ಗುಜರಾತ್ ಸರ್ಕಾರದಲ್ಲಿ ಬಿರುಕು ಮೂಡಿಸುತ್ತಿರುವ ಹಾರ್ದಿಕ್

Posted By:
Subscribe to Oneindia Kannada
   ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಭಾಯ್ ಪಟೇಲ್ ಗೆ ಬಿಜೆಪಿ ಬಿಡಿ ಎಂದ ಹಾರ್ದಿಕ್ ಪಟೇಲ್ | Oneindia Kannada

   ಅಹಮದಾಬಾದ್, ಡಿಸೆಂಬರ್ 30: ಬಿಜೆಪಿ ಮೇಲೆ ಜಿದ್ದಿಗೆ ಬಿದ್ದಿರುವ ಪಾಟೀದಾರ್ ಅನಾಮತ್ ಹೋರಾಟ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಬೀಳಿಸಲು ಹೊಸ ತಂತ್ರ ಹೂಡಿದ್ದಾರೆ.

   ಸಮೀಕ್ಷೆ : ಕಾಂಗ್ರೆಸ್ ಹಾಕಿದ ಬಲೆಗೆ ಬಿದ್ದ ಹಾರ್ದಿಕ್ ಪಟೇಲ್

   ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಮ್ಮ ಹತ್ತು ಬೆಂಬಲಿಗ ಶಾಸಕರೊಂದಿಗೆ ಪಕ್ಷ ತ್ಯಜಿಸಿ ಬಂದರೆ ನಾನು ಕಾಂಗ್ರೆಸ್ ಜೊತೆ ಮಾತನಾಡಿ ಅವರಿಗೆ ಉತ್ತಮ ಸ್ಥಾನ ಕೊಡಿಸುವ ಜವಾಬ್ದಾರಿ ಹೊರುತ್ತೇನೆ ಎಂದಿದ್ದಾರೆ.

   Hardik Patel invites Gujarath Deputy CM Nitin Patel to join him

   ನಿತಿನ್ ಪಟೇಲ್ ಗೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ ಎಂದಮೇಲೆ ಅವರು ನಮ್ಮ ಜೊತೆ (ಪಾಟೀದಾರ್ ಅನಾಮತ್) ಕೈಜೋಡಿಸಬಹುದು' ಎಂದು ಅವರು ಹೇಳಿದ್ದಾರೆ.

   ಸೋತರೂ ಗುಜರಾತ್ ಪಾಟೀದಾರರ ಕಣ್ಮಣಿಯಾದ ಹಾರ್ದಿಕ್ ಪಟೇಲ್

   ಖಾತೆ ಹಂಚಿಕೆ ಬಗ್ಗೆ ನಿತಿನ್ ಪಟೇಲ್ ಅಸಮಾಧಾನ ಹೊಂದಿದ್ದು, ಅವರು ಇನ್ನೂ ತಮಗೆ ನೀಡಿರುವ ಖಾತೆಯನ್ನು ಅಧಿಕೃತವಾಗಿ ವಹಿಸಿಕೊಂಡಿಲ್ಲ, ಗಾಂಧಿನಗರದಲ್ಲಿ ನಡೆದ ಪದವಿ ಸ್ವೀಕಾರ ಸಮಾರಂಭಕ್ಕೂ ಅವರು ಗೈರಾಗಿದ್ದರು. ಹೀಗಾಗಿ ಹಾರ್ದಿಕ್ ಪಟೇಲ್ ಈ ಸಮಯದ ಲಾಭ ಪಡೆಯಲು ಮುಂದಾಗಿದ್ದಾರೆ.

   ನಿತಿನ್ ಪಟೇಲ್ ಮತ್ತು ಆನಂದಿಬೇನ್ ಪಟೇಲ್ ಮುನಿಸಿನ ನಂತರ ಈಗ ಹಾರ್ದಿಕ್ ಪಟೇಲ್ ಬಹಿರಂಗ ಆಹ್ವಾನ ನೀಡಿರುವುದು ಗುಜರಾತ್ ರಾಜಕೀಯದಲ್ಲಿ ಏರುಪೇರಾಗುವ ಸಂಭವದ ಮುನ್ಸೂಚನೆ ನೀಡುತ್ತಿದೆ.

   Hardik Patel invites Gujarath Deputy CM Nitin Patel to join him

   ಗುಜರಾತ್ ಕಾಂಗ್ರೆಸ್ ನ ಅಧ್ಯಕ್ಷ ಭಾರತಿ ಸಿಂಗ್ ಸೋಲಂಕಿ ಕೂಡ ಈ ಬಗ್ಗೆ ಮಾತನಾಡಿದ್ದು, ಮೊದಲು ಆನಂದಿಬೇನ್ ಪಟೇಲ್ ಅನ್ನು ಗುಜರಾತ್ ಬಿಜೆಪಿ ಮೂಲೆಗುಂಪು ಮಾಡಿತು ಈಗ ನಿತಿನ್ ಪಟೇಲ್ ರನ್ನು ಮೂಲೆ ಗುಂಪು ಮಾಡಿದೆ, ನಿತಿನ್ ಪಟೇಲ್ ಹಾಗೂ ಇನ್ನು ಕೆಲವು ಶಾಸಕರ ಬೆಂಬಲ ಸಿಕ್ಕರೆ ಗುಜರಾತ್‌ನ ಹಿತದೃಷ್ಠಿಯಿಂದ ನಾವು ಸರ್ಕಾರ ರಚನೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದ್ದಾರೆ.

   ನಿತಿನ್ ಪಟೇಲ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಪಕ್ಷ ಬಿಜೆಪಿ ತ್ಯಜಿಸಿದಲ್ಲಿ ಸರ್ಕಾರ ಬಿದ್ದು ಹೋಗಿ ಚೆಂಡು ಕಾಂಗ್ರೆಸ್ ಅಂಗಳಕ್ಕೆ ಬರುತ್ತದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Nitin Patel can join us if the BJP is not giving him respect. He has worked hard for the party. Hardik told mediapersons on Saturday.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ