ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಾರ್ದಿಕ್ ಪಟೇಲ್: ಉಪವಾಸ ಮುಂದುವರಿಕೆ

|
Google Oneindia Kannada News

ಅಹ್ಮದಾಬಾದ್, ಸೆಪ್ಟೆಂಬರ್ 10: ಕಳೆದ ಹದಿನೈದು ದಿನಗಳಿಂದ ಸತತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟೀದಾರ್ ಅದಾಲತ್ ಆಂದೋಲನ ಸಮಿತಿಯ(PAAS) ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ಅಹ್ಮದಾಬಾದಿನ ಖಾಸಗಿ ಆಸ್ಪತ್ರೆಯಿಂದ ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ.

ನೀರು ಸೇವಿಸುವುದನ್ನೂ ಬಿಡುತ್ತೇನೆ: ಗುಜರಾತ್ ಸರ್ಕಾರಕ್ಕೆ ಹಾರ್ದಿಕ್ ಎಚ್ಚರಿಕೆನೀರು ಸೇವಿಸುವುದನ್ನೂ ಬಿಡುತ್ತೇನೆ: ಗುಜರಾತ್ ಸರ್ಕಾರಕ್ಕೆ ಹಾರ್ದಿಕ್ ಎಚ್ಚರಿಕೆ

ಸತತ ಉಪವಾಸದ ಕಾರಣ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಅವರನ್ನು ಸೆ.07ಕ್ಕೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಾರ್ದಿಕ್ ಪಟೇಲ್ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದರಿಂದ ಗುಜರಾತ್ ಸರ್ಕಾರ ಅವರ ನಿವಾಸದ ಮುಂದೆಯೇ 'ICU on Wheel' ಅಂಬುಲೆನ್ಸ್ ಸೌಲಭ್ಯ ಒದಗಿಸಿದೆ.

11 ದಿನದ ಉಪವಾಸಕ್ಕೆ 20 ಕೆಜಿ ತೂಕ ಕಳೆದುಕೊಂಡ ಹಾರ್ದಿಕ್ ಪಟೇಲ್11 ದಿನದ ಉಪವಾಸಕ್ಕೆ 20 ಕೆಜಿ ತೂಕ ಕಳೆದುಕೊಂಡ ಹಾರ್ದಿಕ್ ಪಟೇಲ್

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಉಪವಾಸವನ್ನು ಮುಂದುವರಿಸಲಿರುವ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್, 'ಉಪವಾಸದ ಅವಧಿಯಲ್ಲಿ ಅಕಸ್ಮಾತ್ ತಮ್ಮ ಪ್ರಾಣಕ್ಕೆ ಅಪಾಯವಾದರೆ ಏನು ಮಾಡಬೇಕು' ಎಂಬ ಮರಣಪತ್ರ(ವಿಲ್) ಸಹ ಬರೆದಿದ್ದಾರೆ.

20 ಕೆಜಿ ತೂಕ ಇಳಿದ ಮೇಲೆ ಹಾರ್ದಿಕ್ ಕಡೆ ನೋಡಿದ ಗುಜರಾತ್ ಸರ್ಕಾರ!20 ಕೆಜಿ ತೂಕ ಇಳಿದ ಮೇಲೆ ಹಾರ್ದಿಕ್ ಕಡೆ ನೋಡಿದ ಗುಜರಾತ್ ಸರ್ಕಾರ!

Hardik Patel discharged from hospital, continues hunger strike

ಆಗಸ್ಟ್ 24 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಹಾರ್ದಿಕ್ ಪಟೇಲ್ ಈಗಾಗಲೇ 20 ಕೆಜಿ ಯಷ್ಟು ತೂಕ ಕಳೆದುಕೊಂಡಿದ್ದಾರೆ. ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಅಲ್ಪೇಶ್ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಉಪವಾಸ ಆರಂಭಿಸಿದ್ದಾರೆ.

English summary
Patidar leader Hardik Patel, who has been on hunger strike for the last 15 days, was on Sunday discharged from a private hospital in Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X