್ವಗಳು' ಎಂದು ಹರಿಯಾಣ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ನವದೆಹಲಿಯಲ್ಲಿ ಆರಂಭವಾಗಿರುವ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳ ವಿವಿಧ ನಾಯಕರನ್ನು ಆರ್‌ಎಸ್‌ಎಸ್‌ ಆಹ್ವಾನಿಸಿತ್ತು.

ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸಿಸಂ) ಮುಖಂಡ ಸೀತಾರಾಂ ಯೆಚೂರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.

haryana anil vij rss temple of patriotism opposition leaders afraid ghosts

ಈ ಬಗ್ಗೆ ಟ್ವೀಟ್ ಮಾಡಿರುವ ಅನಿಲ್ ವಿಜ್, 'ಆರ್‌ಎಸ್‌ಎಸ್‌ ದೇಶಭಕ್ತಿಯ ದೇವಸ್ಥಾನ. ದೇವರ ಬಗ್ಗೆ ಭಯ ಹೊಂದಿರುವುದರಿಂದ ದೆವ್ವಗಳು ದೇವಸ್ಥಾನವನ್ನು ಪ್ರವೇಶಿಸುವುದಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್

ಈ ಕಾರಣಕ್ಕಾಗಿಯೇ ಕೆಲವರು ಕಾರ್ಯಕ್ರಮವನ್ನು ವಿರೋಧಿಸಿದ್ದರು ಎಂದು ವಿಜ್ ಹೇಳಿದ್ದರು.

ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?

ಅಯೋಧ್ಯಾ ದೇವಸ್ಥಾನ ವಿವಾದ, ಕೃಷಿ, ಗ್ರಾಮೀಣ ಆರೋಗ್ಯ ಮತ್ತು ಆರ್ಥಿಕತೆ ಸೇರಿದಂತೆ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ಪ್ರಮುಖ ವಿಚಾರಗಳು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ಚರ್ಚೆಗೆ ಬರಲಿದೆ.

ಸಿನಿಮಾ ಮತ್ತು ಕ್ರೀಡಾ ತಾರೆಯರು, ಪ್ರಮುಖ ರಾಜಕೀಯ ಮುಖಂಡರು ಸೇರಿದಂತೆ ಅನೇಕ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

English summary
Haryana minister Anil Vij on Monday said the opposition leaders who decided to not to attend RSS's three days lecture series are ghosts who are afraid of entering the RSS temple of patriotism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X