ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಭೂಷಣ್ ಪರ ವಾದ ಮಂಡಿಸಲು ವಕೀಲ ಸಾಳ್ವೆ ಫೀಜ್ ಎಷ್ಟು?

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ ವಾದ ಮಂಡನೆಗಾಗಿ ಕೇವಲ 1 ರೂ. ಸಂಭಾವನೆ ಮಾತ್ರ ಪಡೆದಿದ್ದಾರೆ.

By Mahesh
|
Google Oneindia Kannada News

ಹೇಗ್, ಮೇ 16: ಇಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ ವಾದ ಮಂಡನೆಗಾಗಿ ಕೇವಲ 1 ರೂ. ಸಂಭಾವನೆ ಮಾತ್ರ ಪಡೆದಿದ್ದಾರೆ ಎಂಬ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ಬಹಿರಂಗ ಪಡಿಸಿದ್ದಾರೆ.

ಭಾರತದ ಯಾವುದೇ ಒಬ್ಬ ಉತ್ತಮ ವಕೀಲರು ಹರೀಶ್ ಸಾಳ್ವೆ ಅವರಿಗಿಂತಲೂ ಕಡಿಮೆ ಸಂಭಾವನೆ ಪಡೆದು ಕುಲಭೂಷಣ್ ಪರ ವಾದ ಮಂಡನೆ ಮಾಡುತ್ತಿದ್ದರು ಎಂದು ವ್ಯಕ್ತಿಯೊಬ್ಬರು ಟ್ವಿಟ್ ಮಾಡಿದ್ದರು.

Harish Salve charged just Rs 1 to defend India in Jadhav case at ICJ

ಇದಕ್ಕೆ ಸುಷ್ಮಾ ಪ್ರತಿಕ್ರಿಯೆ ನೀಡಿದ್ದು, not Faire ಹರೀಶ್ ಸಾಳ್ವೆ 1 ರೂ. ಸಂಭಾವನೆ ಪಡೆದಿರುವುದಾಗಿ ಸೋಮವಾರ ರಾತ್ರಿ ತಾವು ಮಾಡಿರುವ ಟ್ವಿಟ್​ನಲ್ಲಿ ತಿಳಿಸಿದ್ದಾರೆ.

ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ದೇಶದ ಅತ್ಯಂತ ದುಬಾರಿ ವಕೀಲರಲ್ಲಿ ಒಬ್ಬರು. ಹೀಗಾಗಿ ಅಂತಾರಾಷ್ಟ್ರೀಯ ಕೋರ್ಟಿನಲ್ಲಿ ವಾದ ಮಂಡಿಸಲು ಭಾರಿ ಮೊತ್ತದ ಫೀಜ್ ಬೇಡಿಕೆ ಇಟ್ಟಿರಬಹುದು ಎಂಬ ಸಹಜ ಕುತೂಹಲ ಸಾರ್ವಜನಿಕರಲ್ಲಿರುತ್ತದೆ.

ಆದರೆ, ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಕುಲಭೂಷಣ್ ಯಾದವ್ ಪ್ರಕರಣ ಭಾವನಾತ್ಮಕವಾಗಿದ್ದು ಎಂದ ಸಾಳ್ವೆ ಹೇಳಿದ್ದಾರ. ನಟ ಸಲ್ಮಾನ್ ಖಾನ್ ಪರ ಹರೀಶ್ ಸಾಳ್ವೆ ವಾದ ಮಂಡನೆ ಮಾಡುತ್ತಿದ್ದಾರೆ. ಸಲ್ಮಾನ್ ತಮ್ಮ ವಿರುದ್ಧದ ಬಹುತೇಕ ಪ್ರಕರಣಗಳಲ್ಲಿ ಖುಲಾಸೆಗೊಳ್ಳಲು ಸಾಳ್ವೆ ಕಾರಣ ಎನ್ನವುದನ್ನು ಮರೆಯವಂತಿಲ್ಲ.

English summary
Harish Salve is one of India's leading lawyers and to defend Kulbhushan Jadhav in the International Court of Justice, he has billed the government just Rs 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X