ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ್ ಮರು ಆಯ್ಕೆ

|
Google Oneindia Kannada News

ನವದೆಹಲಿ, ಸೆ. 14: ಕೊರೊನಾವೈರಸ್ ಕರಿನೆರಳಿನ ನಡುವೆ ಸಕಲ ಭದ್ರತೆಯೊಂದಿಗೆ ಆರಂಭವಾದ ಮುಂಗಾರು ಅಧಿವೇಶನದ ಮೊದಲ ದಿನವೇ ಎನ್ಡಿಎಗೆ ಶುಭ ಸಂದೇಶ ಸಿಕ್ಕಿದೆ. ಎನ್ಡಿಎ ಅಭ್ಯರ್ಥಿ ಜೆಡಿಯು ಸಂಸದ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪ ಸಭಾಪತಿಯಾಗಿ ಮರು ಆಯ್ಕೆಯಾಗಿದ್ದಾರೆ.

12 ಪಕ್ಷಗಳ ಬೆಂಬಲ ಪಡೆದುಕೊಂಡಿದ್ದ ಕಾಂಗ್ರೆಸ್ ಪ್ಲಸ್ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಅಭ್ಯರ್ಥಿ ಮನೋಜ್ ಝಾ ಅವರಿಗೆ ಆಮ್ ಆದ್ಮಿ ಪಕ್ಷ ಕೂಡಾ ಬೆಂಬಲ ಘೋಷಿಸಿತ್ತು. ಆದರೆ, ಎನ್ಡಿಎ ಅಭ್ಯರ್ಥಿ ಹರಿವಂಶ್ ಪರ 9 ಸದಸ್ಯ ಬಲ ಹೊಂದಿರುವ ಬಿಜು ಜನತಾ ದಳ(ಬಿಜೆಡಿ) ಮತ ಹಾಕಿದ್ದರಿಂದ ಎನ್ಡಿಎಗೆ ಗೆಲುವು ಸುಲಭವಾಯಿತು.

ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!ಲೋಕಸಭೆ ಉಪಾಧ್ಯಕ್ಷರ ಆಯ್ಕೆ, ಎನ್ಡಿಎ ಕುತೂಹಲಕಾರಿ ತಂತ್ರ!

ಮುಂಗಾರು ಅಧಿವೇಶನ ಮೊದಲ ದಿನ ಸಂಸದರ ಹಾಜರಾತಿ: 359 ಸಂಸದರು ಪಾಲ್ಗೊಂಡಿದ್ದರು. ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಧ್ವನಿಮತದ ಮೂಲಕ ನಡೆದ ಮತದಾನ ಪ್ರಕ್ರಿಯೆಯಂತೆ

Harivansh Narayan Singh re-elected as the deputy chairman of the Rajya Sabha

1977ರಿಂದ ಇಲ್ಲಿ ತನಕ 20 ತಿಂಗಳು ( ಅಗಸ್ಟ್ 2018 ಹಾಗೂ ಏಪ್ರಿಲ್ 2020) ಮಾತ್ರ ಕಾಂಗ್ರೆಸ್ ಉಪ ಸಭಾಪತಿ ಸ್ಥಾನವನ್ನು ಹೊಂದಿಲ್ಲ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ರನ್ನು ಸೋಲಿಸಿ ಹರಿವಂಶ್ ಅವರು ಹೊಸ ಇತಿಹಾಸ ಬರೆದಿದ್ದರು. ಸರಿ ಸುಮಾರು 41 ರಿಂದ 43ವರ್ಷಗಳ ಕಾಲ ಉಪಸಭಾಪತಿ ಸ್ಥಾನವನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ಸಿಗೆ ಮತ್ತೆ ಆಘಾತವಾಗಿದೆ.

245 ಸದಸ್ಯಬಲದ ರಾಜ್ಯಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರೆ 244 ಸ್ಥಾನದ ಲೆಕ್ಕಾಚಾರದಂತೆ ಗೆಲುವು ಸಾಧಿಸಲು ಅಭ್ಯರ್ಥಿಗೆ 123 ಮತಗಳು ಅಗತ್ಯ ವಿತ್ತು. ಇಂದು ಹಾಜರಿದ್ದ ಸದಸ್ಯ ಬಲದ ಆಧಾರದ ಮೇಲೆ 180ಕ್ಕೂ ಅಧಿಕ ಮತ ಪಡೆದು ಹರಿವಂಶ್ ಆಯ್ಕೆಯಾದರು.

Recommended Video

ಸದ್ಯದಲ್ಲೇ ಬಯಲಾಗುತ್ತೆ ಚೀನಾದ ನಿಜ ಬಣ್ಣ | Oneindia Kannada

ಸೆ. 14ರಿಂದ ಆರಂಭವಾಗಿರುವ ಮಳೆಗಾಲದ ಅಧಿವೇಶ ಅಕ್ಟೋಬರ್ 1ರಂದು ಅಂತ್ಯವಾಗಲಿದೆ. ಕೊರೊನಾ ವೈರಸ್ ಸಂಕಷ್ಟ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ನಡುವೆ ಆರ್ಥಿಕ ಕುಸಿತ, ಚೀನಾ ಗಡಿ ವಿವಾದ, ಉದ್ಯೋಗ ನಷ್ಟ ಮುಂತಾದ ಅನೇಕ ಘಟನೆಗಳು ಸಂಭವಿಸಿವೆ. ಮುಖ್ಯವಾಗಿ ಜಿಡಿಪಿ ಕುಸಿತ, ರಾಜ್ಯಗಳಿಗೆ ಜಿಎಸ್‌ಟಿ ಹಂಚಿಕೆಯ ವಿವಾದ ಹಾಗೂ ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಿದ ರೀತಿ ಚರ್ಚೆಗೆ ಬರಲಿದ್ದು, ವಿರೋಧಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆಯಿದೆ.

English summary
Harivansh Narayan Singh re-elected as the deputy chairman of the Rajya Sabha through voice-vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X