ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸೇತು ಹ್ಯಾಕ್, ಕೇಂದ್ರ ಸರ್ಕಾರ ನೀಡಿದ ಉತ್ತರವೇನು?

|
Google Oneindia Kannada News

ನವದೆಹಲಿ, ಮೇ 7: ಕೊರೊನಾ ವೈರಸ್ ಸೋಂಕಿತರ ನಿಗಾ ವಹಿಸುವ ಹಾಗೂ ಆರೋಗ್ಯವಂತರಿಗೆ ಈ ಬಗ್ಗೆ ಎಚ್ಚರಿಕೆ ನೀಡುವ ಆರೋಗ್ಯ ಸೇತು ಆ್ಯಪ್ ಮೂಲಕ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಸಂಶಯ ಶುರುವಾಗಿದೆ. ಈ ಬಗ್ಗೆ ಹ್ಯಾಕರ್ಸ್ ಗುಂಪೊಂದು ನೀಡಿರುವ ಹೇಳಿಕೆಯನ್ನುಕೇಂದ್ರ ಸರ್ಕಾರ ಅಲ್ಲಗೆಳೆದಿದ್ದು, ಆರೋಗ್ಯ ಸೇತು ಆ್ಯಪ್ ನಲ್ಲಿ ಯಾವುದೇ ಭದ್ರತಾ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರೋಗ್ಯ ಸೇತು ಆಪ್ ನಿಂದಾಗಿ 90 ಮಿಲಿಯನ್ ಜನರ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂದು ವೈಟ್ ಹಾಟ್ ಎಂಬ ಫ್ರಾನ್ಸ್ ಮೂಲದ ಹ್ಯಾಕ್ ಗುಂಪು ಎಚ್ಚರಿಕೆ ನೀಡಿತ್ತು. ಆದರೆ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿ, ವಿವರಣೆಯನ್ನು ಪ್ರಕಟಿಸಿದೆ.

Hacker gets response from Aarogya Setu on privacy issue

ಕೊರೊನಾವೈರಸ್ ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ? ಕೊರೊನಾವೈರಸ್ ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ?

ಆರೋಗ್ಯ ಸೇತು ಆ್ಯಪ್ ಮೂಲಕ ವೈಯಕ್ತಿಕ ಮಾಹಿತಿ ಮೇಲೆ ಕನ್ನ ಹಾಕಲಾಗುತ್ತಿದ್ದು, ಈ ಕುರಿತಾದ ರಾಹುಲ್ ಗಾಂಧಿ ಅವರ ಎಚ್ಚರಿಕೆ ಸರಿ ಎಂದು ಇಲಿಯಟ್ ಆ್ಯಂಡರ್ಸನ್ ಎಂಬ ಹ್ಯಾಕರ್ ಟ್ವೀಟ್ ಮಾಡಿದ್ದರು. ಪಾಕಿಸ್ತಾನ ಕೂಡಾ ಈ ಅಪ್ಲಿಕೇಷನ್ ಬಳಸಿಕೊಂಡು ಗಡಿಯಲ್ಲಿ ಮಾಹಿತಿ ಕನ್ನ ಹಾಕುತ್ತಿದೆಇದಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವಂತೆ ಆರೋಗ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.

English summary
The Aarogya Setu team has said that it was alerted by an ethical hacker of a potential security issue relating to the app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X