• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

|

ಬೆಂಗಳೂರು, ಸೆಪ್ಟೆಂಬರ್ 27: ಸರ್ಚ್ ಇಂಜಿನ್ ಲೋಕದ ದಿಗ್ಗಜ, ಅಂತರ್ಜಾಲದಲ್ಲಿ ಹಲವರ ಪಾಲಿನ ದೇವರು ಗೂಗಲ್ ಸಂಸ್ಥೆ ಇಂದು (ಸೆ.27) ತನ್ನ 20ನೇ ಹುಟ್ಟುಹಬ್ಬವನ್ನು ಹೊಸ ಗೂಗಲ್ ಡೂಡ್ಲ್ ಮೂಲಕ ಆಚರಿಸುತ್ತಿದೆ. ಈ ಬಾರಿ ಡೂಡ್ಲ್ ವಿಶೇಷವಾಗಿದ್ದು, ಸರ್ಚ್ ಇಂಜಿನ್ ರೂಪುಗೊಳ್ಳಲು ನೆರವಾದವರನ್ನು ಸ್ಮರಿಸಲಾಗಿದೆ.

ಆಹಾರ, ಭಾಷೆ, ಗ್ರಹ, ನೃತ್ಯ ಹೀಗೆ ವಿವಿಧ ವಿಷಯಗಳು ಅದರಲ್ಲೂ ಇದು ಹೇಗೆ? ಎಂಬ how to ಸರಣಿ, ಟೆಕ್ಕಿಗಳಿಗೆ ಕೋಡಿಂಗ್, ಸಂಚಾರಿಗಳಿಗೆ ಮಾರ್ಗದರ್ಶಿ ಮ್ಯಾಪ್ ಆಗಿ, ಸುದ್ದಿ, ವಿಡಿಯೋ ಹೀಗೆ ಬಗೆ ಬಗೆ ಸೌಲಭ್ಯಗಳನ್ನು ನೀಡುವ ಅಲ್ಲಾದ್ದೀನನ ಜೀನಿಯಂತೆ ಗೂಗಲ್ ತೋರುತ್ತದೆ.

ಆನ್ಲೈನಲ್ಲಿ ಸ್ವತಂತ್ರ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡ್ಲ್

ಗೂಗಲ್ ಈಗ 150 ಭಾಷೆಗಳಲ್ಲಿ, 190ಕ್ಕೂ ಅಧಿಕ ದೇಶಗಳಲ್ಲಿ ಸಕ್ರಿಯವಾಗಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಗೂಗಲ್ ಗೆ ಸಲ್ಲುತ್ತದೆ.

ಗೂಗಲ್ ಹುಟ್ಟುಹಬ್ಬದ ದಿನಾಂಕವೂ ಕುತೂಹಲಕಾರಿಯಾಗಿದೆ. 2005ರ ತನಕ ಸೆ.7ರಂದು ಗೂಗಲ್ ತನ್ನ ಹುಟ್ಟುಹಬ್ಬ ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ನಂತರ ಸೆ.27ಕ್ಕೆ ಇದು ಬದಲಾಯಿತು.

ಅಪ್ಪಂದಿರ ದಿನಕ್ಕೆ ಆಕರ್ಷಕ ಡೂಡ್ಲ್ ರಚಿಸಿದ ಗೂಗಲ್!

ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿಕೆಯನ್ನು ಸುಧಾರಣೆಗೊಳಿಸಲು ಗೂಗಲ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. ಹೊಸ ಡೂಡ್ಲ್ ಚಿತ್ರದೊಂದಿಗೆ ಸೆ.27 ರಂದು ತನ್ನ ವಾರ್ಷಿಕೋತ್ಸವ ಗೂಗಲ್ ಆಚರಿಸುತ್ತದೆ

ಡೂಡಲ್ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುವ ಗೂಗಲ್, ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ.

ಗಾಜಿನ ಮಹಿಳೆ ಮಾರ್ಗಾ ಫೌಲ್ ಸ್ಟಿಶ್‌ಗೆ ಗೂಗಲ್ ಗೌರವ

ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 900ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ.

English summary
Search giant Google is celebrating its 20th birthday with a cute video on its evolution. Launched as a new search engine with a bold mission to organize the world's information, Google has practically become our go-to portal for all the information we require.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X