• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಿಕ್ಕರಿಸುವ ಮಕ್ಕಳನ್ನೇ ಮುದ್ದಿಸುವ ಹುಚ್ಚು ಆಸಾಮಿ ಅಪ್ಪ!

|

ಅಪ್ಪ ಅಂದ್ರೆ ಹಾಗೇ. ಆಕಾಶಕ್ಕೂ ಮಿಗಿಲಾದವನು. ಅನುಭವದ ಖನಿ, ಸಾಂತ್ವನದ ಗಣಿ. ಬಡತನ, ಬೇಸರ, ಕೊರಗು, ಅವಮಾನ ಎಲ್ಲವನ್ನೂ ತನ್ನ ಜೋಳಿಗೆಯೊಳಗೇ ಬಚ್ಚಿಟ್ಟು ಮಕ್ಕಳ ಮುಂದೆ ಮನಸಾರೆ ನಕ್ಕವನು. ಆತ ಫಲಾಪೇಕ್ಷೆಯಿಲ್ಲದೆ ಮೊಗೆ ಮೊಗೆದು ಕೊಟ್ಟ ಪ್ರೀತಿಯನ್ನು ಲೆಕ್ಕವಿಟ್ಟವರ್ಯಾರು?

ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ( ಈ ಬಾರಿ ಜೂನ್ 17) ವನ್ನು ಜಗತ್ತಿನಾದ್ಯಂತ ಅಪ್ಪಂದಿರ ದಿನವನ್ನಾಗಿ ಆಚರಿಸುತ್ತಾರಂತೆ. ಅಪ್ಪಂಗೆ ಈ ವಿಷಯ ಗೊತ್ತೋ ಇಲ್ಲವೋ! 'ಅಪ್ಪತನ'ವೆಂಬ ಆಕಾಶದಂಥ ಜವಾಬ್ದಾರಿಯನ್ನು ಹೊತ್ತ ಅಪ್ಪಂಗೆ ತನಗಾಗಿಯೇ ಒಂದು ದಿನವಿದೆ ಎಂದು ಗೊತ್ತಿಲ್ಲದಿದ್ದರೆ ಅಚ್ಚರಿಯೇನಿಲ್ಲ!

ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಆಕಾಶವನ್ನೂ ಮೀರುವವನು ಅಪ್ಪ!

ಮಗು ತೊದಲು ಮಾತಲ್ಲಿ ಅಪ್ಪ ಎಂದಾಗ, ಮೊದಲ ಹೆಜ್ಜೆ ಇಟ್ಟಾಗ, ಮಡಿಲಲ್ಲಿ ಬೆಚ್ಚಗೆ ಮಲಗಿದಾಗ, ಮೊದಲ ದಿನ ಶಾಲೆಗೆ ಹೋದಾಗ, ಕೆಲಸ ಹಿಡಿದಾಗ... ಮನಸ್ಸಲ್ಲಿ ಹುಟ್ಟಿದ ಸಂಭ್ರಮ, ಹೆಮ್ಮೆಯನ್ನೆಲ್ಲ ಎಂದೂ ವ್ಯಕ್ತಪಡಿಸದೆ ನಿರ್ಲಪ್ತಮೂರ್ತಿಯಾಗಿಯೇ ಉಳಿದುಬಿಡುವವನು ಅಪ್ಪ!

ಮುಗುಳ್ನಕ್ಕು ಸುಮ್ಮನಾಗುವ ಬುದ್ಧ ಈ ಅಪ್ಪ

ಮುಗುಳ್ನಕ್ಕು ಸುಮ್ಮನಾಗುವ ಬುದ್ಧ ಈ ಅಪ್ಪ

ಹೆಗಲೆತ್ತರಕ್ಕೆ ಬೆಳೆದ ಮಗ, 'ನೀನು ಹಳೇ ಕಾಲದೋನು. ನಿಂಗೇನು ಗೊತ್ತು?' ಎಂದು ಕೇಳಿದಾಗಲೂ ಮುಗುಳ್ನಕ್ಕು ಸುಮ್ಮನಾಗುವ ಬುದ್ಧ ಈ ಅಪ್ಪ! ಅಪ್ಪಂಗಾಗಿ ಮಗ ವೃದ್ಧಾಶ್ರಮ ಹುಡುಕಿದಾಗಲೂ ಹಣೆಯ ಮೇಲೆ ಗೆರೆಯೇ ಮೂಡದಷ್ಟು ಸಹಜವಾಗಿ ಮಗನ ನಿಲುವನ್ನು ಸ್ವೀಕರಿಸಿದವನು ಅಪ್ಪ!

ಏಕಾಂಗಿಯಾಗಿ ಬಿಕ್ಕುವವನು ಅಪ್ಪ!

ಏಕಾಂಗಿಯಾಗಿ ಬಿಕ್ಕುವವನು ಅಪ್ಪ!

ಕಲಿತ ಮಗಳು ಬಂದು ಆಸ್ತಿಯಲ್ಲಿ ಪಾಲು ಕೇಳಿದಾಗಲೂ ಕಣ್ಮುಚ್ಚಿ, 'ಸರಿ' ಎಂದವನು ಅಪ್ಪ! ಉಣ್ಣುವುದಕ್ಕೆ ಅನ್ನವಿಲ್ಲದಿದ್ದರೂ ಮಕ್ಕಳ ಮುಂದೆ ಕೈಚಾಚದ ಸ್ವಾಭಿಮಾನಿ ಅಪ್ಪ! ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಟರೆ ಕಣ್ಣೀರ ಕೋಡಿಯಾಗುವ ಅಮ್ಮನನ್ನು ಧೈರ್ಯವಾಗಿ ಸಂತೈಸುವವನು ಅಪ್ಪ. ಮಗಳು ಹೋದ ದಾರಿಯನ್ನೇ ನೋಡುತ್ತ, ಯಾರು ಇಲ್ಲದಾಗ ಬಿಕ್ಕುವವನೂ ಇದೇ ಅಪ್ಪ!

ಅಪ್ಪಾ... ಐ ಲವ್ ಯೂ ಪಾ.. ಅಪ್ಪನೇ ಆಕಾಶದ ಪ್ರತಿರೂಪ

ಹುಚ್ಚು ಆಸಾಮಿ ಈ ಅಪ್ಪ!

ಹುಚ್ಚು ಆಸಾಮಿ ಈ ಅಪ್ಪ!

ಅಪ್ಪನ ವಿರೋಧದ ನಡುವೆಯೂ ತಮ್ಮಿಷ್ಟದ ಬದುಕನ್ನೇ ಆಯ್ಕೆ ಮಾಡಿಕೊಂಡ ಮಕ್ಕಳನ್ನು ಎಂದಿಗೂ ದ್ವೇಷದಿಂದ ನೋಡದವನು ಅಪ್ಪ. ಜೀವನ ಹಿಮ್ಮುಖವಾಗಿ ನಡೆಯುವುದಿಲ್ಲವಲ್ಲ ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡವನು! ತನ್ನಿಷ್ಟ ಮೀರಿ ಬದುಕು ಕಟ್ಟಕೊಂಡ ಮಕ್ಕಳು, ತನ್ನನ್ನು ಒಂಟಿಯಾಗಿ ತೊರೆದು ಹೋದಾಗಲೂ ಅದೇ ನಿರ್ಲಿಪ್ತ ಮುಖಭಾವದಲ್ಲೇ ಉಳಿದವನು ಅಪ್ಪ! ಅದೇ ಮಕ್ಕಳು ಕಷ್ಟದಲ್ಲಿದ್ದಾರೆ ಎಂದಾಗ ಸವೆದ ಚಪ್ಪಲಿಯಲ್ಲೇ ಓಡೋಡಿ ಬರುವ ಹುಚ್ಚು ಆಸಾಮಿ ಈ ಅಪ್ಪ!

'ಅಪ್ಪಂದಿರ ದಿನದ ಶುಭಾಶಯಗಳು

'ಅಪ್ಪಂದಿರ ದಿನದ ಶುಭಾಶಯಗಳು

ಪುಸ್ತಕ, ಶಾಲೆ ಯಾವುದೂ ಕಲಿಸಲಾಗದ ಬದುಕಿನ ಪಾಠವನ್ನು ತನ್ನ ನಡೆ-ನುಡಿಯಲ್ಲೇ ತೋರಸಿಕೊಟ್ಟವನು ಅಪ್ಪ. ಮಕ್ಕಳು ಅಪ್ಪನಿಗೆ ಮಾನಸಿಕವಾಗಿ ಅದೆಷ್ಟು ಪೆಟ್ಟುಕೊಟ್ಟರೂ ಅವನ್ನೆಲ್ಲ ತನ್ನ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿಬಿಡುವ ಕ್ಷಮಯಾಧರಿತ್ರಿ ಹಾಗೆ ಈ ಅಪ್ಪ. ತನ್ನ ಪ್ರತಿ ನಡೆಯಲ್ಲೂ, ನುಡಿಯಲ್ಲೂ ಮಹೋನ್ನತ ಸಂದೇಶವನ್ನೇ ಕೊಟ್ಟು ಪ್ರತಿಯೊಬ್ಬರ ಬದುಕಿನ ಜೀವಂತ ಪವಾಡವಾಗಿರುವ ಎಲ್ಲ ಅಪ್ಪಂದಿರಿಗೂ ''ಅಪ್ಪಂದಿರ ದಿನದ ಶುಭಾಶಯಗಳು"

English summary
Father’s Day is celebrated worldwide to recognize the contribution that fathers and father figures make to the lives of their children. This day celebrates fatherhood and male parenting. Although it is celebrated on a variety of dates worldwide, many countries observe this day on the third Sunday in June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X