ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ ಹೊತ್ತಿಗೆ ಭಾರತದಲ್ಲಿ 7.40 ಕೋಟಿ ಕೊರೊನಾ ಸೋಂಕಿತರು

|
Google Oneindia Kannada News

ನವದೆಹಲಿ, ನವೆಂಬರ್ 27: ಆಗಸ್ಟ್ ಹೊತ್ತಿಗೆ ಭಾರತವು 7.40 ಕೋಟಿ ಕೊರೊನಾ ಸೋಂಕಿತರನ್ನು ಹೊಂದಿರಲಿದೆ ಎಂದು ಸೆರೊ ಸಮೀಕ್ಷೆ ಹೇಳಿದೆ.

ಹತ್ತು ವರ್ಷ ಮೇಲ್ಪಟ್ಟ ಭಾರತದ ಒಟ್ಟು ಜನಸಂಖ್ಯೆಯ ಶೇ.7ರಷ್ಟು ಮಂದಿ ಕೊರೊನಾ ಸೋಂಕಿಗೆ ತುತ್ತಾಗಲಿದ್ದಾರೆ. ಮುಂಬರುವ ಆಗಸ್ಟ್ ವೇಳೆಗೆ 7.40 ಕೋಟಿ ಮಂದಿ ಕೊರೊನಾ ಸೋಂಕಿಗೆ ಒಳಗಾಗಲಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಸಮೀಕ್ಷೆ ಹೊರಹಾಕಿದೆ.

ಭಾರತದಲ್ಲಿ 43,082 ಕೊರೊನಾ ಸೋಂಕಿತರು ಪತ್ತೆ ಭಾರತದಲ್ಲಿ 43,082 ಕೊರೊನಾ ಸೋಂಕಿತರು ಪತ್ತೆ

ಹರ್ಡ್ ಇಮ್ಯುನಿಟಿ ಪಡೆಯುವವರೆಗೂ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದೆ. ಅಥವಾ ಕನಿಷ್ಠ ಪಕ್ಷ ಕೊರೊನಾ ಲಸಿಕೆಯಾದರೂ ಲಭ್ಯವಾದರೆ ಸೋಂಕು ತನ್ನಿಂತಾನೆ ಕಡಿಮೆಯಾಗಲಿದೆ.

India Had Estimated 74 Million Covid Cases by August

ಸೆರೋ ಸಮೀಕ್ಷೆ ಪ್ರಕಾರ ನಗರದ ಸ್ಲಂಗಳಲ್ಲಿ ಸೋಂಕು ಹೆಚ್ಚಾಗಲಿದೆ. ಈ ಹಿಂದೆ ಯಾವುದೇ ಕೊವಿಡ್ 19 ಸಂಬಂಧಿತ ರೋಗ ಲಕ್ಷಣಗಳು ಕಾಣಿಸಿಕೊಳ್ಳದ ಒಂಬತ್ತು ಮಂದಿಯಲ್ಲಿ ಒಬ್ಬರಲ್ಲಿ ಸಾರ್ಸ್ ಕೋವ್ -2 ಐಜಿಜಿ ಪ್ರತಿಕಾಯಗಳ ಉಪಸ್ಥಿತಿಯನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಆಗಸ್ಟ್ 2020ರ ವೇಳೆಗೆ ಹತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನರಲ್ಲಿ ಕೊರೊನಾ ಸೋಂಕು ಹೊಂದಿದ್ದರು. ಮೇ ಹಾಗೂ ಆಗಸ್ಟ್ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಮೇಗೆ ಹೋಲಿಸಿದರೆ ಆಗಸ್ಟ್ ಪ್ರಕರಣಗಳ ಅನುಪಾತದಲ್ಲಿ ಕಡಿಮೆ ಸೋಂಕು ಇರುವುದು ಗೋಚರಿಸುತ್ತದೆ.

ಮುಂದಿನ ತಿಂಗಳುಗಳಲ್ಲಿ ಹಳ್ಳಿಗಳಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಲಿದೆ. ಆಗಸ್ಟ್ 17ರಿಂದ ಸೆಪ್ಟೆಂಬರ್‌ವರೆಗೆ ನಡೆದ ಸಮೀಕ್ಷೆಯಲ್ಲಿ 10ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇ.6.6ರಷ್ಟು ಕೊರೊನಾ ಸೋಂಕಿತರಿದ್ದರು. ವಯಸ್ಕರಲ್ಲಿ ಶೇ.7.1ರಷ್ಟು ಕಂಡುಬಂದಿತ್ತು.

ಭಾರತದಲ್ಲಿ 43,082 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 492 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 93,09,788 ಪ್ರಕರಣಗಳಿವೆ. ಇದುವರೆಗೂ 1,35,715 ಮಂದಿ ಮೃತಪಟ್ಟಿದ್ದಾರೆ. 4,55,555 ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಯಲ್ಲಿ 39,379 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 87,18,517 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ದಿನದಲ್ಲಿ 5475 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

English summary
Nearly seven per cent of India's population aged ten and above was exposed to SARS-CoV-2, amounting to an estimated 74.3 million infections by August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X