ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನವಾಪಿ ವಿವಾದ: ಸುಪ್ರೀಂನಿಂದ ಮಂಗಳವಾರ ಮಸೀದಿ ಸಮಿತಿ ಅರ್ಜಿ ವಿಚಾರಣೆ

|
Google Oneindia Kannada News

ವಾರಣಾಸಿ, ಮೇ 16: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಮಂಗಳವಾರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹಿಂದೂ ಭಕ್ತರು ಹೂಡಿರುವ ಮೊಕದ್ದಮೆಯ ಮೇಲೆ ಮಸೀದಿಯ ಸಮೀಕ್ಷೆಗೆ ವಾರಣಾಸಿಯ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ಸಮಿತಿಯು ಪ್ರಶ್ನಿಸಿದೆ.

ಸತತ ಮೂರನೇ ದಿನವೂ ನಡೆದ ಜ್ಞಾನವಾಪಿ ಮಸೀದಿ ಸಂಕೀರ್ಣದ ನ್ಯಾಯಾಲಯದ ಆದೇಶದ ವೀಡಿಯೊಗ್ರಫಿ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಸೋಮವಾರ ಮುಕ್ತಾಯಗೊಂಡಿದೆ.. ಬೆಳಗ್ಗೆ 8 ಗಂಟೆಗೆ ಆರಂಭವಾದ ಮಸೀದಿ ಸಂಕೀರ್ಣದ ಸಮೀಕ್ಷೆಯು 10:15 ರ ಸುಮಾರಿಗೆ ಮುಕ್ತಾಯವಾಯಿತು.

 ಕಾಶಿ ವಿಶ್ವನಾಥ ಮಂದಿರಕ್ಕೆ ಜಮೀನು ನೀಡಿದ ಜ್ಞಾನವ್ಯಾಪಿ ಮಸೀದಿ ಕಾಶಿ ವಿಶ್ವನಾಥ ಮಂದಿರಕ್ಕೆ ಜಮೀನು ನೀಡಿದ ಜ್ಞಾನವ್ಯಾಪಿ ಮಸೀದಿ

"ಎರಡು ಗಂಟೆಗಳ ಕಾಲ ನ್ಯಾಯಾಲಯದಿಂದ ನಿಗಧಿತ ತಂಡ ಸೋಮವಾರ ಬೆಳಿಗ್ಗೆ 10.15 ರವರೆಗೆ ಸಮೀಕ್ಷೆ ನಡೆಸಿ ಮುಕ್ತಾಯಗೊಳಿಸಿತು. ಎಲ್ಲಾ ಪಕ್ಷಗಳು ಸಮೀಕ್ಷೆಯಿಂದ ತೃಪ್ತರಾಗಿದ್ದಾರೆ" ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಸ್ಥಳೀಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

Gyanvapi Masjid: Supreme Court to hear mosque panel hearing on May 17th

ಕಳೆದ ವಾರ ಮಸೀದಿ ಸಮಿತಿಯ ಆಕ್ಷೇಪದ ನಡುವೆ ಸಮೀಕ್ಷೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಮೀಕ್ಷೆಗಾಗಿ ನ್ಯಾಯಾಲಯವು ನೇಮಿಸಿದ ಅಜಯ್ ಕುಮಾರ್ ಮಿಶ್ರಾ ಆವರಣದೊಳಗೆ ಚಿತ್ರೀಕರಿಸುವ ಅವಕಾಶ ನೀಡದಿರಲು ಸಮಿತಿ ನಿರ್ಧರಿಸಿತ್ತು. ಸಮೀಕ್ಷೆಗಾಗಿ ನೇಮಕಗೊಂಡಿರುವ ಅಜಯ್ ಕುಮಾರ್ ಮಿಶ್ರಾ ಅವರನ್ನು ಬದಲಾಯಿಸಲು ಮಸೀದಿ ಸಮಿತಿಯು ಮನವಿ ಮಾಡಿತ್ತು. ಅವರು ಏಕ ಪಕ್ಷೀಯವಾಗಿ ಸಮೀಕ್ಷೆ ನಡೆಸುತ್ತಾರೆ ಎಂದು ಸಮಿತಿ ವಾದಿಸಿತ್ತು. ಅಜಯ್ ಕುಮಾರ್ ಮಿಶ್ರಾ ಆವರಣದೊಳಗೆ ಚಿತ್ರೀಕರಿಸಲು ಅವಕಾಶ ನೀಡದೇ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸಮೀಕ್ಷೆ ಆರಂಭಿಸಲಾಯಿತು.

ಆದರೆ ನ್ಯಾಯಾಧೀಶರು ನ್ಯಾಯಾಲಯದ ಕಮಿಷನರ್‌ಗೆ ಸಹಾಯ ಮಾಡಲು ಇನ್ನೂ ಇಬ್ಬರು ವಕೀಲರನ್ನು ನೇಮಿಸಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಮಾತ್ರವಲ್ಲದೆ ಸಮೀಕ್ಷೆಗಾಗಿ ಸಂಕೀರ್ಣದ ಕೆಲವು ಪ್ರದೇಶಗಳಿಗೆ ಪ್ರವೇಶಿಸಲು ಕೀಗಳು ಲಭ್ಯವಿಲ್ಲದಿದ್ದರೆ ಬೀಗಗಳನ್ನು ಒಡೆಯಬೇಕು ಎಂದು ಜಿಲ್ಲಾ ನ್ಯಾಯಾಲಯ ಹೇಳಿತ್ತು. ಸಮೀಕ್ಷೆಗೆ ಅವಕಾಶ ನೀಡದಿದ್ದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿತ್ತು.

Gyanvapi Masjid: Supreme Court to hear mosque panel hearing on May 17th

ಕಳೆದ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ಯಥಾಸ್ಥಿತಿಯ ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತ್ತು. ಆದಾಗ್ಯೂ, ಸರ್ವೋಚ್ಚ ನ್ಯಾಯಾಲಯವು ಸಮೀಕ್ಷೆಯ ವಿರುದ್ಧ ಮುಸ್ಲಿಂ ಪಕ್ಷದ ಮನವಿಯನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು. ನ್ಯಾಯಾಲಯದಿಂದ ನೇಮಿಸಲ್ಪಟ್ಟ ಮೂವರು ವಕೀಲ ಕಮಿಷನರ್‌ಗಳು, ಎರಡು ಕಡೆಯಿಂದ ತಲಾ ಐವರು ವಕೀಲರು ಮತ್ತು ವಿಡಿಯೊಗ್ರಫಿ ತಂಡದ ಜೊತೆಗೆ ಸಹಾಯಕರು ಸಮೀಕ್ಷೆ ನಡೆಸಿದ್ದಾರೆ.

ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಸೀದಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ವಿವಾದವಿದೆ. 400 ವರ್ಷಗಳ ಹಿಂದೆ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಅಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುತ್ತಾರೆ ಎಂದು ಹಿಂದೂ ಕಡೆಯವರು ಹೇಳುತ್ತಾರೆ. ಜ್ಞಾನವಾಪಿ ಮಸೀದಿಯನ್ನು ಅಂಜುಮನ್-ಎ-ಇಂತಜಾಮಿಯಾ ಸಮಿತಿಯು ನಡೆಸುತ್ತಿದೆ. 1991ರಲ್ಲಿ ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಶ್ವೇಶ್ವರ್ ಭಗವಾನ್ ಪರವಾಗಿ ಅರ್ಜಿ ಸಲ್ಲಿಸಲಾಗಿದ್ದು, ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ವಿಶ್ವನಾಥ ದೇವರ ದೇಗುಲವಿದ್ದು, ಶೃಂಗಾರ್ ಗೌರಿಯನ್ನು ಪೂಜಿಸಲಾಗುತ್ತಿತ್ತು. ಜ್ಞಾನವಾಪಿಸಂಕೀರ್ಣವನ್ನು ಮುಸ್ಲಿಂ ಕಡೆಯಿಂದ ತೆರವು ಮಾಡಿ ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಾರಣಾಸಿಯ ಜ್ಞಾನವಾಪಿ ಕಾಂಪ್ಲೆಕ್ಸ್‌ನಲ್ಲಿರುವ ಬಾಬಾ ವಿಶ್ವನಾಥನ ದೇವಸ್ಥಾನ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಇದು.

(ಒನ್ಇಂಡಿಯಾ ಸುದ್ದಿ)

English summary
Supreme Court to hear Gyanvapi Masjid committee's plea against video survey tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X