ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧೋನ್ಮಾದ ಪೂರ್ವ ಲಡಾಖ್‌ನಲ್ಲಿ ಎಚ್‌ಎಎಲ್‌ನ ಲಘು ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಚೀನಾಗಡಿ ಪ್ರದೇಶ ಪೂರ್ವ ಲಡಾಖ್‌ನಲ್ಲಿ ಯುದ್ಧೋನ್ಮಾದ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ವಿಶ್ವದ ಅತ್ಯಂತ ಲಘು ಯು್ಧ ಹೆಲಿಕಾಪ್ಟರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

Recommended Video

ಸ್ವಯಂ ಪ್ರೇರಿತರಾಗಿ ಪೊಲೀಸರು ದೂರು ದಾಖಲು ಮಾಡಬೇಕಿತ್ತು | Oneindia Kannada

ಎಚ್‌ಎಎಲ್ ನಿಂದ ನಿರ್ಮಾಣವಾಗಿರುವ ಸ್ವದೇಶಿ ವಿಮಾನ ಎಲ್‌ಸಿಎಚ್‌ನ್ನು ಇಂದು ಅಧಿಕೃತವಾಗಿ ಕಾರ್ಯಾಚರಣೆಗೆ ಲಡಾಖ್‌ನಲ್ಲಿ ನಿಯೋಜಿಸಲಾಗಿದೆ.

ಲಡಾಖ್ ಗಡಿ ಸಂಘರ್ಷ: ಚೀನಾದ ಮೇಲೆ ನಿರಂತರ ಕಣ್ಣಿಟ್ಟಿರಬೇಕು ಎಂದ ಭಾರತೀಯ ಸೇನೆಲಡಾಖ್ ಗಡಿ ಸಂಘರ್ಷ: ಚೀನಾದ ಮೇಲೆ ನಿರಂತರ ಕಣ್ಣಿಟ್ಟಿರಬೇಕು ಎಂದ ಭಾರತೀಯ ಸೇನೆ

ಹಗಲು ಹಾಗೂ ರಾತ್ರಿ ಕಾರ್ಯಾರಚರಣ ನಡೆಸಬಹುದಾಗಿರುವ ಈ ಎಲ್‌ಸಿಎಚ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಹುದಾಗಿದೆ.ಹಾಗೂ ಹವಾಮಾನ ವೈಪರಿತ್ಯದ ಸಂದರ್ಭದಲ್ಲಿಯೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಅವಕಾಶವಿದೆ. ಶತೃಗಳನ್ನು ಗುರಿಯಾಗಿಸಿಕೊಂಡು ಈ ಹೆಲಿಕಾಪ್ಟರ್ ನಲ್ಲಿ ಶಸ್ತ್ರಾಸ್ತ್ರಗಳ ಪ್ರಯೋಗ ನಡೆಸಲಾಗುತ್ತದೆ.

HAL’s Indigenous LCH Deployed For Operations At Leh

ಭಾರತೀಯ ಭೂ ಸೇನೆ ಹಾಗೂ ವಾಯುಸೇನೆಗೆ 110 ಎಲ್‌ಸಿಎಚ್‌ಗಳ ಅಗತ್ಯವಿದ್ದು, ಈಗಾಗಲೇ 15 ಎಲ್‌ಸಿಎಚ್‌ ನಿರ್ಮಾಣಕ್ಕೆ ಆದೇಶ ಹೊರಡಿಸಲಾಗಿದೆ.

ಆರಂಭಿಕ ಹಂತವಾಗಿ ಎರಡು ಎಲ್‌ಸಿಎಎಚ್‌ಗಳನ್ನು ಸೇನೆಗೆ ನೀಡಲಾಗಿದೆ. ಈ ಕುರಿತು ಮಾತನಾಡಿರುವ ಎಚ್‌ಎಎಲ್ ಸಿಎಂಡಿ ಮಾಧವನ್, ಸೇನೆಯ ಅಗತ್ಯತೆಗೆ ತಕ್ಕಂತೆ ವಿಶ್ವದ ಅತ್ಯಂತ ಲಘು ಹೆಲಿಕಾಪ್ಟರ್ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತವನ್ನು ಸಾಕಾರಗೊಳಿಸುವ ಉದ್ದೇಶ ಹೊಂದಲಾಗಿದೆ.

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಜೀವಂತವಾಗಿಡಲು ಚೀನಾ ಯತ್ನಿಸುತ್ತಿದೆ ಎಂದು ಹೇಳಿರುವ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೀರ್ಘಾವಧಿಯ ಯುದ್ಧ ಸ್ಥಿತಿಯ ವಾತಾವರಣವನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಅರೆಸೇನಾಪಡೆ ತಂಡಕ್ಕೆ ಹೇಳಿದ್ದಾರೆ.

ದೇಶದ ಅರೆಸೇನಾಪಡೆ ತಂಡಕ್ಕೆ ಗಡಿಯಲ್ಲಿನ ಇಂದಿನ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, ಗಡಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಮಯ ಹಿಡಿಯಬಹುದು. ಅವಕಾಶದ ಕ್ಷಣಕ್ಕಾಗಿ ಚೀನಾ ಎದುರು ನೋಡುತ್ತಿರುವುದರಿಂದ ಸೇನೆ ನಿಲುಗಡೆ ಮುಂದೆ ಹೋಗಲೂಬಹುದು.

ಚೀನಾದ ಸೇನಾಪಡೆಯನ್ನು ಬೃಹತ್ ಪ್ರಮಾಣದಲ್ಲಿ ಅಲ್ಲಲ್ಲಿ ನಿಯೋಜಿಸಿರುವುದರಿಂದ ಮತ್ತು ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಮಾತುಕತೆಯಲ್ಲಿ ತನ್ನ ಬೇಡಿಕೆಗಳು ಈಡೇರದಿರುವುದರಿಂದ ಚೀನಾ ಈ ತಕ್ಷಣವೇ ಸೇನೆಯನ್ನು ವಾಪಸ್ ಪಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
In light of the prevailing situation on the border, HAL produced two Light Combat Helicopters (LCH) have been deployed for operations at high altitude (Leh sector) at short notice to support IAF missions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X