'ನಿಮ್ಮ ಮಕ್ಕಳನ್ನು ಭಯೋತ್ಪಾದನೆಗೆ ಕಳಿಸಿ': ವಿಚಿತ್ರ ಪತ್ರ!

Posted By:
Subscribe to Oneindia Kannada

ಕುಂಕುರಿ, ಏಪ್ರಿಲ್ 7: "ನಿಮ್ಮ ಮಕ್ಕಳನ್ನು ಭಯೋತ್ಪಾದನೆಗೆ ಕಳಿಸಿ..." ಎಂದು ಬರೆದ ವಿಚಿತ್ರ ಪತ್ರಗಳನ್ನು ಛತ್ತೀಸ್ ಗಢದ ಕುಂಕುರಿ ಪ್ರದೇಶದ ಕೆಲವು ಮನೆಗಳ ಗೋಡೆಯ ಮೇಲೆ ಅಂಟಿಸಿರುವುದು ಆತಂಕ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಸಿಎಂ ರುಂಡ ಕತ್ತರಿಸುವ ಬೆದರಿಕೆ

ಹಿಂದಿ ಭಾಷೆಯಲ್ಲಿ ಬರೆಯಲಾದ ಈ ಪತ್ರದಲ್ಲಿ, 'ನಿಮ್ಮ ಮಕ್ಕಳನ್ನು ಭಯೋತ್ಪಾದನೆಗೆ ಕಳಿಸಿ. ಭಯೋತ್ಪಾದಕರನ್ನು ಬಲಪಡಿಸಿ. ಇಲ್ಲವೆಂದರೆ ನಿಮ್ಮ ಊರನ್ನೇ ನಾಶ ಮಾಡುತ್ತೇವೆ' ಎಂದು ಬರೆಯಲಾಗಿದೆ.

Handover your children for terrorism, reads pamphlet surfaced in Chhattisgarh

ಹಲವು ಮನೆಗಳ ಗೋಡೆಗಳ ಮೇಲೆ ಈ ಪತ್ರ ಅಂಟಿಸಿರುವುದನ್ನು ಕಂಡು ಆತಂಕಗೊಂಡ ಜನರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pamphlet was dropped by unidentified persons at two separate houses in Chhattisgarh's Kunkuri town threatening to destroy the village if the families don't hand over their children to them for strengthening terrorism.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ