ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಶೇ 50ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ

|
Google Oneindia Kannada News

ನವದೆಹಲಿ, ಡಿಸೆಂಬರ್ 05; ಭಾರತದಲ್ಲಿ ಶನಿವಾರ 1.03 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಈಗ ದೇಶದ ಅರ್ಹ ಜನಸಂಖ್ಯೆಯ ಅರ್ಧದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಬಳಕೆಯಾಗದ 21.38 ಕೋಟಿ ಡೋಸ್ ಲಸಿಕೆ ಸಂಗ್ರಹವಿದೆ.

ದೇಶದಲ್ಲಿ ಹೊಸ ಕೋವಿಡ್ ರೂಪಾಂತರಿ ಓಮ್ರಿಕಾನ್ ಪ್ರಕರಣ ಪತ್ತೆಯಾಗಿದೆ. ಬಳಿಕ ವಿವಿಧ ರಾಜ್ಯಗಳು ಲಸಿಕಾ ಅಭಿಯಾನಕ್ಕೆ ಚುರುಕು ಮುಟ್ಟಿಸಿವೆ. ಶನಿವಾರ ಬಿಹಾರದಲ್ಲಿ 15.33 ಲಕ್ಷ, ತಮಿಳುನಾಡಿನಲ್ಲಿ 14.84 ಲಕ್ಷ, ರಾಜಸ್ಥಾನದಲ್ಲಿ10.8 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ 10.24 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ.

ಮಧುರೈ:ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಮಾಲ್‌, ಹೋಟೆಲ್‌ಗೆ ಎಂಟ್ರಿ ಇಲ್ಲಮಧುರೈ:ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಮಾಲ್‌, ಹೋಟೆಲ್‌ಗೆ ಎಂಟ್ರಿ ಇಲ್ಲ

ಒಟ್ಟಾರೆಯಾಗಿ ಭಾರತದಲ್ಲಿ ಶೇ 85ರಷ್ಟು ಅರ್ಹ ವಯಸ್ಕರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 50.35ರಷ್ಟು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು15 ವರ್ಷದ ಮಕ್ಕಳಿಗೆ ತಪ್ಪಾಗಿ ಕೋವಿಡ್ 19 ಲಸಿಕೆ, ಆಸ್ಪತ್ರೆಗೆ ದಾಖಲು

ಶನಿವಾರದ ವರದಿಯಂತೆ ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 99,974 ಆಗಿದೆ. 2020ರ ಮಾರ್ಚ್ ತಿಂಗಳ ಬಳಿಕ ಇದು ಅತಿ ಕಡಿಮೆ ಸಕ್ರಿಯ ಪ್ರಕರಣವಾಗಿದೆ. ದಿನದ ಪಾಸಿಟಿವಿಟಿ ದರ ಕಳೆದ 61 ದಿನಗಳಿಂದ ಶೇ 2ಕ್ಕಿಂತ ಕಡಿಮೆಯಾಗಿದೆ. ಕಳೆದ 20 ದಿನಗಳಿಂದ ಶೇ 1ಕ್ಕಿಂತ ಕಡಿಮೆ ಇದೆ.

ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಖಡಕ್ ಎಚ್ಚರಿಕೆ

ಕೇಂದ್ರ ಆರೋಗ್ಯ ಸಚಿವಾಲಯ 30 ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ದೇಶದ 5 ರಾಜ್ಯ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಈ ಕುರಿತು ಸೂಚನೆಗಳನ್ನು ಸಹ ಸಚಿವಾಲಯ ನೀಡಿದೆ.

ಕೇಂದ್ರದಿಂದ ಪತ್ರ

ಕೇಂದ್ರದಿಂದ ಪತ್ರ

30 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೇರಳ, ಕರ್ನಾಟಕ, ತಮಿಳುನಾಡು, ಓಡಿಶಾ, ಮಿಜೋರಾಂ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪತ್ರವನ್ನು ಬರೆದಿದ್ದಾರೆ. ನವೆಂಬರ್ 26ಕ್ಕೆ ಹೋಲಿಕೆ ಮಾಡಿದರೆ ಡಿಸೆಂಬರ್ 3ಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಕೋವಿಡ್ ಪರೀಕ್ಷಾ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗಾಗಿ ಕಳಿಸುವಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ. ಓಮಿಕ್ರಾನ್ ರೂಪಾಂತರಿ ಪತ್ತೆ ಮಾಡಲು ಈ ಸೂಚನೆ ಕೊಡಲಾಗಿದೆ.

5 ನಿರ್ಧಿಷ್ಟ ಕ್ರಮಗಳು

5 ನಿರ್ಧಿಷ್ಟ ಕ್ರಮಗಳು

ಸೋಂಕು ಹೆಚ್ಚಿರುವ 30 ಜಿಲ್ಲೆಗಳಲ್ಲಿ 5 ನಿರ್ಧಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಣ್ಗಾವಲು ಇಡಬೇಕು ಎಂಬುದು ಪ್ರಮುಖವಾದ ಅಂಶ. ಉಳಿದಂತೆ ಹಾಟ್‌ಸ್ಪಾಟ್‌ಗಳ ಮೇಲ್ವಿಚಾರಣೆ ನಡೆಸುವುದು. 14 ದಿನಗಳವರೆಗೆ ಸಂಪರ್ಕ ಪತ್ತೆ ಹಚ್ಚುವಿಕೆ, ಸಾಕಷ್ಟು ಪರೀಕ್ಷೆಯಗಳನ್ನು ನಡೆಸುವ ಮೂಲಕ ಆರಂಭಿಕ ಹಂತದಲ್ಲೇ ಸೋಂಕು ಗುರುತಿಸಬೇಕು, ಆರೋಗ್ಯ ಮೂಲಸೌಕರ್ಯಗಳ ಸಿದ್ಧತೆಯ ಪರಿಶೀಲನೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಹೆಚ್ಚಿದೆ ಸೋಂಕು?

ಎಲ್ಲೆಲ್ಲಿ ಹೆಚ್ಚಿದೆ ಸೋಂಕು?

ಕೇರಳದ ತಿರುವನಂತಪುರಂ (ಶೇ 11.61), ವಯನಾಡ್ (ಶೇ 11.25), ಕೊಯಿಕ್ಕೋಡ್ (ಶೇ 11) ಮತ್ತು ಕೊಟ್ಟಾಯಂ (ಶೇ 10.81) ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10ಕ್ಕಿಂತ ಹೆಚ್ಚುಇದೆ. ನಾಲ್ಕು ಜಿಲ್ಲೆಗಳಾದ ತ್ರಿಶೂರ್ (128), ಮಲಪ್ಪುರಂ (109), ಕೊಯಿಕ್ಕೋಡ್ (82) ಮತ್ತು ಕೊಲ್ಲಂ (17) ಒಂದು ವಾರದಲ್ಲಿ ಸಾವಿನ ಸಂಖ್ಯೆಗಳು ಅಧಿಕವಾಗಿವೆ.

ಕರ್ನಾಟಕದ ಪರಿಸ್ಥಿತಿ ಏನು?

ಕರ್ನಾಟಕದ ಪರಿಸ್ಥಿತಿ ಏನು?

ಕರ್ನಾಟಕದ ನಾಲ್ಕು ಜಿಲ್ಲೆಗಳ ಹೊಸ ಪ್ರಕರಣಗಳ ಬಗ್ಗೆ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ತುಮಕೂರು (116), ಧಾರವಾಡ (185), ಬೆಂಗಳೂರು ನಗರ (1,424) ಮತ್ತು ಮೈಸೂರು (219). ಬೆಂಗಳೂರು ನಗರದಲ್ಲಿ ನವೆಂಬರ್ 25ಕ್ಕೆ 8 ಆಗಿದ್ದ ಸಾವಿನ ಸಂಖ್ಯೆ ಡಿಸೆಂಬರ್ 2ಕ್ಕೆ 14 ಆಗಿದೆ. ಇದನ್ನು ಆರೋಗ್ಯ ಸಚಿವಾಲಯ ಪತ್ರದಲ್ಲಿ ಉಲ್ಲೇಖ ಮಾಡಿದೆ. ಕರ್ನಾಟಕದಲ್ಲಿ ಡಿಸೆಂಬರ್ 3ಕ್ಕೆ ಕೊನೆಗೊಂಡ ತಿಂಗಳಲ್ಲಿ 8,073 ಹೊಸ ಪ್ರಕರಣಗಳು ದಾಖಲಾಗಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಏರಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಏರಿಕೆ

ಜಮ್ಮು ಮತ್ತು ಕಾಶ್ಮೀರದ 4 ಜಿಲ್ಲೆಗಳಲ್ಲಿ ಸಾಪ್ತಾಹಿಕವಾಗಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕಥುವಾ (409), ಜಮ್ಮು (343), ಗಂದರ್ಬಾಲ್ (126) ಮತ್ತು ಬಾರಾಮುಲ್ಲಾ (106) ಪ್ರಕರಣ ದಾಖಲಾಗಿದೆ.

ಇನ್ನೂ ತಮಿಳುನಾಡಿನ 3 ಜಿಲ್ಲೆಗಳಲ್ಲಿ ವಾರದಲ್ಲಿ ಪ್ರಕರಣಗಳ ಹೆಚ್ಚಾಗಿದೆ. ವೆಲ್ಲೂರು (128), ತಿರುವಳ್ಳೂರ್ (136), ಮತ್ತು ಚೆನ್ನೈ (981) ಹೊಸ ಪ್ರಕರಣ ಪತ್ತೆಯಾಗಿದೆ. ಓಡಿಶಾ ರಾಜ್ಯದಲ್ಲಿ ಪರೀಕ್ಷೆಗಳಲ್ಲಿ ಶೇ 3.1% ರಷ್ಟು ಕುಸಿತ ಕಂಡುಬಂದಿದ್ದರೂ ಆರು ಜಿಲ್ಲೆಗಳಲ್ಲಿ ಪ್ರಕರಣ ಏರಿಕೆಯಾಗಿದೆ. ಇದನ್ನು ಆರೋಗ್ಯ ಸಚಿವಾಲಯ ಪತ್ರದಲ್ಲಿ ಉಲ್ಲೇಖಿಸಿ ಸೂಚನೆಗಳನ್ನು ನೀಡಿದೆ.

English summary
1.03 crores of vaccine administered on Saturday in India. Now half of the eligible population in the country is fully vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X