ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಒಂದು ವರ್ಷಕ್ಕೆ 22.80 ಲಕ್ಷ ಡೋಸ್ ಕೊವ್ಯಾಕ್ಸಿನ್ ಉತ್ಪಾದಿಸಲಿರುವ ಹಾಫ್ಕಿನ್

|
Google Oneindia Kannada News

ನವದೆಹಲಿ, ಜೂನ್ 03: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆ ವೇಗ ಹೆಚ್ಚಿಸುವ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಸೃಷ್ಟಿಯಾಗಿದೆ. 135 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೇಶಕ್ಕೆ ಸಾಕಾಗುವಷ್ಟು ಲಸಿಕೆ ಉತ್ಪಾದಿಸಬೇಕಿದೆ.

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಯ ಗುರಿಯನ್ನು ಮುಟ್ಟುವ ಉದ್ದೇಶದಿಂದ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದೇಶೀಯ ಕೊರೊನಾವೈರಸ್ ಲಸಿಕೆ ಉತ್ಪಾದನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

18 ವರ್ಷದೊಳಗಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ18 ವರ್ಷದೊಳಗಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ

ಹೈದ್ರಾಬಾದಿನ ಭಾರತ್ ಬಯೋಟೆಕ್ ಕಂಪನಿ ಜೊತೆಗೆ ತಂತ್ರಜ್ಞಾನ ವರ್ಗಾವಣೆ ವ್ಯವಸ್ಥೆಯಡಿ ಪ್ರತಿವರ್ಷ 22.8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸುವುದಾಗಿ ಹಾಫ್ಕಿನ್ ಬಯೋಫಾರ್ಮಾ ಸಂಸ್ಥೆಯು ಸ್ಪಷ್ಟಪಡಿಸಿದೆ. ಜೈವಿಕ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಆತ್ಮನಿರ್ಭರ್ ಭಾರತ್ 3.0 ಮಿಷನ್ ಕೊವಿಡ್ ಸುರಕ್ಷಾ ಅಡಿಯಲ್ಲಿ ಮೂರು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ನೆರವು ನೀಡಲಾಗುತ್ತಿದೆ.

ಮೂರು ದೇಶೀಯ ಕಂಪನಿಗಳಿಗೆ ತಂತ್ರಜ್ಞಾನ ನೆರವು

ಮೂರು ದೇಶೀಯ ಕಂಪನಿಗಳಿಗೆ ತಂತ್ರಜ್ಞಾನ ನೆರವು

1. ಹಾಫ್ಕಿನ್ ಬಯೋಫಾರ್ಮಾಸಿಟಿಕಲ್ ಕಾರ್ಪೊರೇಷನ್ ಲಿಮಿಟೆಡ್, ಮುಂಬೈ

2. ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಹೈದ್ರಾಬಾದ್ ಮತ್ತು

3. ಭಾರತ್ ಇಮ್ಯುನೊಲಾಜಿಕಲ್ಸ್ ಮತ್ತು ಬಯೋಲಾಜಿಕಲ್ಸ್ ಲಿಮಿಟೆಡ್, ಬುಲಂದಶಹರ್, ಉತ್ತರ ಪ್ರದೇಶ

1 ವರ್ಷದಲ್ಲಿ 22.80 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ

1 ವರ್ಷದಲ್ಲಿ 22.80 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ

ಹಾಫ್ಕಿನ್ ಬಯೋಫಾರ್ಮಾ, ಮಹಾರಾಷ್ಟ್ರ ರಾಜ್ಯದ ಪಿಎಸ್ ಯು ಆಗಿದ್ದು, ಇದು ಹೈದ್ರಾಬಾದ್ ನ ಭಾರತ್ ಬಯೋಟೆಕ್ ಲಿಮಿಟೆಡ್ ನೊಂದಿಗೆ ತಂತ್ರಜ್ಞಾನ ವರ್ಗಾವಣೆ ವ್ಯವಸ್ಥೆಯಡಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಸಿದ್ಧವಾಗುತ್ತಿದೆ. ಕಂಪನಿಯ ಪಾರೆಲ್ ಸಂಕೀರ್ಣದಲ್ಲಿ ಲಸಿಕೆ ಉತ್ಪಾದನೆ ಆಗಲಿದೆ. ಒಂದು ವರ್ಷದಲ್ಲಿ 22.8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಲು ಉದ್ದೇಶಿಸಿದೆ. "ಕೊವ್ಯಾಕ್ಸಿನ್ ಉತ್ಪಾದನೆ ಕೈಗೊಳ್ಳಲು ಹಾಫ್ಕಿನ್ ಬಯೋಫಾರ್ಮಾಗೆ ಕೇಂದ್ರ ಸರ್ಕಾರ 65 ಕೋಟಿ ಮತ್ತು ಮಹಾರಾಷ್ಟ್ರ ಸರ್ಕಾರ 94 ಕೋಟಿ ರೂ. ಅನುದಾನ ಒದಗಿಸಿದೆ'' ಎಂದು ಹಾಫ್ಕಿನ್ ಬಯೋಫಾರ್ಮಾದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಂದೀಪ್ ರಾಥೋಡ್ ಹೇಳಿದ್ದಾರೆ.

ಎರಡು ಹಂತಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾನಾ ಪ್ರಕ್ರಿಯೆ

ಎರಡು ಹಂತಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾನಾ ಪ್ರಕ್ರಿಯೆ

ನಮಗೆ 8 ತಿಂಗಳ ಕಾಲಮಿತಿ ನೀಡಲಾಗಿದ್ದು, ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಎರಡು ಹಂತಗಳ ಪ್ರಕ್ರಿಯೆಯನ್ನು ಒಳಗೊಂಡಿದೆ. ಔಷಧ ವಸ್ತು ಮತ್ತು ಅಂತಿಮ ಔಷಧ ಉತ್ಪನ್ನ. ಔಷಧ ವಸ್ತು ಉತ್ಪಾದನೆಗೆ ನಾವು ಜೈವಿಕ ಸುರಕ್ಷತಾ ಪ್ರಮಾಣ - 3(ಬಿಎಸ್ಎಲ್ 3) ಸೌಕರ್ಯವನ್ನು ನಿರ್ಮಾಣ ಮಾಡುವ ಅಗತ್ಯವಿದೆ. ಹಾಫ್ಕಿನ್ ಈಗಾಗಲೇ ಫಿಲ್ ಫಿನಿಷ್ ಸೌಕರ್ಯವನ್ನು ಹೊಂದಿದೆ" ಎಂದು ಹಾಫ್ಕಿನ್ ವ್ಯವಸ್ಥಾಪಕ ನಿರ್ದೇಶಕ ಡಾ. ಸಂದೀಪ್ ರಾಥೋಡ್ ಹೇಳಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಿಂದ ಅಭಿಯಾನಕ್ಕೆ ನೆರವು

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಿಂದ ಅಭಿಯಾನಕ್ಕೆ ನೆರವು

ಭಾರತದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಬಳಸಿಕೊಳ್ಳುವುದರಿಂದ ಲಸಿಕೆ ಉತ್ಪಾದನಾ ಸಾಮರ್ಥ್ಯ ದೀರ್ಘಾವಧಿವರೆಗೆ ವೃದ್ಧಿಯಾಗುತ್ತದೆ. ಅಲ್ಲದೇ ದೇಶದಲ್ಲಿ ನಡೆಯುತ್ತಿರುವ ಲಸಿಕೆ ವಿತರಣೆ ಅಭಿಯಾನಕ್ಕೆ ನೆರವಾಗಲಿದೆ'' ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷ ಡಾ. ರೇಣು ಸ್ವರೂಪ್ ಹೇಳಿದ್ದಾರೆ.

ಹಾಫ್ಕಿನ್ ಬಯೋಫಾರ್ಮಾಸಿಟಿಕಲ್ ಕಾರ್ಪೊರೇಷನ್ ಲಿಮಿಟೆಡ್ 122 ವರ್ಷಗಳ ಹಿಂದಿನ ಹಾಫ್ಕಿನ್ ಸಂಸ್ಥೆಯ ಒಂದು ವಿಭಜಿತ ಅಂಗ ಸಂಸ್ಥೆಯಾಗಿದೆ. ಹಾಫ್ಕಿನ್ ಸಂಸ್ಥೆ ದೇಶದ ಅತ್ಯಂತ ಹಳೆಯ ಜೈವಿಕ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದ್ದು, ಪ್ಲೇಗ್ ರೋಗಕ್ಕೆ ಲಸಿಕೆ ಕಂಡು ಹಿಡಿದ ರಷ್ಯಾದ ವೈರಾಣು ತಜ್ಞ ಡಾ. ವಾಲ್ಡೆಮರ್ ಹಾಫ್ಕಿನ್ ಅವರ ಹೆಸರನ್ನೇ ಇರಿಸಲಾಗಿದೆ.

English summary
Haffkine Biopharma Will Produce 22.8 Crore Doses Of Covaxin Vaccine Per Annum Under Technology Transfer Arrangement With Bharat Biotech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X