ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 20ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜ್ಞಾನವಾಪಿ ಪ್ರಕರಣ ವಿಚಾರಣೆ

|
Google Oneindia Kannada News

ಹೊಸದಿಲ್ಲಿ ಮೇ 19: ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 19) ಮಧ್ಯಾಹ್ನ 3 ಗಂಟೆಗೆ ನಡೆಸಲಿದೆ. ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ತಡೆ ನೀಡಲಾಗಿದೆ. ವಾರಣಾಸಿ ನ್ಯಾಯಾಲಯವು ಈ ಪ್ರದೇಶವನ್ನು ಸೀಲ್ ಮಾಡಲು ಆದೇಶಿಸಿದೆ. 'ಶಿವಲಿಂಗ' ಕಂಡುಬಂದಿದೆ ಎಂದು ಹೇಳಲಾದ ವಝುಖಾನಾ (ಅಬ್ಲೀಶನ್ ಪ್ರದೇಶ) ಅನ್ನು ಮುಸ್ಲಿಂಮರು ನೆಲಸಮಗೊಳಿಸಬಹುದು ಎಂಬ ಭಯದ ನಡುವೆ ಈ ಕ್ರಮವನ್ನು ಕೈಗೊಂಡಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಸಮೀಕ್ಷೆಯ ಸಮಯದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬುಧವಾರ, ಮೇ 18 ರಂದು ಅಧಿಕಾರಿಗಳು ಈ ಪ್ರದೇಶಕ್ಕೆ ಹೋಗುವ ಬಾಗಿಲುಗಳಿಗೆ ಬೀಗಗಳನ್ನು ಹಾಕುವ ಮೂಲಕ ಎಲ್ಲರಿಗೂ ವಝುಖಾನಾವನ್ನು ನಿರ್ಬಂಧಿಸಿದ್ದಾರೆ.

ಜ್ಞಾನವಾಪಿ ಮಸೀದಿ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆಜ್ಞಾನವಾಪಿ ಮಸೀದಿ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇಗುಲದ ಸಂಕೀರ್ಣದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡದಂತೆ ತಡೆಯಲು, ಸಿಆರ್‌ಪಿಎಫ್ ಸಿಬ್ಬಂದಿ ವಝುಖಾನಾ ಬಾಗಿಲುಗಳಲ್ಲಿ ಬೀಡುಬಿಟ್ಟಿದ್ದಾರೆ. ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಉಪ ಎಸ್‌ಪಿ ಶ್ರೇಣಿಯ ಅಧಿಕಾರಿ ಮತ್ತು ಸಿಆರ್‌ಪಿಎಫ್ ಕಮಾಂಡೆಂಟ್ ನೋಡಿಕೊಳ್ಳುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ

ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ

ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆಯ ವರದಿಯನ್ನು ವಾರಣಾಸಿ ನ್ಯಾಯಾಲಯದ ಮುಂದೆ ಗುರುವಾರ ಮಂಡಿಸಲಾಯಿತು. ಈ ವೇಳೆ ಎರಡೂ ಕಡೆಯ ಜನರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯ ನೇಮಿಸಿದ ವಿಶೇಷ ಸಹಾಯಕ ಆಯುಕ್ತ ಅಡ್ವೊಕೇಟ್ ವಿಶಾಲ್ ಸಿಂಗ್ ಪ್ರಕಾರ, ಅವರು ಮುಚ್ಚಿದ ಕವರ್‌ನಲ್ಲಿ ವಿಡಿಯೊ ಚಿಪ್‌ನಲ್ಲಿ ವರದಿಯನ್ನು ಸಲ್ಲಿಸಿದ್ದಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ಕೂಡ ಗುರುವಾರ ವಿಚಾರಣೆ ನಡೆಸಿತು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾದ ಕೂಡಲೇ ಹಿಂದೂ ಪರ ವಕೀಲ ವಿಷ್ಣು ಜೈನ್ ಅದನ್ನು ಮುಂದೂಡುವಂತೆ ಮನವಿ ಮಾಡಿದರು. ಅಲ್ಲದೆ ಶುಕ್ರವಾರದವರೆಗೆ ಪ್ರತ್ಯುತ್ತರ ಸಲ್ಲಿಸಲು ಕಾಲಾವಕಾಶ ಕೋರಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಈ ವಿಷಯವನ್ನು ತಕ್ಷಣವೇ ಕೇಳಬೇಕು ಎಂದು ಮಸೀದ್ ಸಮಿತಿ ಕೇಳಿತು. ನಿನ್ನೆ ಹಿಂದೂಗಳ ವಾದವನ್ನು ಸ್ವೀಕರಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನಾಳೆ ನಡೆಸಲಿದೆ. ಆದರೆ ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ನ್ಯಾಯಾಲಯ ತಡೆ ನೀಡಲಾಗಿದೆ.

ಎರಡೂ ಕಡೆಯ ವಕೀಲರು ಹಾಜರು

ಎರಡೂ ಕಡೆಯ ವಕೀಲರು ಹಾಜರು

ಸಹಾಯಕ ನ್ಯಾಯಾಲಯದ ಕಮಿಷನರ್ ಅಜಯ್ ಪ್ರತಾಪ್ ಸಿಂಗ್ ಪ್ರಕಾರ, ನಿನ್ನೆ ವಾರಣಾಸಿ ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗದ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿ ವರದಿಯನ್ನು ಸಲ್ಲಿಸಲಾಗಿದೆ. ಇದು ಸುಮಾರು 10-15 ಪುಟಗಳಷ್ಟು ಉದ್ದವಾಗಿದೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ವೇಳೆ ಎರಡೂ ಕಡೆಯ ವಕೀಲರು ಹಾಜರಿದ್ದರು.

'ಆ ಕಾಲದಲ್ಲಿ ಕರೆಂಟು ಇರಲಿಲ್ಲ ಕಾರಂಜಿ ಹೇಗೆ ಬಂತು?'

'ಆ ಕಾಲದಲ್ಲಿ ಕರೆಂಟು ಇರಲಿಲ್ಲ ಕಾರಂಜಿ ಹೇಗೆ ಬಂತು?'

ಅದೇ ಸಮಯದಲ್ಲಿ, ಮಸೀದಿಯ ವಜುಖಾನಾದಲ್ಲಿ ಶಿವಲಿಂಗವಿದೆ ಎಂದು ಹಿಂದೂಗಳು ಹೇಳಿಕೊಳ್ಳುತ್ತಿದ್ದಾರೆ, ಆದರೆ ಮುಸ್ಲಿಂಮರು ಅದರ ಮೇಲೆ ವಿಭಿನ್ನವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಶಿವಲಿಂಗವಲ್ಲ ಕಾರಂಜಿ, ಬಹಳ ದಿನಗಳಿಂದ ಮುಚ್ಚಿ ಹೋಗಿದೆ ಎಂದಿದ್ದಾರೆ. ಈ ವೇಳೆ ಹಿಂದೂಗಳು, ಆ ಸಮಯದಲ್ಲಿ ಕರೆಂಟು ಇರಲಿಲ್ಲ ಕಾರಂಜಿ ಎಲ್ಲಿಂದ ಮಾಡಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿವಲಿಂಗದ ಜಾಗಕ್ಕೆ ಮೊಹರು ಹಾಕಲಾಗಿದೆ.

400 ವರ್ಷಗಳ ದೇವಾಲಯ

400 ವರ್ಷಗಳ ದೇವಾಲಯ

ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಸೀದಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ವಿವಾದವಿದೆ. 400 ವರ್ಷಗಳ ಹಿಂದೆ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು, ಅಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡುತ್ತಾರೆ ಎಂದು ಹಿಂದೂ ಕಡೆಯವರು ಹೇಳುತ್ತಾರೆ. ಜ್ಞಾನವಾಪಿ ಮಸೀದಿಯನ್ನು ಅಂಜುಮನ್-ಎ-ಇಂತಜಾಮಿಯಾ ಸಮಿತಿಯು ನಡೆಸುತ್ತಿದೆ. ಈ ಬಗ್ಗೆ 1991ರಲ್ಲಿ ವಾರಣಾಸಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು, ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ವಿಶ್ವನಾಥ ದೇವರ ದೇಗುಲವಿದ್ದು, ಶೃಂಗಾರ್ ಗೌರಿಯನ್ನು ಪೂಜಿಸಲಾಗುತ್ತಿತ್ತು ಎನ್ನಲಾಗಿದೆ. ಜ್ಞಾನವಾಪಿಸಂಕೀರ್ಣವನ್ನು ಮುಸ್ಲಿಂ ಕಡೆಯಿಂದ ತೆರವು ಮಾಡಿ ಹಿಂದೂಗಳ ಸುಪರ್ದಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವಾರಣಾಸಿಯ ಜ್ಞಾನವಾಪಿ ಕಾಂಪ್ಲೆಕ್ಸ್‌ನಲ್ಲಿರುವ ಬಾಬಾ ವಿಶ್ವನಾಥನ ದೇವಸ್ಥಾನ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಇದಾಗಿದೆ.

English summary
Supreme Court will hear the Gyanvapi Mosque case on Friday at 3 pm. The court has also stayed the hearing in Varanasi court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X